Personal Finance : ಗೃಹ- ಕಾರು ಸಾಲಕ್ಕಿಂತ ವೈಯಕ್ತಿಕ ಸಾಲ ಯಾಕೆ ದುಬಾರಿ ಗೊತ್ತಾ?

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಮಯದಲ್ಲಿ ಸಾಲ ತೆಗೆದುಕೊಳ್ತಾನೆ. ಆದ್ರೆ ಸಾಲದ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ. ಯಾವ ಸಾಲ ಅಗ್ಗ ಹಾಗೆ ಯಾವುದು ದುಬಾರಿ ಎಂಬುದನ್ನು ತಿಳಿಯುವ ಅವಶ್ಯಕತೆ ಈಗಿದೆ.
 

Do You Know Why Home Loan Is So Cheap In Comparison To Car And Home Loan Here Is The Reason

ಸಾಲ (Loan) ತೆಗೆದುಕೊಳ್ಳುವಾಗ ನಾವು ನೂರಾರು ಬಾರಿ ಆಲೋಚನೆ ಮಾಡ್ತೇವೆ. ನಾಲ್ಕೈದು ಬ್ಯಾಂಕ್ (Bank) ಅಥವಾ ಹಣಕಾಸಿನ ಸಂಸ್ಥೆಯಲ್ಲಿ ವಿಚಾರಿಸ್ತೇವೆ. ಬಡ್ಡಿ ಯಾವ ಬ್ಯಾಂಕ್ ನಲ್ಲಿ ಕಡಿಮೆ ಇದೆ ಅಂತಾ ನೋಡ್ತೇವೆ. ಆದ್ರೆ ಕೆಲವರಿಗೆ ಕಾರು ಸಾಲ (Car Loan) ಗಳು ಮತ್ತು ಗೃಹ ಸಾಲ (Home Loan) ಗಳು ವೈಯಕ್ತಿಕ ಸಾಲಗಳಿಗಿಂತ ಹೆಚ್ಚು ಅಗ್ಗವಾಗಿವೆ ಎಂಬುದು ತಿಳಿದಿರೋದಿಲ್ಲ. ಹಾಗೆಯೇ ಏಕೆ ಎಂಬುದೂ ಗೊತ್ತಿರೋದಿಲ್ಲ. ವೈಯಕ್ತಿಕ ಸಾಲ (Personal Loan ) ತೆಗೆದುಕೊಳ್ಳಲು ಮುಂದಾದ್ರೆ ನಾವು ಶೇಕಡಾ 10 ರಿಂದ ಶೇಕಡಾ 24 ರವರೆಗಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ  ನಾವು ಗೃಹ ಸಾಲ ಅಥವಾ ಕಾರು ಸಾಲ ತೆಗೆದುಕೊಂಡ್ರೆ ಈ ಸಾಲಗಳನ್ನು ಶೇಕಡಾ 6.5 ರಿಂದ ಶೇಕಡಾ 9 ದರದಲ್ಲಿ ಪಡೆಯಬಹುದು. ವೈಯಕ್ತಿಕ ಸಾಲಗಳು ಏಕೆ ದುಬಾರಿ ಮತ್ತು ಕಾರು-ಗೃಹ ಸಾಲಗಳು ಏಕೆ ಅಗ್ಗ ಎಂಬ ವಿಷ್ಯವನ್ನು ನಾವಿಂದು ಹೇಳ್ತೇವೆ.

ವೈಯಕ್ತಿಕ ಸಾಲ ಯಾಕೆ ದುಬಾರಿ (Expensive) ? : ವೈಯಕ್ತಿಕ ಸಾಲದ ಬಡ್ಡಿ (Interest) ಹೆಚ್ಚಿಸಲು ಮುಖ್ಯ ಕಾರಣ ಅವಧಿ. ವೈಯಕ್ತಿಕ ಸಾಲದ ಅವಧಿ ಕಡಿಮೆ ಇರುತ್ತದೆ.  ಜನರು ಹೆಚ್ಚಾಗಿ 1 ವರ್ಷದಿಂದ 5 ವರ್ಷಗಳವರೆಗೆ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೊಂದೆಡೆ, ವೈಯಕ್ತಿಕ ಸಾಲಗಳಿಗೆ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಯಾವುದನ್ನೂ ಅಡಮಾನ ಇಡದೆ ಸಾಲ ನೀಡಲಾಗುತ್ತದೆ. ಯಾವುದೇ ಕಾರಣದಿಂದ ಬಳಕೆದಾರರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ವೈಯಕ್ತಿಕ ಸಾಲವು ತುಂಬಾ ದುಬಾರಿಯಾಗಿರುತ್ತವೆ.

ಇದನ್ನೂ ಓದಿ: BUSINESS IDEA : ಕಣ್ಣೀರು ತರಿಸೋ ಈರುಳ್ಳಿ ಈ ವ್ಯವಹಾರ ಶುರು ಮಾಡಿ ಹಣಗಳಿಸಿ

ಗೃಹ ಸಾಲ ಏಕೆ ಅಗ್ಗ ? : ಕೈಗೆಟಕುವ ದರದಲ್ಲಿ ಬ್ಯಾಂಕ್‌ಗಳಿಂದ ಗೃಹ ಸಾಲ ದೊರೆಯುತ್ತದೆ. ಈ ದರವು ಸಾಮಾನ್ಯವಾಗಿ ಶೇಕಡಾ 6.5-9ರ ದರದಲ್ಲಿ ಲಭ್ಯವಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಸರ್ಕಾರ ಗೃಹ ಸಾಲವನ್ನು ಉತ್ತೇಜಿಸುತ್ತದೆ. ಗೃಹ ಸಾಲಕ್ಕಾಗಿ ಎಲ್ಲಾ ಬ್ಯಾಂಕ್‌ಗಳು ಮತ್ತು ಎನ್ ಬಿಎಫ್ ಸಿ (NBFC) ಗಳಿಗೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನಿಂದ ಸಾಲಗಳನ್ನು ನೀಡಲಾಗುತ್ತದೆ. ಮನೆ ನಿರ್ಮಾಣದಿಂದ ಅನೇಕರಿಗೆ ಕೆಲಸ ಲಭ್ಯವಾಗುತ್ತದೆ. ಹಾಗೆ ಅನೇಕ ವಸ್ತುಗಳ ಮಾರಾಟವಾಗುತ್ತದೆ. ಮನೆ ಕಟ್ಟುವಾಗ ಇಟ್ಟಿಗೆ, ಮರಳು, ಜಲ್ಲಿ,  ಸಿಮೆಂಟ್ ಹೀಗೆ ಹಲವು ವಸ್ತುಗಳಿಗೆ ಬೇಡಿಕೆ ಬರುತ್ತದೆ. ಹಾಗೆ ಮನೆ ಕಟ್ಟಲು ಕೂಲಿ ಕಾರ್ಮಿಕರ ಅಗತ್ಯವಿರುತ್ತದೆ. ಅಂದರೆ ಇದರಿಂದ ಉದ್ಯೋಗವೂ ಲಭ್ಯವಾಗುತ್ತದೆ.  ಪೂರೈಕೆ ಸರಪಳಿಯು ಸಹ ನಡೆಯುತ್ತದೆ. ಮನೆಯ ನಿರ್ಮಾಣದ ನಂತರ ಅದನ್ನು ಅಲಂಕರಿಸಲು ಕೆಲ ವಸ್ತುಗಳನ್ನು ಬಳಸಲಾಗುತ್ತದೆ. ಅದರಲ್ಲಿ ಮರ, ಕಬ್ಬಿಣ ಸೇರಿದಂತೆ ಅನೇಕ ವಸ್ತು ಸೇರಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರ ಗೃಹ ಸಾಲಕ್ಕೆ ಪ್ರೋತ್ಸಾಹ ನೀಡುತ್ತದೆ.

ಇದನ್ನೂ ಓದಿ: Business Idea: ಅತಿ ಹೆಚ್ಚು ಬೇಡಿಕೆಯಿರೋ ಈ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ

ಕಾರ್ ಲೋನ್ ಅಗ್ಗಕ್ಕೆ ಕಾರಣ : ಕಾರು ಖರೀದಿಸುವಾಗ ನೀವು ಎಷ್ಟು ತೆರಿಗೆ ಪಾವತಿಸುತ್ತೀರಿ ಎಂಬುದನ್ನು ನೀವು ಗಮನಿಸಿ. ಸಾಮಾನ್ಯವಾಗಿ ಕಾರು ಮಾರಾಟದ ಮೇಲೆ ಸರ್ಕಾರವು ಸುಮಾರು ಶೇಕಡಾ 42ರಷ್ಟು ತೆರಿಗೆಯನ್ನು ವಿಧಿಸುತ್ತದೆ. ಹೆಚ್ಚು ಕಾರು ಮಾರಾಟವಾದಷ್ಟೂ ಸರ್ಕಾರಕ್ಕೆ ಹೆಚ್ಚು ಲಾಭ. ಇದಲ್ಲದೆ ಇಲ್ಲಿಯೂ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಸಾಧ್ಯ. ದೇಶದ ಆರ್ಥಿಕತೆಯು ಪ್ರಗತಿಯಲ್ಲಿ ಸಾಗುತ್ತದೆ. ಹಾಗಾಗಿ ಸರ್ಕಾರ ಕಾರು ಸಾಲವನ್ನು ಉತ್ತೇಜಿಸುತ್ತದೆ. ಇದೇ ಕಾರಣಕ್ಕೆ ಕಾರಿನ ಲೋನ್ ಬಡ್ಡಿ ಕೂಡ ಅಗ್ಗವಾಗಿರುತ್ತದೆ. ಬಡ್ಡಿ ಕಡಿಮೆಯಾಗ್ತಿದ್ದಂತೆ ಕಾರ್ ಹಾಗೂ ಬೈಕ್ ಸೇರಿದಂತೆ ವಾಹನ ಖರೀದಿದಾರರ ಸಂಖ್ಯೆ ಹೆಚ್ಚಾಗುತ್ತದೆ. ಖರೀದಿ ಹೆಚ್ಚಾದಂತೆ ತೆರಿಗೆ ಹೆಚ್ಚಾಗುತ್ತದೆ.  

Latest Videos
Follow Us:
Download App:
  • android
  • ios