ಸಾಲಗಾರರಿಗೆ ಮತ್ತೆ ಬರೆ; ಬಡ್ಡಿ ದರ ಏರಿಸಿದ SBI, ಇಎಂಐ ಏರಿಕೆ ಗ್ಯಾರಂಟಿ
ಎಸ್‌ಬಿಐನ ಎಂಸಿಎಲ್‌ಆರ್‌ನಲ್ಲಿನ ಬದಲಾವಣೆಯು ವಾಹನ ಸಾಲ, ಗೃಹ ಸಾಲದಂತಹ ಒಂದು ವರ್ಷದ ಎಂಸಿಎಲ್‌ಆರ್‌ಗೆ ಲಿಂಕ್ ಆಗಿರುವ ಎಲ್ಲಾ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ.
ಮುಂಬೈ (ನ.15): ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿ ದರವನ್ನು ಹೆಚ್ಚಿಸಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬರುತ್ತವೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದ ಅವಧಿಗೆ ಎಂಸಿಎಲ್‌ಆರ್ ಅನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ. ಮೂರು ತಿಂಗಳ ಅವಧಿಗೆ ಎಂಸಿಎಲ್‌ಆರ್ ಶೇ.8.50 ರಿಂದ ಶೇ.8.55 ಕ್ಕೆ ಏರಿಕೆಯಾಗಿದೆ. ಆರು ತಿಂಗಳ ದರ ಶೇ.8.85 ರಿಂದ ಶೇ.8.90 ಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಎಂಸಿಎಲ್‌ಆರ್ ಈಗ ಶೇ.9 ಆಗಿದೆ. ಮೊದಲು ಶೇ.8.95 ರಷ್ಟಿತ್ತು. ಸಾಲದ ದರಗಳಲ್ಲಿನ ಈ ಬದಲಾವಣೆ ಈ ಅವಧಿಗಳಿಗೆ ಮಾತ್ರ ಅನ್ವಯಿಸುತ್ತದೆ, ಇತರ ಅವಧಿಗಳಿಗೆ ಎಂಸಿಎಲ್‌ಆರ್ ಬದಲಾಗದೆ ಉಳಿಯುತ್ತದೆ. ಉದಾಹರಣೆಗೆ, ಎರಡು ವರ್ಷಗಳ ಎಂಸಿಎಲ್‌ಆರ್ ಶೇ.9.05 ಮತ್ತು ಮೂರು ವರ್ಷಗಳ ದರ ಶೇ.9.10 ರಷ್ಟು ಉಳಿಯುತ್ತದೆ.
ಎಸ್‌ಬಿಐನ ಎಂಸಿಎಲ್‌ಆರ್‌ನಲ್ಲಿನ ಬದಲಾವಣೆಯು ವಾಹನ ಸಾಲದಂತಹ ಒಂದು ವರ್ಷದ ಎಂಸಿಎಲ್‌ಆರ್‌ಗೆ ಲಿಂಕ್ ಆಗಿರುವ ಎಲ್ಲಾ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ವೈಯಕ್ತಿಕ ಸಾಲ ಪಡೆದವರಿಗೆ ಇದು ಪರಿಣಾಮ ಬೀರುವುದಿಲ್ಲ. ಏಕೆಂದರೆ, ಎಸ್‌ಬಿಐನ ವೈಯಕ್ತಿಕ ಸಾಲದ ದರಗಳು ಬ್ಯಾಂಕಿನ ಎರಡು ವರ್ಷಗಳ ಎಂಸಿಎಲ್‌ಆರ್‌ಗೆ ಲಿಂಕ್ ಆಗಿವೆ.
ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ, ಯುವಕರು 70 ಗಂಟೆ ಕೆಲಸ ಮಾಡಲಿ: ಇನ್ಫಿ ನಾರಾಯಣ ಮೂರ್ತಿ
ಎಂಸಿಎಲ್‌ಆರ್ ಎಂದರೆ ಸಾಲಗ್ರಾಹಕರಿಂದ ವಿಧಿಸಬಹುದಾದ ಕನಿಷ್ಠ ಬಡ್ಡಿ ದರವನ್ನು ನಿರ್ಧರಿಸಲು ಬ್ಯಾಂಕ್‌ಗಳಿಗೆ ಸಹಾಯ ಮಾಡಲು ಆರ್‌ಬಿಐ ನಿಗದಿಪಡಿಸಿದ ಮಾನದಂಡವಾಗಿದೆ. ಇದನ್ನು ಆರ್‌ಬಿಐ 2016 ರಲ್ಲಿ ಪರಿಚಯಿಸಿತು. ಠೇವಣಿಗಳ ವೆಚ್ಚ, ಕಾರ್ಯಾಚರಣೆಯ ವೆಚ್ಚ ಮತ್ತು ಬ್ಯಾಂಕಿನ ಲಾಭಾಂಶದಂತಹ ಅಂಶಗಳ ಆಧಾರದ ಮೇಲೆ ಬ್ಯಾಂಕ್‌ಗಳು ಎಂಸಿಎಲ್‌ಆರ್ ಅನ್ನು ಲೆಕ್ಕಹಾಕುತ್ತವೆ.
ಬೆಂಗಳೂರು ಯುವತಿ ಗುಟ್ಟಾಗಿ ಮದುವೆಯಾದ 54 ವರ್ಷದ ಸ್ವಾಮೀಜಿ, ತಮಿಳುನಾಡು ಮಠದಿಂದ ಕಿಕ್‌ಔಟ್