SBI ಗ್ರಾಹಕರು ಬ್ಯಾಂಕಿಂಗ್‌ ಸೇವೆ ಪಡೆಯಲು ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ

SBI Banking: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕರು ಇನ್ನುಮುಂದೆ ಬ್ಯಾಂಕಿಂಗ್‌ ಸೇವೆಗಳನ್ನು ಪಡೆಯಲು ಕಷ್ಟಪಡಬೇಕಿಲ್ಲ. ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಬೇಕಾದ ಬ್ಯಾಂಕಿಂಗ್‌ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಗ್ರಾಹಕರು ಬ್ಯಾಂಕ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಯಿಂದಲೇ ಮಿಸ್‌ ಕಾಲ್‌ ನೀಡಬೇಕು. 

sbi toll free number for banking services

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಜನರ ಅನುಕೂಲಕ್ಕಾಗಿ ಎರಡು ಟೋಲ್‌ ಫ್ರೀ ನಂಬರ್‌ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಫೋನಿನಲ್ಲಿ ಬ್ಯಾಂಕಿನ ಎಲ್ಲ ಸೇವೆಗಳನ್ನು ತುಂಬಾ ಸುಲಭವಾಗಿ ಪಡೆಯಬಹುದು ಮತ್ತು ಏನೇ ಸಮಸ್ಯೆ ಇದ್ದಲ್ಲಿ ಕಸ್ಷಮರ್‌ ಕೇರ್‌ ನಂಬರಿಗೆ ಕಾಲ್‌ ಮಾಡಿ ಮಾತನಾಡಬಹುದು. ಬ್ಯಾಂಕ್‌ ರಜಾ ದಿನಗಳಲ್ಲಿ, ಎರಡನೇ ಶನಿವಾರ ಮತ್ತು ಭಾನುವಾರವೂ ಕೂಡ ಈ ಸೌಲಭ್ಯವನ್ನು ಪಡೆಯಬಹುದು ಹಾಗೂ ಎಲ್ಲರಿಗೂ ಇದರ ಸದುಪಯೋಗ ಪಡೆಯಿರಿ ಎಂದು SBI ನ ಕಛೇರಿ ಮಾಹಿತಿ ನೀಡಿದೆ.1800 1234 ಅಥವಾ 1800 2100 ಗೇ ಕರೆ ಮಾಡುವುದರ ಮೂಲಕ SBIನ ಎಲ್ಲ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು ಎಂದು SBI ನ ಮುಖ್ಯ ಕಛೇರಿ ಮಾಹಿತಿ ನೀಡಿದೆ.

ನಿಮ್ಮ ಬ್ಯಾಕಿಂಗ್‌ ಖಾತೆಗಳ ಅಗತ್ಯಗಳನ್ನು ಪಡೆದುಕೊಳ್ಳಲು 1800 1234 ಅಥವಾ 1834 2100 ಟೋಲ್‌ ಫ್ರೀ ನಂಬರ್‌ ಗಳಿಗೆ ಕರೆ ಮಾಡಿ ಅಥವಾ ಮಿಸ್‌ ಕಾಲ್‌ ಕೊಡಲು ಸೂಚಿಸಿದೆ ಈ ಎಲ್ಲದರ ಸಂಪರ್ಕವನ್ನು ಅನುಕೂಲ ಮಾಡಿದೆ ಎಂದು SBI ನ ಮುಖ್ಯ ಕಛೇರಿ ಭಾನುವಾರ ಟ್ವೀಟ್‌ ಮೂಲಕ ಮಾಹಿತಿ ತಿಳಿಸಿದೆ.

SBI ಗ್ರಾಹಕರು ಈ ಫೋನ್‌ ನಂಬರ್‌ಗಳಿಗೆ ಕರೆ ಮಾಡುವ ಮೂಲಕ ಕೆಳಗಿನ ಸೇವೆಗಳನ್ನು ಪಡೆಯಬಹುದು:
(1.) ಖಾತೆಯ ಬಾಕಿ ಮೊತ್ತ ಮತ್ತು ಕೊನೆಯ ಐದು ವಹಿವಾಟುಗಳ ವಿವರಗಳು
(2.) ಎಟಿಎಂ ಕಾರ್ಡ್ ಬ್ಲಾಕಿಂಗ್ ಮತ್ತು ರವಾನೆಯ ಸ್ಥಿತಿ
(3.) ಹಳೆಯ ATM ಕಾರ್ಡ್‌ ಅನ್ನು ಬ್ಲಾಕ್‌ ಮಾಡಿ ಹೊಸ ATM ಕಾರ್ಡ್ ಗೆ ಅರ್ಜಿ
(4.) ಚೆಕ್‌ ಬುಕ್ ರವಾನೆ ಸ್ಥಿತಿಯನ್ನು ಪರಿಶೀಲಿಸಿ
(5.) ಕಡಿತಗೊಳಿಸಲಾದ ತೆರಿಗೆಯ ವಿವರಗಳು (tax deducted at source), ಇ-ಮೇಲ್ ಮೂಲಕ ಪಡೆಯಬಹುದು.

SBIನ ಟೋಲ್ ಫ್ರೀ ಸಂಖ್ಯೆಯ ಸೇವೆಯನ್ನು ಯಾರೆಲ್ಲ ಪಡೆಯಬಹುದು: SBI ವೆಬ್‌ಸೈಟ್‌ನ ಪ್ರಕಾರ, ಯಾರೇ ಗ್ರಾಹಕರು ಈ ಸಂಖ್ಯೆಗಳನ್ನು ತಾವಿದ್ದ ಸ್ಥಳದಿಂದ ಮತ್ತು ಯಾವುದೇ ಸಮಯದಲ್ಲಿ ಮುಂಬೈ ಪ್ರಧಾನ ಕಛೇರಿ ಬ್ಯಾಂಕ್‌ಗೆ ಡಯಲ್ ಮಾಡಬಹುದು. ಈ ಟೋಲ್ ಫ್ರೀ ಸಂಖ್ಯೆಯು ಎಲ್ಲ ಕಡೆಯ SBIನ ಬಳಕೆದಾರರು ದೇಶದ ಎಲ್ಲಾ ಮೂಲೆ ಮೂಲೆಯಿಂದಲು ದೂರವಾಣಿಗಳು ಮತ್ತು ಮೊಬೈಲ್ ಫೋನ್‌ಗಳಿಂದ ಕರೆ ಮಾಡಬಹುದು ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 

ಇದನ್ನೂ ಓದಿ: Personal Finance : ಗೃಹ- ಕಾರು ಸಾಲಕ್ಕಿಂತ ವೈಯಕ್ತಿಕ ಸಾಲ ಯಾಕೆ ದುಬಾರಿ ಗೊತ್ತಾ?

ಎಸ್‌ಬಿಐನಿಂದ ಎಟಿಎಂ ಬ್ಯಾಂಕಿಂಗ್‌ ಸೌಲಭ್ಯ:

 

ಭಾರತದ ಅತೀದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI) ತನ್ನ ಗ್ರಾಹಕರಿಗೆ ಶೀಘ್ರದಲ್ಲೇ ವಾಟ್ಸಾಪ್  ಬ್ಯಾಂಕಿಂಗ್ (WhatsApp Banking) ಸೇವೆಗಳನ್ನು (Services) ಒದಗಿಸಲಿದೆ. ಎಸ್ ಬಿಐ  ಮುಖ್ಯಸ್ಥ (Chairman) ದಿನೇಶ್ ಖಾರ (Dinesh Khara) ಈ ಬಗ್ಗೆ ಶುಕ್ರವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ಪೋರೇಟ್ ಗ್ರಾಹಕರಿಗೆ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ ಫೇಸ್ (API) ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಕೂಡ ಎಸ್ ಬಿಐ ಸಿದ್ಧತೆ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: SBI Hikes Interest:ಸಾಲದ ಬಡ್ಡಿದರ ಏರಿಸಿದ ಎಸ್ ಬಿಐ; ಸಾಲಗಾರರಿಗೆ ಮತ್ತೆ ಇಎಂಐ ಹೆಚ್ಚಳದ ಬಿಸಿ

ಒಮ್ಮೆ ಎಪಿಐ ಬ್ಯಾಂಕಿಂಗ್ ವ್ಯವಸ್ಥೆಯನ್ನು (API Banking system) ಪ್ರಾರಂಭಿಸಿದ ಬಳಿಕ ಇದು ಬ್ಯಾಂಕ್ ಹಾಗೂ ಗ್ರಾಹಕ ಸರ್ವರ್ ನಡುವೆ ಸಂವಹನ ಕಲ್ಪಿಸಲು ನೆರವು ನೀಡಲಿದೆ. ಅಲ್ಲದೆ, ಎರಡು ವ್ಯವಸ್ಥೆಗಳ ನಡುವೆ ಮಾಹಿತಿಗಳ ಸುಲಭ ವರ್ಗಾವಣೆಗೆ ಸಹಕರಿಸಲಿದೆ. ಅಲ್ಲದೆ, ಗ್ರಾಹಕರಿಗೆ ಸುಭದ್ರ ಹಾಗೂ ತಡೆರಹಿತ ಅನುಭವ ಒದಗಿಸುತ್ತದೆ. 

ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಿಂದ ಎಸ್ ಬಿಐ ಗ್ರಾಹಕರು ಈ ಮೆಸೇಜಿಂಗ್ ವೇದಿಕೆ ಮೂಲಕ ನಿರ್ದಿಷ್ಟ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಅವಕಾಶ ಸಿಗಲಿದೆ. ಒಮ್ಮೆ ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ಬಳಿಕ ಯಾವೆಲ್ಲ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬ ಬಗ್ಗೆ ಖಾರ ಮಾಹಿತಿಗಳನ್ನು ಒದಗಿಸಿಲ್ಲ. 

ಇದನ್ನೂ ಓದಿ: SBI ATM Rules:ಎಸ್ ಬಿಐ ಎಟಿಎಂನಲ್ಲಿ ತಿಂಗಳಿಗೆ ಎಷ್ಟು ಬಾರಿ ಉಚಿತವಾಗಿ ನಗದು ವಿತ್ ಡ್ರಾ ಮಾಡಬಹುದು?

ಪ್ರಸ್ತುತ ಎಸ್ ಬಿಐ ಕಾರ್ಡ್ ವಾಟ್ಸಾಪ್ ಕನೆಕ್ಟ್ (SBI Card WhatsApp connect) ಎಂಬ ಹೆಸರಿನಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಟ್ಸಾಪ್ ಆಧಾರಿತ ಸೇವೆಗಳನ್ನು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಒದಗಿಸುತ್ತಿದೆ. ಈ ವೇದಿಕೆ ಮೂಲಕ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಖಾತೆ ಮಾಹಿತಿ ಪರಿಶೀಲನೆ, ರಿವಾರ್ಡ್ ಪಾಯಿಂಟ್ಸ್ ಚೆಕ್, ಬ್ಯಾಲೆನ್ಸ್, ಪಾವತಿ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆಗೆ ಸೈನ್ ಇನ್ ಆಗಲು ಕಾರ್ಡ್ ಬಳಕೆದಾರರು 9004022022 ಸಂಖ್ಯೆಗೆ ‘OPTIN’ಎಂದು ಟೈಪ್ ಮಾಡಿ ವಾಟ್ಸಾಪ್ ಮೆಸೇಜ್ ಕಳುಹಿಸಬೇಕು. ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 08080945040 ನಂಬ್ರಗೆ ಮಿಸ್ಡ್ ಕಾಲ್ ನೀಡಬಹುದು ಅಥವಾ ಸೇವೆ ಪಡೆಯಲು ಮೊಬೈಲ್ ಅಪ್ಲಿಕೇಷನ್ ಬಳಸಬಹುದು.

Latest Videos
Follow Us:
Download App:
  • android
  • ios