ನವದೆಹಲಿ(ಏ.17): ಕರ್ನಾಟಕ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಅಜಯ್‌ ಸೇಠ್‌ ಅವರು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಕೊರೋನಾದ ಮೊದಲ ಅಲೆಯಿಂದ ಸುಧಾರಿಸಿಕೊಳ್ಳುತ್ತಿರುವ ಆರ್ಥಿಕತೆಗೆ 2ನೇ ಅಲೆಯ ಸೋಂಕಿನ ತೀವ್ರತೆಯಿಂದ ಕುಸಿತದ ಭೀತಿ ಎದುರಾಗಿರುವಾಗಲೇ ಅಜಯ್‌ ಸೇಠ್‌ ಪದಗ್ರಹಣ ಮಾಡಿದ್ದಾರೆ. ತನ್ಮೂಲಕ ಆರ್ಥಿಕ ಸಚಿವಾಲಯದ ಕಂದಾಯ ಕಾರ್ಯದರ್ಶಿಯಾಗಿ ವರ್ಗಾವಣೆಯಾದ ತರುಣ್‌ ಬಜಾಜ್‌ ಅವರಿಂದ ತೆರವಾದ ಸ್ಥಾನವನ್ನು ಸೇಠ್‌ ಅಲಂಕರಿಸಿದಂತಾಗಿದೆ.

1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸೇಠ್‌ ಅವರು ಈ ಹಿಂದೆ ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕಾಗಿಯೂ ಸೇವೆ ಸಲ್ಲಿಸಿದ್ದರು.