ದೇಶಾದ್ಯಂತ ಎರಡು ದಿನಗಳ ಕಾರ್ಮಿಕ ಸಂಘಟನೆಗಳ ಮುಷ್ಕರ| ಬ್ಯಾಂಕಿಂಗ್ ಕ್ಷೇತ್ರಕ್ಕೂ ತಟ್ಟಿದ ಭಾರತ್ ಬಂದ್ ಬಿಸಿ| ನಾಳೆ(ಬುಧವಾರ) ಎಸ್‌ಬಿಐನ ಎಲ್ಲಾ ಬ್ರ್ಯಾಂಚ್‌ಗಳೂ ಕಾರ್ಯ ನಿರ್ವಹಿಸಲಿವೆ| ಬಂದ್ ನಡುವೆಯೂ ಕಾರ್ಯ ನಿರ್ವಹಿಸಲು ಎಸ್‌ಬಿಐ ನಿರ್ಧಾರ

ನವದೆಹಲಿ(ಜ.08): ದೇಶಾದ್ಯಂತ ಎರಡು ದಿನಗಳ ಕಾರ್ಮಿಕ ಸಂಘಟನೆಗಳ ಮುಷ್ಕರದ ಫಲವಾಗಿ ಬ್ಯಾಂಕಿಂಗ್ ಕ್ಷೇತ್ರ ಕೊಂಚ ಸಂಕಷ್ಟ ಎದುರಿಸುತ್ತಿದೆ. ಭಾರತ್ ಬಂದ್ ಪರಿಣಾಮವಾಗಿ ಎರಡು ದಿನಗಳ ಕಾಲ ಬ್ಯಾಂಕ್‌ಗಳೂ ಕೂಡ ಕಾರ್ಯ ಸ್ಥಗಿತಗೊಳಿಸಿದ್ದು, ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಈ ಮಧ್ಯೆ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಬ್ಯಾಂಕ್‌ಗಳೂ ಕೂಡ ಮುಷ್ಕರ ನಡೆಸುತ್ತಿದ್ದು, ಇಂದು ಮತ್ತೆ ನಾಳೆ ಬ್ಯಾಂಕ್‌ಗಳು ಬಂದ್ ಆಗಿರಲಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ನಾಳೆ(ಬುಧವಾರ)ಬಂದ್ ನಡೆವೆಯೂ ತನ್ನ ಎಲ್ಲಾ ಬ್ರ್ಯಾಂಚ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದೆ.

ಭಾರತ್ ಬಂದ್‌ನ ಎರಡನೇ ದಿನ ತಾನು ಕಾರ್ಯ ನಿರ್ವಹಿಸಲಿರುವುದಾಗಿ ತಿಳಿಸಿರುವ ಎಸ್‌ಬಿಐ, ಬುಧವಾರದಂದು ಎಂದಿನಂತೆ ತನ್ನೆಲ್ಲಾ ಬ್ರ್ಯಾಂಚ್‌ಗಳು ತೆರೆದಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.