ಸೆನ್ಸೆಕ್ಸ್ 792 ಅಂಕ ಜಿಗಿತ: ಹೂಡಿಕೆದಾರರ ಸಂಪತ್ತು 2.41 ಲಕ್ಷ ಕೋಟಿ ವೃದ್ಧಿ| 228.50 (ಶೇ.2.11) ಅಂಕಗಳ ಏರಿಕೆಯೊಂದಿಗೆ ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 11,057ರಲ್ಲಿ ವಹಿವಾಟು ಮುಕ್ತಾಯ
ಮುಂಬೈ[ಆ.27]: ಕುಸಿಯುತ್ತಿದ್ದ ಆರ್ಥಿಕತೆಗೆ ಪುನಶ್ಚೇತನ ನೀಡಲು ವಿದೇಶಿ ಮತ್ತು ದೇಶೀಯ ಆಗರ್ಭ ಶ್ರೀಮಂತರ ಮೇಲೆ ಹೇರಲು ಉದ್ದೇಶಿಸಿದ್ದ ಸರ್ಚಾರ್ಜ್ ರದ್ದು ಸೇರಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಮಾಡಿದ ಹಲವು ಘೋಷಣೆಗಳ ಪರಿಣಾಮವಾಗಿ ಮುಂಬೈ ಷೇರು ಸಂವೇದಿ ಸೂಚ್ಯಂಕ ‘ಸೆನ್ಸೆಕ್ಸ್’ ಸೋಮವಾರ 792.96 ಅಂಕಗಳಷ್ಟು ಏರಿಕೆ ಕಂಡಿದೆ.
ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ 2.41 ಲಕ್ಷ ಕೋಟಿ ರು.ನಷ್ಟವೃದ್ಧಿಯಾಗಿದೆ. ಶೇ.2.16 ಏರಿಕೆಯೊಂದಿಗೆ ಸೆನ್ಸೆಕ್ಸ್ 37,494.12 ಅಂಕಗಳಲ್ಲಿ ವಹಿವಾಟು ಮುಗಿಸಿದೆ. 228.50 (ಶೇ.2.11) ಅಂಕಗಳ ಏರಿಕೆಯೊಂದಿಗೆ ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 11,057ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.
ಸೆನ್ಸೆಕ್ಸ್ ಇಷ್ಟೊಂದು ಅಂಕ ಏರಿದ್ದು ಕಳೆದ ಮೂರು ತಿಂಗಳ ಅವಧಿಯಲ್ಲಿ ಇದೇ ಮೊದಲು.
