'ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್' ಬಗ್ಗೆ ಗೊತ್ತಾ? ಗ್ರೇಟ್ ಸಕ್ಸಸ್ ಪಡೆದೋರೆಲ್ಲಾ ಇದೇ ದಾರೀಲಿ ಹೋಗಿದ್ದು!
ಹೀಗೆ ವಿಭಿನ್ನವಾಗಿ ಯೋಚಿಸುತ್ತ ಹೋಗುತ್ತಿದ್ದ ಮೊಲ ಒಂದು ಬಾವಿಯ ಬಳಿಗೆ ಬರುತ್ತೆ.. ಆ ಬಾವಿಯೊಳಗೆ ನೋಡಿದಾಗ ಅದಕ್ಕೆ ಅದರದೇ ಪ್ರತಿಬಿಂಬ ಕಾಣುತ್ತೆ.. ಆಗ ಆ ಮೊಲಕ್ಕೆ ಒಂದು ಉಪಾಯ ಹೊಳೆಯಿತು. ಅಂದ್ರೆ ಆ ಮೊಲದ ಉದ್ಧೇಶ..

ಒಂದು ಕಾಡಿನಲ್ಲಿ ಅನೇಕ ಪ್ರಾಣಿಗಳು ವಾಸವಾಗಿದ್ದವು. ಅದರಲ್ಲಿ ಒಂದು ಭಯಂಕರ ಸಿಂಹವೂ ಇತ್ತು. ಆ ಸಿಂಹ ಪ್ರತಿದಿನ ಒಂದು ಪ್ರಾಣಿಯನ್ನು ಹಿಡಿದು ತಿನ್ನುತ್ತಿತ್ತು. ಇದರಿಂದ ಪ್ರತಿದಿನ ಎಲ್ಲಾ ಪ್ರಾಣಿಗಳು ಭಯದಿಂದ ನಡುಗುತ್ತಾ ಬದುಕುತ್ತಿದ್ದವು. ಇದರಿಂದ ತೊಂದರೆ ಅನುಭವಿಸುತ್ತಿದ್ದ ಪ್ರಾಣಿಗಳು ಎಲ್ಲಾ ಸೇರಿ ಮೀಟಿಂಗ್ ಮಾಡಿ, ಲಾಟರಿ ಮೂಲಕ ಆಯ್ಕೆ ಮಾಡುವುದು. ಅದರಲ್ಲಿ ಯಾರ ಹೆಸರು ಬರುತ್ತೋ ಅವರು ಆವತ್ತು ಸಿಂಹದ ಬಳಿಗೆ ಹೋಗುವುದು ಎಂದು ನಿರ್ಧಾರವಾಯ್ತು. ಸಿಂಹ ಕೂಡ ಅದನ್ನು ಒಪ್ಪಿತ್ತು.
ಅದರಂತೆ ಕೆಲವು ದಿನಗಳು ಕಳೆಯಿತು. ಒಂದು ದಿನ ಜಾಣ ಮೊಲವೊಂದರ ಸರದಿ ಬಂತು. ಆದರೆ, ಆ ಮೊಲಕ್ಕೆ ಸಿಂಹದ ಹೊಟ್ಟೆಗೆ ಆಹಾರ ಆಗುವುದು ಬೇಕಿರಲಿಲ್ಲ. ಹೀಗಾಗಿ ಅದು ಬೇರೆ ರೀತಿಯಲ್ಲಿ ಯೋಚನೆ ಮಾಡತೊಡಗಿತು. ಆ ಮೊಲಕ್ಕೆ ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್ ಬಗ್ಗೆ (First principle thinking) ತಿಳಿದಿತ್ತು. ಅದು ಎಲ್ಲಾ ಜನಪ್ರಿಯ ನಂಬಿಕೆಗಳನ್ನು ತಿರಸ್ಕರಿಸಿ, ಏನಾದ್ರೂ ಬದಲಾಯಿಸಲು ಪ್ಲಾನ್ ಮಾಡತೊಡಗಿತು.
Benefits of Lemon Water: ದಿನವಿಡೀ ನಿಂಬೆಹಣ್ಣಿನ ನೀರು ಕುಡಿಯುವುದರಿಂದ ಆಗುವ 10 ಪ್ರಯೋಜನಗಳು
ಹೀಗೆ ವಿಭಿನ್ನವಾಗಿ ಯೋಚಿಸುತ್ತ ಹೋಗುತ್ತಿದ್ದ ಮೊಲ ಒಂದು ಬಾವಿಯ ಬಳಿಗೆ ಬರುತ್ತೆ.. ಆ ಬಾವಿಯೊಳಗೆ ನೋಡಿದಾಗ ಅದಕ್ಕೆ ಅದರದೇ ಪ್ರತಿಬಿಂಬ ಕಾಣುತ್ತೆ.. ಆಗ ಆ ಮೊಲಕ್ಕೆ ಒಂದು ಉಪಾಯ ಹೊಳೆಯಿತು. ಅಂದ್ರೆ ಆ ಮೊಲದ ಉದ್ಧೇಶ ಆ ಸಿಂಹವನ್ನು ಕೊಲ್ಲುವುದಾಗಿತ್ತು. ಹೇಗಾದ್ರೂ ಆ ಸಿಂಹವನ್ನು ಬಾವಿಗೆ ಬೀಳಿಸಿದರೆ ಅದು ಸತ್ತು ಹೋಗುತ್ತೆ ಎಂದು ಮೊಲಕ್ಕೆ ಹೊಳೆಯಿತು. ಬಳಿಕ, ಸಿಂಹದ ಬಳಿಗೆ ಹೋದ ಮೊಲ, 'ಕ್ಷಮಿಸಿ ಮಹಾರಾಜಾ, ಲೇಟ್ ಆಯ್ತು..
ಕಾರಣ, ದಾರಿಯಲ್ಲಿ ಬರುವಾಗ ನಿಮ್ಮಂತೆ ಇರುವ ದೊಡ್ಡ, ಸಮರ್ಥ ಸಿಂಹವನ್ನು ನೋಡಿದೆ. ಆ ಸಿಂಹ ನಿಮ್ಮನ್ನು ನಿಂದಿಸುತ್ತಿತ್ತು.. ನೀವು ಇಲಿಯಂತೆ ದುರ್ಬಲರು ಎಂದು ಹೇಳಿದ.. ನೀವು ಅದರೊಂದಿಗೆ ಹೋರಾಡಿದರೆ ನಿಮ್ಮನ್ನು ತುಂಡರಿಸುತ್ತೇನೆ ಎಂದೂ ಹೇಳಿತು.. 'ಅಷ್ಟು ಕೇಳಿದ್ದೇ ತಡ, ಸಿಂಹಕ್ಕೆ ಭಾರೀ ಕೋಪ ಬಂತು.. ಅದು 'ನಿನ್ನನ್ನು ಆಮೇಲೆ ತಿನ್ನುತ್ತೇನೆ, ಮೊದಲು ಆ ಸಿಂಹವನ್ನು ತೋರಿಸು, ಅದನ್ನು ನೋಡಿಕೊಳ್ಳುತ್ತೇನೆ..' ಎಂದಿತು.
ವೀರ್ಯ ನಾಶ ಮಾಡಿಕೊಂಡ್ರೆ ಆಗೋದೇನು?ಶುಕ್ರ ಧಾತು ಬಗ್ಗೆ ಎಲ್ಲೂ ಸಿಗದ ಅತ್ಯಮೂಲ್ಯ ಮಾಹಿತಿ, ಪುರುಷರಿಗಾಗಿ..
ಅದರಂತೆ ಬಾವಿಯ ಬಳಿ ಬಂದ ಸಿಂಹ ತನ್ನಂತೆ ಇರುವ ತನ್ನದೇ ಪ್ರತಿಬಂಬವಾದ ಮತ್ತೊಂದು ಸಿಂಹವನ್ನು ನೀರಿನಲ್ಲಿ ನೋಡಿತು. ಅದನ್ನು ಕಂಡು ಕೋಪದಿಂದ ಘರ್ಜಿಸಿತು. ಅ ಸಿಂಹ ಕೂಡ ಘರ್ಜಿಸಿದ್ದು ಕಂಡು ಮತ್ತಷ್ಟು ಕೋಪಗೊಂಡು ಆ ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತೆ.. ಮೊಲದ ಪ್ಲಾನ್ ಪ್ರಕಾರವೇ ಸಿಂಹ ಸಾಯುತ್ತೆ, ಉಳಿದೆಲ್ಲ ಪ್ರಾಣಿಗಳೂ ಸಂತೋಷ ಪಡುತ್ತವೆ.
ಈ ಕತೆಯ ನೀತಿ ಏನಂದ್ರೆ, ಕುರಿಗಳ ಹಿಂಡಿನಂತೆ, ಎಲ್ಲರೂ ಹೋದ ದಾರಿಯಲ್ಲಿ ಸಾಗುವುದಕ್ಕಿಂತ ಬೇರೆ ವಿಭಿನ್ನವಾಗಿ ಯೋಚಿಸಿ ಹೊಸ ದಾರಿಯಲ್ಲಿ ಹೋಗುವುದು. ಅದನ್ನೇ 'ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್' ಎನ್ನುವುದು. ಸಮಾಜದಲ್ಲಿ 99% ಜನರು ಸಾಮಾನ್ಯವಾಗಿ ಎಲ್ಲರೂ ಹೋದ ದಾರಿಯಲ್ಲೇ ಸಾಗುತ್ತಾರೆ, ಕಾರಣ ಅದು ಸರಳ. ಆದರೆ, ಕೇವಲ 1% ಜನರು ಹೊಸ ದಾರಿ ಬಗ್ಗೆ ಆಲೋಚಿಸಿ ಹೊಸದನ್ನು ಸಾಧಿಸುತ್ತಾರೆ. ಅಂದಹಾಗೆ, ಈ ಸ್ಟೋರಿ 'ಸಿಜಿಎನ್ ಕ್ರಿಯೇಟಿವಿಟಿ (CGN Creativity) ಯೂ ಟ್ಯೂಬ್ ಚಾನೆಲ್' ವಿಡಿಯೋ. ಈ ಕಥೆಯನ್ನು ಅಲ್ಲಿಂದ ತೆಗೆದುಕೊಳ್ಳಲಾಗಿದೆ. ಲಿಂಕ್ ನೋಡಿ..

