Asianet Suvarna News Asianet Suvarna News

SENSEX 1170 ಅಂಕ ಕುಸಿತ : Paytm ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ!

*SENSEX ಸೋಮವಾರ 1170 ಅಂಕಗಳ ಭಾರೀ ಕುಸಿತ 
*Aramco Deal ರದ್ದು, RILಗೆ 70 ಸಾವಿರ ಕೋಟಿ ನಷ್ಟ
*ಪೇಟಿಎಂ ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ
 

Sensex ends 1170 points lower amid deep sell off 8 lakh crores loss for investors mnj
Author
Bengaluru, First Published Nov 23, 2021, 1:28 PM IST
  • Facebook
  • Twitter
  • Whatsapp

ಮುಂಬೈ(ನ.23): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (BSE SENSEX) ಸೋಮವಾರ 1170 ಅಂಕಗಳ ಭಾರೀ ಕುಸಿತ ಕಂಡು 58465 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕಳೆದ ಏ.12ರ ನಂತರದ ಗರಿಷ್ಠ ದೈನಂದಿನ ಕುಸಿತವಾಘಿದೆ. ಇದರೊಂದಿಗೆ ಹೂಡಿಕೆದಾರರ (Investors) ಸಂಪತ್ತು ಒಂದೇ ದಿನದಲ್ಲಿ 8 ಲಕ್ಷ ಕೋಟಿ ರು.ನಷ್ಟುಇಳಿಕೆಯಾಗಿದೆ. ಹಲವು ದೇಶಗಳಲ್ಲಿ ಕೋವಿಡ್‌ (Covid-19) ಪ್ರಮಾಣ ಭಾರೀ ಏರಿಕೆಯಾಗುತ್ತಿರುವುದು, ಲಾಕ್ಡೌನ್‌ ಜಾರಿ, 3 ಕೃಷಿ ಕಾಯ್ದೆ ರದ್ದು, ರಿಲಯನ್ಸ್‌ ಮತ್ತು ಆಮ್‌ರ್‍ಕೋ ನಡುವಿನ ಒಪ್ಪಂದದಲ್ಲಿ ಬಿರುಕು, ಹಣದುಬ್ಬರ ಏರಿಕೆಯ ಭೀತಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು ಎನ್ನಲಾಗಿದೆ.

ಸತತ 2ನೇ ದಿನ ಕುಸಿತ: ಪೇಟಿಎಂ ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ

ಸತತ 2ನೇ ವಹಿವಾಟು ದಿನವಾದ ಸೋಮವಾರ ಪೇಟಿಎಂ ಕಂಪನಿ (Paytm) ಷೇರು ಮೌಲ್ಯ ಶೇ.13ರಷ್ಟುಭಾರೀ ಇಳಿಕೆ ಕಂಡು 1360 ರು.ನಲ್ಲಿ ಮುಕ್ತಾಯವಾಗಿದೆ. ಇದರಿಂದಾಗಿ ಪೇಟಿಎಂ ಐಪಿಒದಲ್ಲಿ ಹೂಡಿಕೆ ಮಾಡಿದ್ದವರಿಗೆ 2 ದಿನದಲ್ಲೇ ಭರ್ಜರಿ 50000 ಕೋಟಿ ರು.ನಷ್ಟವಾಗಿದೆ. ಪೇಟಿಎಂ 2150 ಮುಖಬೆಲೆಯ ಷೇರುಗಳನ್ನು ಬಿಡುಗಡೆ ಮಾಡಿದ್ದು, ಅದು ನ.18ರಂದು ಷೇರುಪೇಟೆಯಲ್ಲಿ ಲಿಸ್ಟ್‌ ಆಗಿತ್ತು. ಮೊದಲ ದಿನ ಷೇರುಮೌಲ್ಯ ಶೇ.26ರಷ್ಟುಕುಸಿತ ಕಂಡಿತ್ತು. ಸೋಮವಾರ ಮತ್ತೆ ಶೇ.13ರಷ್ಟುಇಳಿಕೆ ಕಂಡಿದೆ.

ಜೀರೋದಿಂದ ಬಂದು ಉದ್ಯಮದಲ್ಲಿ ಹೀರೋ ಆದ ಕತೆ ಇದು

Aramco Deal ರದ್ದು, ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸೌದಿ ಅರಾಮ್ಕೊ ನಡುವಿನ ಒಪ್ಪಂದ ರದ್ದುಗೊಳಿಸಲಾಗಿದೆ ((Reliance Industries and Saudi Aramco Deal Cancelled) ಎಂಬ ಸುದ್ದಿ ಹೊರ ಬಂದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಹೂಡಿಕೆದಾರರ ಜೊತೆಗೆ, ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಮಾರುಕಟ್ಟೆ ಕ್ಯಾಪ್ ಸಹ 70 ಸಾವಿರ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ, ಇದರ ಬೆನ್ನಲ್ಲೇ ಕಂಪನಿಯ ಮಾರುಕಟ್ಟೆ ಮೌಲ್ಯ (Reliance Industries Market Cap) ) 15 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಗೊಂಡಿದೆ. ರಿಲಯನ್ಸ್ ಷೇರುಗಳ ಮಹಾ ಕುಸಿತದ ಪರಿಣಾಮ ಇಡೀ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದೆ ಎಂಬುವುದು ಉಲ್ಲೇಖನೀಯ. ಇಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ (Bombay Stock and National Exchange) ಪ್ರಮುಖ ಸೂಚ್ಯಂಕಗಳು ಸುಮಾರು ಶೇಕಡಾ 2ರಷ್ಟು ಕುಸಿತದೊಂದಿಗೆ ವ್ಯವಹಾರ ಮುಗಿಸಿವೆ.

Amitabh Bachchan; 'ಒಪ್ಪಂದ ಮುರಿದುಕೊಂಡ್ರೂ ಪ್ರಸಾರ'  ಪಾನ್ ಮಸಾಲ ಕಂಪನಿಗೆ ಬಿಗ್‌ಬಿ ನೋಟಿಸ್

ರಿಲಯನ್ಸ್ ಷೇರುಗಳಲ್ಲಿ ಭಾರೀ ಕುಸಿತ

ಇಂದು ರಿಲಯನ್ಸ್ ಷೇರುಗಳಲ್ಲಿ (Reliance Industries) ದಾಖಲೆಯ ಕುಸಿತ ಕಂಡು ಬಂದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ (Sensex) ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡಾ 4.42 ರಷ್ಟು ಕುಸಿದು ಅಂದರೆ, 109.35 ರೂಪಾಯಿಯಷ್ಟು ಇಳಿಕೆಯಾಗಿ ದಿನದಂತ್ಯಕ್ಕೆ 2363.40 ರೂ. ತಲುಪಿದೆ. ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರು 2351 ರೂ.ಗೆ ತಲುಪಿತ್ತು. ಅದಕ್ಕೂ ಮೊದಲು ಕಂಪನಿಯ ಷೇರುಗಳು 2440 ರೂ.ನಲ್ಲಿ ವಹಿವಾಟು ಆರಂಭಿಸಿದ್ದವು. ಶುಕ್ರವಾರ ಪ್ರತಿ ಷೇರಿಗೆ 2472.75 ರೂ. ಆಗಿತ್ತು.

ಯುನಿಟಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ಪಿಎಂಸಿ ವಿಲೀನಕ್ಕೆ ಆರ್‌ಬಿಐ ಪ್ರಸ್ತಾಪ

ಆರ್ಥಿಕವಾಗಿ ತೊಂದರೆಗೊಳಗಾದ ಪಂಜಾಬ್‌ ಮತ್ತು ಮಹಾರಾಷ್ಟ್ರ ಬ್ಯಾಂಕ್‌ (Punjab and Maharashtra Bank) ಅನ್ನು ಯೂನಿಟಿ ಸ್ಮಾಲ್‌ ಫೈನಾನ್ಸ್‌ (Unity Small Finance) ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕರಡು ಯೋಜನೆಯನ್ನು ಆರ್‌ಬಿಐ (Reserve Bank of India) ಸೋಮವಾರ ಬಿಡುಗಡೆ ಮಾಡಿದೆ. ಈ ಕರಡು ಯೋಜನೆಯ ಪ್ರಕಾರ ಪಿಎಂಸಿಯ ಸ್ವತ್ತು ಮತ್ತು ಠೇವಣಿಗಳನ್ನು ಯೂನಿಟಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಸ್ವಾಧೀನ ಪಡಿಸಿಕೊಳ್ಳಲಿದೆ. ಈ ಕುರಿತು ಯಾವುದೇ ಸಲಹೆ, ಸೂಚನೆಗಳನ್ನು ನೀಡಲು ಯುಎಸ್‌ಎಫ್‌ಬಿ ಮತ್ತು ಪಿಎಂಸಿ ಬ್ಯಾಂಕುಗಳ ಠೇವಣಿದಾರರು, ಸದಸ್ಯರು ಮತ್ತು ಸಾಲಗಾರರಿಗೆ ಡಿ.10ರವರೆಗೆ ಅವಕಾಶ ನೀಡಿದೆ. ನಂತರ ಈ ಪ್ರಸ್ತಾಪದ ಕುರಿತು ಆರ್‌ಬಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

Follow Us:
Download App:
  • android
  • ios