ಹಿರಿಯ ನಾಗರಿಕರಿಗೆ ಹೊಸ ಸೇವೆ ಪ್ರಾರಂಭಿಸಿದ ಎಸ್ ಬಿಐ; ವಾಟ್ಸ್ ಆ್ಯಪ್ ನಲ್ಲೇ ಸಿಗಲಿದೆ ಪಿಂಚಣಿ ಸ್ಲಿಪ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ  ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಪ್ರಾರಂಭಿಸಿದೆ. ಹಾಗಾದ್ರೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
 

SBI launches new WhatsApp service for senior citizens to get pension slips know steps

ನವದೆಹಲಿ (ನ.19): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹಿರಿಯ ನಾಗರಿಕರಿಗೆ ಹೊಸ ಸೇವೆಯೊಂದನ್ನು ಪರಿಚಯಿಸಿದೆ. ಅದೇ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯುವ ಸೇವೆ. ಇದು ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೇತನ ಸ್ಲಿಪ್ ಪಡೆಯುವ ಕಷ್ಟವನ್ನು ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ಸಮಸ್ಯೆಯಿಲ್ಲದೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯಬಹುದು. ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ 'Hi'ಎಂದು ಕಳುಹಿಸಿದರೆ ಸಾಕು.  ಈ ಹೊಸ ಸೇವೆ ಕುರಿತು ಎಸ್ ಬಿಐ ಚಿತ್ರ ಸಹಿತವಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. 'ಈಗ ನಿಮ್ಮ ಪಿಂಚಣಿ ಸ್ಲಿಪ್ ಅನ್ನು  ವಾಟ್ಸ್ ಆ್ಯಪ್ ಮೂಲಕ ಪಡೆಯಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಅಡಚಣೆರಹಿತ ಸೇವೆ ಪಡೆಯಿರಿ. 9022690226 ಸಂಖ್ಯೆಗೆ ವಾಟ್ಸ್ ಆ್ಯಪ್ ನಲ್ಲಿ 'Hi'ಎಂದು ಕಳುಹಿಸಿ ಈ ಸೇವೆ ಪಡೆಯಿರಿ' ಎಂದು ಎಸ್ ಬಿಐ ಟ್ವೀಟ್ ಮಾಡಿದೆ. ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ. 

ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ?
ಹಂತ 1:ಒಂದು ವೇಳೆ ನೀವು ನಿಮ್ಮ ಖಾತೆಯನ್ನು ನೋಂದಣಿ ಮಾಡಿಸದಿದ್ದರೆ, ವಾಟ್ಸ್ ಆ್ಯಪ್ ನಲ್ಲಿ (WhatsApp) ಎಸ್ ಬಿಐ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಮೊದಲಿಗೆ ಬ್ಯಾಂಕ್ ನೀಡಿರುವ ಸಂಖ್ಯೆ ಮೂಲಕ ನಿಮ್ಮ ಒಪ್ಪಿಗೆ ನೀಡಬೇಕು. ನೋಂದಣಿಯಾಗದ ಗ್ರಾಹಕ ಈ ಸೇವೆ ಬಳಸಲು ಹೋದರೆ 'ಎಸ್ ಬಿಐ  ವಾಟ್ಸ್ ಆ್ಯಪ್ ಬ್ಯಾಂಕಿಂಗ್  ಸೇವೆಗಳನ್ನು ಪಡೆಯಲು ನೀವು ನೋಂದಣಿ ಮಾಡಿಲ್ಲ' ಎಂಬ ಸಂದೇಶ ಬರುತ್ತದೆ. ಈ ಸೇವೆಗಳನ್ನು ಬಳಸಲು ನೋಂದಣಿ ಮಾಡಲು ಹಾಗೂ ನಿಮ್ಮ ಒಪ್ಪಿಗೆ ನೀಡಲು  WAREG A/c No ಎಂದು 917208933148 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ ಎಂಎಸ್ ಕಳುಹಿಸಿ. 
ಹಂತ 2: ಒಮ್ಮೆ ನೋಂದಣಿಯಾದ ಬಳಿಕ ‘Hi SBI’ಎಂದು ಟೈಪ್ ಮಾಡಿ 919022690226ಕ್ಕೆ ವಾಟ್ಸ್ ಆ್ಯಪ್  ಮೆಸೇಜ್ ಕಳುಹಿಸಿ ಅಥವಾ ವಾಟ್ಸ್ ಆ್ಯಪ್  ನಲ್ಲಿ ನಿಮಗೆ ಯಶಸ್ವಿ ನೋಂದಣಿಯಾದ ಬಗ್ಗೆ ಬಂದ ಮೆಸೇಜ್ ಗೆ ಪ್ರತಿಕ್ರಿಯಿಸಿ.

ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ

ಹಂತ 3: ಒಮ್ಮೆ ನೀವು ಮೆಸೇಜ್ ಕಳುಹಿಸಿದ ಬಳಿಕ ನಿಮಗೆ ಈ ರೀತಿ ಪ್ರತ್ಯುತ್ತರ ಬರುತ್ತದೆ.
ಪ್ರಿಯ ಗ್ರಾಹಕರೇ, ಎಸ್ ಬಿಐ ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆಗಳಿಗೆ ಸ್ವಾಗತ. ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆರಿಸಿ ಎಂದು. ಈ ಆಯ್ಕೆಗಳಲ್ಲಿ ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಆಯ್ಕೆಗಳಿರುತ್ತವೆ. ನಿಮಗೆ ಯಾವುದು ಅಗತ್ಯವೂ ಅದನ್ನು ಆಯ್ಕೆ ಮಾಡಿ. 

ಮನೆ ಬಾಡಿಗೆ ಪಾವತಿಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಜೇಬಿಗೆ ಬೀಳುತ್ತೆ ಹೆಚ್ಚುವರಿ ಹೊರೆ

ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ
ಪಿಂಚಣಿದಾರರಿಗೆ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಇತ್ತೀಚೆಗೆ ನೀಡಿದೆ. ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು  ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆ ಪ್ರಾರಂಭದ ಬಗ್ಗೆ ಎಸ್ ಬಿಐ ಟ್ವೀಟ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.


 

Latest Videos
Follow Us:
Download App:
  • android
  • ios