ಕೂದಲು ಕ್ಲೀನ್ ಮಾಡಿಕೊಳ್ಳೋ ವೀಡಿಯೋ ಪೋಸ್ಟ್ ಮಾಡಿ, ಕೋಟ್ಯಾಂತರ ಬೆಲೆ ಬಾಳೋ ಆಸ್ತಿ ಖರೀದಿಸಿದ ನಾರಿ!

ಸಾಮಾಜಿಕ ಜಾಲತಾಣಗಳು ನಿಮ್ಮ ಕನಸನ್ನು ನನಸು ಮಾಡುವ ಸಾಮರ್ಥ್ಯ ಹೊಂದಿವೆ. ಅದಕ್ಕೊಂದಿಷ್ಟು ಸಮಯ ಹಾಗೂ ನಿಮ್ಮ ತಲೆಗೆ ಕೆಲಸ ನೀಡಿದ್ರೆ ನೀವು ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡೋದಲ್ಲದೆ ಅದ್ರಿಂದ ನಿಮ್ಮ ಆಸೆ ಈಡೇರಿಸಿಕೊಳ್ಳಬಹುದು. ಅದಕ್ಕೆ ಈ ಮಹಿಳೆ ಉತ್ತಮ ಉದಾಹರಣೆ.
 

Scottish Content Creator Woman Buys A Home Worth Rs One Crore With Earnings Made From Hair Washing Videos roo

ಇಂಟರ್ನೆಟ್, ಸಾಮಾಜಿಕ ಮಾಧ್ಯಮಗಳು ಈಗ ಜನಪ್ರಿಯತೆ ಮತ್ತು ಮನ್ನಣೆ ಗಳಿಸಲು ಮಾತ್ರ ಸೀಮಿತವಾಗಿಲ್ಲ. ಚೆಂದದ ಫೋಟೋ ಅಥವಾ ವಿಡಿಯೋ ಹಾಕಿದಾಗ ಜನರು ಲೈಕ್ ಕೊಟ್ಟು, ಒಳ್ಳೆ ಕಮೆಂಟ್ ಮಾಡ್ತಾರೆ. ಈ ಕಮೆಂಟ್ ಹಾಗೂ ಲೈಕ್ ಗಳು ಈಗ ನಿಮ್ಮ ಜನಪ್ರಿಯತೆ ಮಾತ್ರ ಹೆಚ್ಚಿಸೋದಿಲ್ಲ. ನಿಮ್ಮ ಗಳಿಕೆಗೂ ದಾರಿಮಾಡಿಕೊಟ್ಟಿವೆ. ಯುಟ್ಯೂಬ್, ಇನ್ಸ್ಟಾಗ್ರಾಮ್ ಮೂಲಕ ಹಣ ಗಳಿಸುವ ಜನರು ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಹಣಗಳಿಸಲು ಇದು ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನ ವಿಡಿಯೋಗಳು ಹೆಚ್ಚು ಹಣಗಳಿಸುತ್ವೆ ಅನ್ನೋದ್ರಲ್ಲಿ ಸಂಶಯವಿಲ್ಲ. 

ಸಾಮಾಜಿಕ ಜಾಲತಾಣ (Social Media ) ಗಳು ಹಣಗಳಿಕೆಗೆ ಅವಕಾಶ ನೀಡ್ತಿದ್ದಂತೆ ಸಾವಿರಾರು ಯುಟ್ಯೂಬ್ ಚಾನೆಲ್, ಇನ್ಸ್ಟಾ ಖಾತೆಗಳು ತೆರೆದುಕೊಂಡಿವೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರು ಇದ್ರಲ್ಲಿ ಹಣ ಗಳಿಸ್ತಿದ್ದಾರೆ. ಪ್ರತಿ ತಿಂಗಳು ಸಾಮಾಜಿಕ ಜಾಲತಾಣದ ಸಹಾಯದಿಂದಲೇ ನಲವತ್ತು – ಐವತ್ತು ಸಾವಿರ ರೂಪಾಯಿ ಗಳಿಸುವ ಜನರಿದ್ದಾರೆ. ಸ್ಕಾಟಿಷ್ (Scottish ) ಮಹಿಳೆ ಕೂಡ ಇದ್ರಲ್ಲಿ ಸೇರಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿರುವ ಮಹಿಳೆ ತಮ್ಮ ಕಂಟೆಂಟ್ ಮೂಲಕ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಆಕೆ ಗಳಿಸುವ ಹಣವೆಷ್ಟು, ಆಕೆ ಯಾವೆಲ್ಲ ವಿಡಿಯೋ ಹಾಕ್ತಾಳೆ ಎನ್ನುವ ಮಾಹಿತಿ ಇಲ್ಲಿದೆ.

ಬಿಲಿಯನೇರ್‌ ಉದ್ಯಮಿಯನ್ನು ವರಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಟ್‌ ನಟಿ!

ಸಾಮಾಜಿಕ ಜಾಲತಾಣದ ಮೂಲಕ ಈಕೆ ಗಳಿಸಿದ್ದೆಷ್ಟು ಗೊತ್ತಾ? : ಸ್ಕಾಟಿಷ್ ಮಹಿಳೆ ಹೆಸರು ಜಿಯಾ ಒಶೌಗ್ನೆಸ್ಸಿ. ಅಸಾಂಪ್ರದಾಯಿಕ ವಿಷಯ ರಚನೆಕಾರರಲ್ಲಿ ಒಬ್ಬಳು. ತನ್ನ ಕೂದಲು ತೊಳೆಯುವ ವೀಡಿಯೊ (Video) ಗಳ ಮೂಲಕ ಲಕ್ಷಾಂತರ ಹಣವಲ್ಲ ಕೋಟಿ ಲೆಕ್ಕದಲ್ಲಿ ಹಣ ಸಂಪಾದನೆ ಮಾಡಿದ್ದಾಳೆ.

30 ವರ್ಷದ ಜಿಯಾ ಒಶೌಗ್ನೆಸ್ಸಿ ಕೂದಲ ರಕ್ಷಣೆ ಹೇಗೆ ಎನ್ನುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. 2021 ರಲ್ಲಿ ಮೊದಲ ಬಾರಿ  ಟಿಕ್‌ಟಾಕ್‌ನಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಳು. ಅವಳ ವೀಡಿಯೊಗಳು ತಕ್ಷಣವೇ ಪ್ರೇಕ್ಷಕರನ್ನು ಆಕರ್ಷಿಸಿತು. ಕೆಲವೇ ದಿನಗಳಲ್ಲಿ ಜಿಯಾ ಒಶೌಗ್ನೆಸ್ಸಿ ಜನಪ್ರಿಯತೆ ಗಳಿಸಲು ಯಶಸ್ವಿಯಾದಳು. ಜಿಯಾಸ್ ಬೌಲ್ ಮೆಥಡ್ ಎಂಬ ಹೆಸರಿಸಿದ ಅವಳ ಆರಂಭಿಕ ವೀಡಿಯೊವನ್ನು 35 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಮದುವೆ, ಎರಡು ಮಕ್ಕಳ ಜವಾಬ್ದಾರಿವಹಿಸಿಕೊಂಡ ಜಿಯಾ, ಕೆಲಸ ಬಿಟ್ಟಿದ್ದಳು. ಮನೆಯಲ್ಲೇ ಬಿಡುವಿನ ಸಮಯದಲ್ಲಿ ಟಿಕ್ ಟಾಕ್ ವಿಡಿಯೋ ರಚನೆಯನ್ನು ಫುಲ್ ಟೈಂ ದ್ಯೋಗವನ್ನಾಗಿ ಮಾಡಿಕೊಂಡಳು. ಈ ವಿಡಿಯೋ ಮೂಲಕವೇ ಈಗ ಜಿಯಾ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾಳೆ.

ಸಾಮಾಜಿಕ ಜಾಲತಾಣದಿಂದ ಬಂದ ಹಣದಲ್ಲಿ ಜಿಯಾ ಮಾಡಿದ್ದೇನು? : ವಿಡಿಯೋ ರಚನೆ ಶುರುಮಾಡುವ ಮೊದಲು ಜಿಯಾ ಸಾಲ ಹೊಂದಿದ್ದಳು. ಆಕೆ ತಲೆ ಮೇಲೆ ಎಂಟು ಲಕ್ಷದ ಸಾಲವಿತ್ತು. ವಿಡಿಯೋ ಶುರು ಮಾಡಿದ್ಮೇಲೆ ಸಾಲವೆಲ್ಲ ತೀರಿದೆ. ತನ್ನ 29ನೇ ವರ್ಷದಲ್ಲಿ ಜಿಯಾ  ಸ್ವಂತ ಮನೆಯನ್ನು ಖರೀದಿಸಿದ್ದಾಳೆ. ಆ ಮನೆಯ ಬೆಲೆ ಅಂದಾಜು 1.8 ಕೋಟಿ ರೂಪಾಯಿ. ಈ ಹಣವೆಲ್ಲ ಸಾಮಾಜಿಕ ಜಾಲತಾಣದಿಂದಲೇ ಬಂದಿದ್ದು ಎನ್ನುತ್ತಾರೆ ಜಿಯಾ.

16ನೇ ವಯಸ್ಸಿಗೆ ಮಗು, ಎರಡು ಮದುವೆ, ಮಗನ ಸಾವು..ಆದ್ರೂ 250 ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ ಶಹನಾಜ್ ಹುಸೇನ್


ಇಷ್ಟೇ ಅಲ್ಲ ಜಿಯಾ ಕೆಲವೊಮ್ಮೆ ಒಂದೇ ವಿಡಿಯೋದಿಂದ ಸಾಕಷ್ಟು ಸಂಪಾದನೆ ಮಾಡ್ತಾರೆ. ಅತಿ ಹೆಚ್ಚು ಅಂದ್ರೆ ನಾಲ್ಕು ಲಕ್ಷ ರೂಪಾಯಿಯನ್ನು ಒಂದು ವಿಡಿಯೋದಿಂದ ಜಿಯಾ ಸಂಪಾದನೆ ಮಾಡಿದ್ದಾಳೆ. ಜಿಯಾ ಆ ವಿಡಿಯೋ ಮಾಡಲು ಬರೀ ಒಂದು ಗಂಟೆ ತೆಗೆದುಕೊಂಡಿದ್ದಳಂತೆ.  ಸಾಮಾಜಿಕ ಜಾಲತಾಣಗಳು ಮನೆಯಲ್ಲಿರುವ ಅದೆಷ್ಟೋ ಮಹಿಳೆಯರಿಗೆ ಆದಾಯದ ಮೂಲವಾಗಿವೆ. ಇದರಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕವೇ ನೀವು ಹಣ ಸಂಪಾದನೆ ಮಾಡಬಹುದು.

Latest Videos
Follow Us:
Download App:
  • android
  • ios