ಜೀರೋದಿಂದ ಬಂದು ಉದ್ಯಮದಲ್ಲಿ ಹೀರೋ ಆದ ಕತೆ ಇದು
ಪುಸ್ತಕ ಹರಿದು ಹೋದಾಗ ನೆನಪಾಗೋದು ಫೆವಿಕಲ್, ಇತ್ತೀಚೆಗೆ ಚಪ್ಪಲುಗಳು ತುಂಡಾದಾಗ ನೆನಪಾಗೋದು ಪೆವಿಕ್ವಿಕ್. ಇಂತಹ ಸಂದಿಗ್ಧದಲ್ಲಿ ತಕ್ಷಣ ನಮ್ಮ ಸಹಾಯಕ್ಕೆ ಬರುವ ಈ ಎರಡು ಅಂಟುಗಳ ಬಗ್ಗೆ ಗೊತ್ತು ಆದರೆ ಇದನ್ನು ಕಂಡು ಹಿಡಿದವರು ಯಾರೂ ಎಂಬ ಬಗ್ಗೆ ನಿಮಗೆ ಗೊತ್ತೆ.. ಇಂದು ನಾವು ಶ್ರೀಮಂತರಲ್ಲದ ಸಾಧಾರಣ ಹಿನ್ನೆಲೆಯಿಂದ ಬಂದು, 2013ರ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 45ನೇ ಸ್ಥಾನ ಗಳಿಸಿದ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.
ಜೀವನದಲ್ಲಿ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕಾದುದು ತುಂಬಾ ಅಗತ್ಯ. ಯಾವುದೇ ಸಾಧನೆಗೂ ಆತ್ಮವಿಶ್ವಾಸ ಬೇಕು. ತಮ್ಮ ಬಗ್ಗೆಯೇ ನಂಬಿಕೆ ಇಲ್ಲದ ಅನೇಕರು ತಮ್ಮ ಸೋಲಿಗೆ ವೈಫಲ್ಯಕ್ಕೆ ತಮ್ಮ ಅದೃಷ್ಟವೇ ಸರಿ ಇಲ್ಲವೆಂದು ತಮ್ಮ ಹಣೆಬರಹವನ್ನು ದೂರುತ್ತಾರೆ. ನೀವೇನಾದರೂ ಎಲ್ಲಾ ಅಡ್ಡಿ ಆತಂಕಗಳ ನಡುವೆ ಯಶಸ್ಸಿನ ಗುರಿ ಮುಟ್ಟುವುದು ಹೇಗೆ ಎಂದು ಕಲಿಯಲು ಬಯಸುವುದಾದರೆ ನೀವು ಖಂಡಿತವಾಗಿ ಭಾರತದ ಫೆವಿಕಲ್ ಮೆನ್ ಎಂದು ಕರೆಯಲ್ಪಡುವ ಬಲ್ವಂತ್ ಪರೇಖ್ ಬಗ್ಗೆ ತಿಳಿದುಕೊಳ್ಳಲೇಬೇಕು. ಬಲ್ವಂತ್ ಪರೇಖ್ ಸ್ವಾಂತಂತ್ರ ಬರುವುದಕ್ಕಿಂತಲೂ ಮೊದಲಿನ, ತಲೆಮಾರಿನ ಉದ್ಯಮಿ. ಇವರು ಸ್ವಾತಂತ್ರದ ಬಳಿಕ ಭಾರತದ ಆರ್ಥಿಕ ಸ್ಥಿತಿಯನ್ನು ಸಧೃಡಗೊಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ.
1959ರಲ್ಲಿ ಸ್ಥಾಪನೆಯಾದ ಬಲ್ವಂತ್ ಪರೇಖ್ ಅವರ ಫೆವಿಕಲ್ ಸಂಸ್ಥೆ ಇಂದು ಶತಕೋಟಿ ಡಾಲರ್‌ನ ವ್ಯವಹಾರ ನಡೆಸುತ್ತಿದೆ. ಆದರೆ ಇಲ್ಲಿವರೆಗೆ ತಲುಪಲು ಅವರು ನಡೆದು ಬಂದ ಹಾದಿ ಅಷ್ಟೇನು ಸುಲಭದ್ದಾಗಿರಲಿಲ್ಲ.
ಬಲ್ವಂತ್ ಪರೇಖ್ ಗುಜರಾತ್‌ನ ಭಾವಾನಗರ ಜಿಲ್ಲೆಯ ಸಣ್ಣ ಹಳ್ಳಿಯಾದ ಮಹುವಾದಲ್ಲಿ ಜನಿಸಿದರು. ಎಲ್ಲಾ ಗುಜರಾತಿಗಳಂತೆ ಬಲ್ವಂತ್ ಕೂಡ ಉದ್ಯಮಿಯಾಗುವ ಕನಸು ಕಂಡಿದ್ದರು. ಆದರೆ ಇವರ ಪೋಷಕರು ಇವರು ಕಾನೂನು ಶಿಕ್ಷಣ ಪಡೆದು ವಕೀಲರಾಗಬೇಕೆಂದು ಬಯಸಿದ್ದರು. ಹೀಗಾಗಿ ಕುಟುಂಬಸ್ಥರ ತೀವ್ರ ಒತ್ತಡದಿಂದಾಗಿ ಬಲ್ವಂತ್ ಪರೇಖ್ ಕಾನೂನು ಶಿಕ್ಷಣ ಪಡೆಯುವ ಸಲುವಾಗಿ ಮುಂಬೈಗೆ ಬಂದರು. ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣಕ್ಕೆ ಸೇರಿದರು. ಈ ವೇಳೆ ಇಡೀ ದೇಶವೇ ಮಹಾತ್ಮ ಗಾಂಧಿಯವರ ತತ್ವಗಳಿಂದ ಪ್ರಭಾವಿತಗೊಂಡಿತ್ತು. ಅಸಂಖ್ಯಾತ ಯುವ ತಲೆಮಾರುಗಳು ಕ್ವಿಟ್ ಇಂಡಿಯಾ(Quit India) ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಬಲ್ವಂತ್ ಕೂಡ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಈ ಚಳುವಳಿಯಲ್ಲಿ ಧುಮುಕಿದರು. ನಂತರದಲ್ಲಿ ತನ್ನೂರಿನಲ್ಲೂ ಹಲವು ಹೋರಾಟಗಳಲ್ಲಿ ಭಾಗಿಯಾದ ಪರೇಖ್ ಮತ್ತೆ ಮುಂಬೈಗೆ ತೆರಳಿ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಕಾನೂನು ಓದಿದರು ವಕೀಲಿ ವೃತ್ತಿ ಮಾಡದ ಪರೇಖ್
ಬಲ್ವಂತ್ ಪರೇಖ್ ತಂದೆಗೆ ಮಗ ಅಜ್ಜನಂತೆಯೇ ಕಾನೂನು ತಜ್ಞನಾಗಬೇಕೆಂಬ ಆಸೆ ಇತ್ತು. ಆದರೆ ಪರೇಖ್‌ಗೆ ಇದು ಇಷ್ಟವಿರಲಿಲ್ಲ. ಕನಸುಗಳ ನಗರಿ ಮುಂಬೈನಲ್ಲಿ ಏನಾದರೂ ದೊಡ್ಡದೊಂದನ್ನು ಸಾಧಿಸುವ ಗುರಿಯನ್ನು ಪರೇಖ್ ಹೊಂದಿದ್ದರು. ಇವರೇನು ಬ್ಯುಸಿನೆಸ್‌ನ ವಿದ್ಯಾರ್ಥಿಯಲ್ಲ. ಹಾಗೆಯೇ ಇವರ ಕುಟುಂಬದ ಹಿನ್ನೆಲೆಯಲ್ಲಿಯೂ ಯಾರೂ ಉದ್ಯಮ ರಂಗಕ್ಕೆ ಬಂದಿರಲಿಲ್ಲ. ಆದರೆ ಇವರು ತಮ್ಮ ಕಠಿಣ ಶ್ರಮದಿಂದ ಸಂಪತ್ತನ್ನು ಕಲೆ ಹಾಕಿದರು. ಜೊತೆಗೆ ತಮ್ಮ ಜೀವನಕ್ಕಿಂತಲೂ ದೊಡ್ಡದಾದ ಬ್ರಾಂಡ್‌ನ್ನು ಸ್ಥಾಪಿಸಿದರು. ಕಾನೂನು ಪದವಿ ಸಂಪೂರ್ಣ ಗೊಳಿಸಿ ಬಾರ್ ಕೌನ್ಸಿಲ್‌ನ ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿದ್ದರೂ ಇವರಿಗೆ ವಕೀಲಿ ವೃತ್ತಿ ನಡೆಸಲು ಇಷ್ಟವಿರಲಿಲ್ಲ. ಈ ನಡುವೆ ಕೈಯಲ್ಲಿ ಯಾವುದೇ ಕೆಲಸವಿಲ್ಲದ ಸಂದರ್ಭದಲ್ಲಿ ಇವರಿಗೆ ಕಾಂತಾಬೆನ್ ಜೊತೆ ವಿವಾಹವೂ ನಡೆಯಿತು. ಅದರೊಂದಿಗೆ ಆರ್ಥಿಕ ಸಮಸ್ಯೆಯೂ ಎದುರಾಯಿತು. ಹೀಗಾಗಿ ಆ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಬದುಕು ಸಾಗಿಸಲು ಡೈಯಿಂಗ್ (dying) ಹಾಗೂ ಪ್ರಿಂಟಿಂಗ್ ಪ್ರೆಸ್(printing press)ಗಳಲ್ಲಿ ಕೆಲಸ ಮಾಡಿದರು. ನಂತರ ಮರದ ವ್ಯಾಪಾರಿಯ ಕಚೇರಿಯಲ್ಲಿ ಜವಾನನ ಕೆಲಸಕ್ಕೆ ಸೇರಿದರು.
ಫೆವಿಕಲ್ ಜಾಹೀರಾತಿನಲ್ಲಿ ಯಕ್ಷಗಾನಕ್ಕೆ ಅಪಪ್ರಚಾರ
ಇದು ಅವರಿಗೆ ತುಂಬಾ ಕಷ್ಟದ ದಿನಗಳಾಗಿದ್ದವು. ಈ ದಿನಗಳಲ್ಲಿ ಬಲ್ವಂತ್ ತಮ್ಮ ಪತ್ನಿ ಜೊತೆ ಸ್ನೇಹಿತನ ಗೋದಾಮೊಂದರಲ್ಲಿ ವಾಸ ಮಾಡುತ್ತಿದ್ದರು. ಜವಾನನ(peon) ಕೆಲಸದಲ್ಲಿ ಬರುವ ಸಂಬಳ ಜೀವನ ನಡೆಸಲು ಸಾಲುತ್ತಿರಲಿಲ್ಲ. ಹೀಗಾಗಿ ಒಳ್ಳೆಯ ಅವಕಾಶಕ್ಕಾಗಿ ಅವರು ಎದುರು ನೋಡುತ್ತಿದ್ದರು. ಇದೇ ವೇಳೆ ತಮ್ಮ ಕಾಂಟ್ಯಾಕ್ಟ್‌ಗಳನ್ನು ಬೆಳೆಸಿಕೊಂಡ ಅವರು ಉದ್ಯಮಿಯೊಬ್ಬರಿಗೆ ಆಮದು ಹಾಗೂ ರಪ್ತು(export & import) ಆಗುವ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸವನ್ನು ಆರಂಭಿಸಿದರು. ಇದೇ ರೀತಿ ಬೆಳೆದ ಒಂದು ಪರಿಚಯದಿಂದಾಗಿ ಬಲ್ವಂತ್ ಒಮ್ಮೆ ಜರ್ಮನಿಗೆ ಹೋಗುವ ಅವಕಾಶವನ್ನು ಗಿಟ್ಟಿಸಿಕೊಂಡರು. ಈ ಪ್ರವಾಸದಲ್ಲಿ ಅವರು ವ್ಯವಹಾರದ ಟ್ರಿಕ್ಸ್ ಕಲಿತುಕೊಂಡರು. ಇದು ಮುಂದೆ ಅವರ ನೆರವಿಗೆ ಬಂತು.
ಫೆವಿಕಲ್ ಸ್ಥಾಪನೆ
ಭಾರತದಲ್ಲಿ ಹೋಚ್ಸಟ್(hochsut) ಅನ್ನು ಪ್ರತಿನಿಧಿಸುತ್ತಿದ್ದ ಸಂಸ್ಥೆಯಲ್ಲಿ ಬಲ್ವಂತ್ ಕೆಲಸಕ್ಕೆ ಸೇರಿದರು. ಇದು ಅವರ ಬದುಕಿಗೆ ಮೊದಲ ತಿರುವು ನೀಡಿತ್ತು. ನಂತರ 1954ರಲ್ಲಿ ಅವರು, ಮುಂಬೈನ ಜಾಕೋಬ್ ಸರ್ಕಲ್‌ನಲ್ಲಿ ಪರೇಖ್ ಡೈಚೆಮ್ ಇಂಡಸ್ಟ್ರೀಸ್(Parekh Dichem Industries)ನ್ನು ಸ್ಥಾಪಿಸಿದರು. ಇಲ್ಲಿ ಬಲ್ವಂತ್ ತಮ್ಮ ಸಹೋದರ ಸುಶೀಲ್ ಪರೇಖ್ ಜೊತೆ ಸೇರಿ ಜವಳಿ ಉದ್ಯಮದಲ್ಲಿ ಬಳಸುವ ಪಿಗ್ಮೆಂಟ್ ಎಮಲ್ಷನ್ (Pigment Emulsion)ಅನ್ನು ತಯಾರಿಸಲು ಶುರು ಮಾಡಿದರು. ನಂತರ 1959ರಲ್ಲಿ ಪಿಡಿಲಿಟಿಯನ್ನು ಸ್ಥಾಪಿಸಿದರು. ಒಂದು ಕೈಗಾರಿಕಾ ರಾಸಾಯನಿಕ ಸಂಸ್ಥೆಯಾಗಿ ಇವರು ಆ ಸಂದರ್ಭದಲ್ಲಿ ಯಾವುದೇ ಬ್ರಾಂಡ್ ಇಲ್ಲದೇ ಅಂಟ(ಗಮ್)ನ್ನು ಮಾರಲು ಆರಂಭಿಸಿದರು. ನಂತರ ಇದೇ ಫೆವಿಕಲ್ (fevicol)ಆಗಿ ಅಂಟಿಗೆ ಇನ್ನೊಂದು ಹೆಸರಾಗುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ.
Aramco Deal ರದ್ದು, ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!
ಸಣ್ಣ ಅಂಗಡಿಯಿಂದ ಆರಂಭಗೊಂಡ ಅವರ ಫೆವಿಕಲ್ ಪೆಡಿಲಿಟಿ ಇಂಡಸ್ಟ್ರಿಸ್(fevicol pedilite industries) ವ್ಯವಹಾರ, ಭಾರತದ ಅಂಟು ಉದ್ಯಮದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಿ ಶೀಘ್ರದಲ್ಲೇ ಯಶಸ್ಸನ್ನು ಕಂಡಿತು. ನಂತರದಲ್ಲಿ ಪಿಡಿಲಿಟಿ ಇನ್ನೆರಡು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಅದೇ ಫೆವಿಕ್ವಿಕ್ ಹಾಗೂ ಎಂಸಿಲ್. ಇವು ಎರಡೂ ಶೇ.70ರಷ್ಟು ಮಾರುಕಟ್ಟೆ ಷೇರುಗಳನ್ನು ಹೊಂದಿ ಫಿಡಿಲಿಟಿಯನ್ನು ದೇಶದ ಅಂಟು ಉದ್ಯಮದಲ್ಲಿ ಬ್ರಾಂಡ್ ಮಾಡಿವೆ. ಇವರ ಈ ಸಾಧನೆಯನ್ನು ನೋಡಿ ಅನೇಕ ಪ್ರಶಸ್ತಿ ಸನ್ಮಾನಗಳು ಇವರನ್ನರಸಿ ಬಂದಿವೆ.
ಒಟ್ಟಿನಲ್ಲಿ ಶೂನ್ಯದಿಂದ ಬಂದು ಮುಗಿಲೆತ್ತರಕ್ಕೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿ ಅಂಟು ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸಿದ ಬಲ್ವಂತ್ ಪರೇಖ್ ಅವರದ್ದು ಸಣ್ಣ ಸಾಧನೆಯೇನಲ್ಲ... ಇವರ ಈ ಸಾಧನೆ ಸಾವಿರಾರು ಯುವ ಸಮೂಹಕ್ಕೆ ಸ್ಪೂರ್ತಿ ತುಂಬಬಲ್ಲದು.