Badshahs New Song: ಮಿಲ್ಕಿ ಬ್ಯೂಟಿ ಹಾಟ್ ಡ್ಯಾನ್ಸ್‌ಗೆ ಸಮಂತಾ ಫುಲ್ ಮಾರ್ಕ್ಸ್ !
ಪುಷ್ಪಾ (Pushpa) ಐಟಂ ಸಾಂಗ್‌ನಲ್ಲಿ ಸಮಂತಾ (Samantha) ಹಾಟ್ ಅವತಾರ ಹೇಗಿತ್ತು ಎಲ್ರೂ ನೋಡಿದ್ದೀವಿ. 'ಓ ಅಂಟಾ ವಾ ಮಾಮ' ಸಾಂಗ್‌ಗೆ ಸ್ಯಾಮ್ ಮೂವ್ಸ್ ಹುಡುಗರ ಹಾರ್ಟಲ್ಲಿ ಕಚಗುಳಿ ಇಟ್ಟಿತ್ತು. ಎಲ್ರೂ ಇದೇ ಬೆಸ್ಟ್ ಐಟಂ ಸಾಂಗ್ ಅಂತ ಅಂದ್ಕೊಳ್ತಿದ್ರೆ, ಸಮಂತಾ ಮಿಲ್ಕಿ ಬ್ಯೂಟಿ ತಮನ್ನಾ (Tamannaah) ಹೊಸ ವೀಡಿಯೋ ಸಾಂಗ್ ಸಖತ್ ಹಾಟ್ ಎಂದಿದ್ದಾರೆ. ವೀಡಿಯೋಗೆ ಉಫ್ ಎಂದು ಕಾಮೆಂಟ್ ಮಾಡಿದ್ದಾರೆ.
ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಮೋಡಿ ಮಾಡಿರುವ ಮಿಲ್ಕಿ ಬ್ಯೂಟಿ ಬಾಲಿವುಡ್ (Bollywood)ನಲ್ಲೂ ಮೋಡಿ ಮಾಡಿದ್ದಾರೆ. ಬಾಲಿವುಡ್‌ನ ಸೆಲೆಬ್ರಿಟಿ ರ‍್ಯಾಪರ್ ಬಾದ್‌ಶಾ ಅವರ ವೀಡಿಯೋ ಸಾಂಗ್‌ನಲ್ಲಿ ನಟಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಬಾದ್ ಷಾ (Badshah) ತಮನ್ನಾ ಭಾಟಿಯಾ (Tamannaah Bhatia) ಜತೆಗೆ ಮಾಡಿರುವ ಹೊಸ ಮ್ಯೂಸಿಕ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ತಬಾಹಿ ಹೆಸರಿನ ಈ ವೀಡಿಯೋ ಸಾಂಗ್ (Video Song)ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಂಟರ್‌ನೆಟ್‌ನಲ್ಲಿ ವೈರಲ್ (Viral) ಆಗ್ತಿದೆ.
ತಮಿಳು, ತೆಲುಗಿನ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ತಮನ್ನಾ ನಟಿಸಿದ್ದಾರೆ. ಪ್ರಖ್ಯಾತ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಭಾಸ್ ಜೊತೆ 'ಬಾಹುಬಲಿ' ಹಾಗೂ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಚಿತ್ರ ತಮನ್ನಾಗೆ ಎಲ್ಲಾ ಕಡೆ ಫೇಮ್ ತಂದುಕೊಟ್ಟಿದೆ. ತಮನ್ನಾ ನಟನೆಗೆ ಎಲ್ಲ ಕಡೆಯಲ್ಲಿಯೂ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಹೀಗಿರುವಾಗ್ಲೇ ಅಭಿನಯದಿಂದ ಕೊಂಚ ದೂರ ಉಳಿದಿದ್ದ ಮಿಲ್ಕೀ ಬ್ಯೂಟಿ ಈಗ ವೀಡಿಯೋ ಸಾಂಗ್‌ನಲ್ಲಿ ಮಿಂಚಿದ್ದಾರೆ.
Oo Antava BTS: ಊ ಅಂಟಾವಾ ಡ್ಯಾನ್ಸ್ ಕಲಿಯೋವಾಗ ಸಮಂತಾಗೆ ನಗುವೋ ನಗು
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತಬಾಹಿ ಮಚಡಿ(Tabahi Machadi)ಸಾಂಗ್ 23 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ತಮನ್ನಾ ಸ್ಟೆಪ್ಟ್, ಬಾದ್ ಷಾ ಸಾಂಗ್ ಸಖತ್ತಾಗಿದೆ ಎಂದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಈ ವೀಡಿಯೋದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ತಮನ್ನಾ ಬಾದ್ ಷಾ ಜತೆ ಮಾಡಿರೋ ಮೊದಲ ಮ್ಯೂಸಿಕ್ ವೀಡಿಯೋ ಇದಾಗಿದ್ದು, ಜನರ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ ಎಂದು ತಮನ್ನಾ ಹೇಳಿದ್ದಾರೆ.
ತಬಾಹಿ ಯಶಸ್ಸನ್ನು ಆಚರಿಸಲು, ತಮನ್ನಾ ಅವರು ಬಾದ್‌ಶಾ ಅವರೊಂದಿಗೆ ಪೋಸ್ ನೀಡಿರುವ ಫೋಟೋವನ್ನು ಇನ್‌ಸ್ಟಾಗ್ರಾನಲ್ಲಿ ಹಂಚಿಕೊಂಡಿದ್ದಾರೆ. ‘ಚಲೋ, ತೋಡಿ ತಬಾಹಿ ಮಚಾತೇ ಹೇ. @badboyshahನ YouTube ಚಾನಲ್‌ನಲ್ಲಿ ತಬಾಹಿ ಮಚಾಡಿ ವೀಡಿಯೊವನ್ನು ವೀಕ್ಷಿಸಿ ಮತ್ತು ಇಷ್ಟಪಡಿ’ ಎಂದು ಪೋಸ್ಟ್ ಮಾಡಿದ್ದಾರೆ.
ಅಚ್ಚರಿಯ ವಿಚಾರ ಏನಪ್ಪಾ ಅಂದ್ರೆ ತಮನ್ನಾ ಈ ಹೊಸ ಸಾಂಗ್‌ಗೆ ಪುಷ್ಪಾ ಸಿನಿಮಾದಲ್ಲಿ 'ಓ ಅಂಟಾ ವಾ ಮಾಮ' ಹಾಡಲ್ಲಿ ಡ್ಯಾನ್ಸ್ ಮಾಡಿ ಹುಡುಗರ ಮನದಲ್ಲಿ ಕಚಗುಳಿ ಇಟ್ಟಿದ್ದ ಸಮಂತಾ ಕಾಮೆಂಟ್ ಮಾಡಿದ್ದಾರೆ. ತಮನ್ನಾ ಭಾಟಿಯಾ, ಬಾದ್‌ಶಾ ಅವರ ಹೊಸ ಹಾಡು ನೆ ತಬಹಿ ಮಚಾಡಿ ಹಾಡಿಗೆ ಸಮಂತಾ ರುತುಪ್ರಭು 'ಉಫ್' ಎಂದು ಕಾಮೆಂಟ್ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ಮುಖಕ್ಕೆ ಎಂಜಲು ಹಚ್ಚಿಕೊಂಡರೆ ಕಾಂತಿ ಹೆಚ್ಚುತ್ತದೆ: ನಟಿ ತಮನ್ನಾ
ಪುಷ್ಪಾ ಸಿನಿಮಾ ಆಲ್ ಓವರ್ ಇಂಡಿಯಾ ಹಿಟ್ ಆದ ಹಾಗೆಯೇ ಈ ಐಟಂ ಸಾಂಗ್‌ನಿಂದ ಸಮಂತಾ ಸಹ ಫೇಮಸ್ ಪಡೆದುಕೊಂಡಿದ್ದರು. ಸದ್ಯ ಸಮಂತಾ ರುತುಪ್ರಭು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಡ್ಯಾನ್ಸ್‌ಗೆ ಉಫ್ ಎಂದು ಕಾಮೆಂಟ್ ಮಾಡಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬಾದ್ ಷಾ ಸಾಮಾನ್ಯವಾಗಿ ಸೆಲೆಬ್ರಿಟಿ ನಟಿಯರ ಜತೆ ರ‍್ಯಾಪ್ ಮ್ಯೂಸಿಕ್ ವೀಡಿಯೋಗಳನ್ನು ಪರಿಚಯಿಸುತ್ತಿರುತ್ತಾರೆ. ಈ ಹಿಂದೆ ಸೌತ್ ಸ್ಟಾರ್ ರಶ್ಮಿಕಾ ಮಂದಣ್ಣ ಜತೆ 'ಟಾಪ್ ಟಕ್ಕರ್' ವೀಡಿಯೋ ಸಾಂಗ್ ಮಾಡಿದ್ದರು. ಇದು ಸಹ ವೈರಲ್ ಆಗಿತ್ತು. ಇತ್ತೀಚಿಗೆ ಬಿಡುಗಡೆಯಾಗಿದ್ದ ಅವರ ಜುಗ್ನು ರ್ಯಾಪ್ ವೀಡಿಯೋ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.