Asianet Suvarna News Asianet Suvarna News

ಎಸ್ ಬಿಐ ಗ್ರಾಹಕರೇ ಗಮನಿಸಿ, ಒಂದೇ ಒಂದು ಮಿಸ್ಡ್ ಕಾಲ್ ನೀಡಿದ್ರೆ ಮಿನಿ ಸ್ಟೇಟ್ಮೆಂಟ್ ಲಭ್ಯ!

ಎಸ್ ಬಿಐ ತನ್ನ ಗ್ರಾಹಕರಿಗೆ ಅನೇಕ ಆನ್ ಲೈನ್ ಸೇವೆಗಳನ್ನು ಪರಿಚಯಿಸಿದ್ದು, ಆ ಮೂಲಕ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆ ತಪ್ಪಿಸಿದೆ. ಮಿನಿ ಸ್ಟೇಟ್ಮೆಂಟ್ ಪಡೆಯಲು ಕೂಡ ಕೇವಲ ಒಂದು ಮಿಸ್ಡ್ ಕಾಲ್ ನೀಡಿದ್ರೆ ಸಾಕು, ಮೊಬೈಲ್ ಗೆ ವಹಿವಾಟಿನ ವಿವರಗಳು ಎಸ್ ಎಂಎಸ್ ರೂಪದಲ್ಲಿ ಬರುತ್ತವೆ. 

SBI Heres how you can get mini statement of past transactions via missed call and SMS
Author
First Published Jan 27, 2023, 2:04 PM IST

ನವದೆಹಲಿ (ಜ.27): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇತ್ತೀಚೆಗೆ ಗ್ರಾಹಕರಿಗೆ ಮನೆಯಿಂದಲೇ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಮೂಲಕ  ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಪರಿಚಯಿಸಿದೆ. ಹಾಗೆಯೇ ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ. ಟೋಲ್ ಫ್ರೀ ಸಂಖ್ಯೆ ಹಾಗೂ ಎಸ್ ಎಂಎಸ್ ಮೂಲಕ ಕೂಡ ಗ್ರಾಹಕರಿಗೆ ಎಸ್ ಬಿಐ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಎಸ್ ಎಂಎಸ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಸೇವೆಗಳನ್ನು ಪಡೆಯಲು ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ಕಳುಹಿಸಬೇಕು. ಎಸ್ ಎಂಎಸ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಸೇವೆಗಳ ಮೂಲಕ ಬ್ಯಾಂಕ್ ಖಾತೆ ಬ್ಯಾಲೆನ್ಸ್ ಮಾಹಿತಿ ಹಾಗೂ ಮಿನಿ ಸ್ಟೇಟ್ಮೆಂಟ್ ಪಡೆಯಬಹುದು. ಎಸ್ ಬಿಐ ಮಿನಿ ಸ್ಟೇಟ್ಮೆಂಟ್ ಪಡೆಯಲು ಗ್ರಾಹಕರಿಗೆ ಅನೇಕ ಆಯ್ಕೆಗಳಿವೆ. ಎಸ್ ಬಿಐ ಕ್ವಿಕ್ ಬ್ಯಾಂಕಿಂಗ್, ಮಿಸ್ಡ್ ಕಾಲ್ ಬ್ಯಾಂಕಿಂಗ್, ಎಸ್ ಎಂಎಸ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಮಿನಿ ಸ್ಟೇಟ್ಮೆಂಟ್ ಪಡೆಯಬಹುದು. ಆದರೆ, ಗ್ರಾಹಕರು ಈ ಸೇವೆಗಳನ್ನು ಪಡೆಯಲು ಬ್ಯಾಂಕ್ ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಸೋದು ಕಡ್ಡಾಯ. 
ನಿಫ್ಟ್ (NEFT), ಆರ್ ಟಿಜಿಎಸ್ ( RTGS), ಐಎಂಪಿಎಸ್ (IMPS) ಹಾಗೂ ಯುಪಿಐ (UPI) ಸೇರಿದಂತೆ ಅನೇಕ ಪಾವತಿ ವಿಧಾನಗಳ  ವಹಿವಾಟಿನ ಮಾಹಿತಿಗಳನ್ನು ಮಿನಿ ಸ್ಟೇಟ್ಮೆಂಟ್ ಒಳಗೊಂಡಿದೆ ಎಂಬುದು ಗ್ರಾಹಕರಿಗೆ ತಿಳಿದೇ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈಕ್ರೋ ಅಥವಾ ಮಿನಿ ಸ್ಟೇಟ್ಮೆಂಟ್ ಬ್ಯಾಂಕ್ ಶಾಖೆಗಳಲ್ಲಿ ಹಾಗೂ ಆನ್ ಲೈನ್ ನಲ್ಲಿ ಲಭಿಸುತ್ತದೆ. 

ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ಮೂಲಕ ಮಿನಿ ಸ್ಟೇಟ್ಮೆಂಟ್
ಗ್ರಾಹಕರು 9223766666 ಸಂಖ್ಯೆಗೆ ಕರೆ ಮಾಡುವ ಅಥವಾ ಮೆಸೇಜ್ ಮಾಡುವ ಮೂಲಕ ಖಾತೆಯ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಬಹುದು. 09223866666 ಸಂಖ್ಯೆಗೆ ನೀವು ಕರೆ ಮಾಡಿದ ತಕ್ಷಣ ಎರಡು ರಿಂಗ್ ಆದ ಬಳಿಕ ಕರೆ ಕಡಿತಗೊಳ್ಳುತ್ತದೆ. ಆಗ ಮೊದಲ ಐದು ವಹಿವಾಟುಗಳ ಮಾಹಿತಿ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಬರುತ್ತದೆ. 

ಉದ್ಯೋಗ ಕಡಿತದ ಈ ದಿನಗಳಲ್ಲಿಆರ್ಥಿಕ ಮುಗ್ಗಟ್ಟು ಎದುರಾದ್ರೆ ಏನ್ ಮಾಡ್ತೀರಾ? ಹೀಗೆ ಸಿದ್ಧತೆ ಮಾಡಿಕೊಳ್ಳಿ

ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್
ಎಸ್ ಬಿಐ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್  (Whatsapp) ಮೂಲಕ ಪಿಂಚಣಿ ಸ್ಲಿಪ್ (Pension slip) ಪಡೆಯುವ ಸೇವೆ ಪ್ರಾರಂಭಿಸಿದೆ. ಇದು ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೇತನ ಸ್ಲಿಪ್ ಪಡೆಯುವ ಕಷ್ಟವನ್ನು ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ಸಮಸ್ಯೆಯಿಲ್ಲದೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯಬಹುದು. ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ 'Hi'ಎಂದು ಕಳುಹಿಸಿದರೆ ಸಾಕು. ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ. 

ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್‌?

ಆನ್ ಲೈನ್ ನಲ್ಲೇ ಶಾಖೆ ಬದಲಾವಣೆ
ನೀವು ಕೂಡ ಎಸ್ ಬಿಐಯಲ್ಲಿ (SBI) ಉಳಿತಾಯ ಖಾತೆ ಹೊಂದಿದ್ದು, ಶಾಖೆ ಬದಲಾಯಿಸಲು ಬಯಸಿದ್ರೆ ಎಸ್ ಬಿಐ (SBI) ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿ ಮುಗಿಸಬಹುದು. ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಗೊತ್ತಿರೋದು ಅಗತ್ಯ. ಹಾಗೆಯೇ ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರೋದು ಅಗತ್ಯ. ಆನ್ ಲೈನ್  ಮೂಲಕವೇ ಬ್ಯಾಂಕ್ ಶಾಖೆ ಬದಲಾವಣೆ ಮಾಡೋದ್ರಿಂದ ಬ್ಯಾಂಕಿಗೆ ಓಡಾಟ ನಡೆಸಬೇಕಾದ ಅಗತ್ಯವಿಲ್ಲ. 

Follow Us:
Download App:
  • android
  • ios