ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಜೂನ್‌ನಲ್ಲಿ ಕೊನೆಗೊಂಡ ಮೊದಲ ತ್ರೈಮಾಸಿಕದ ಅವಧಿಯಲ್ಲಿ 4,876 ಕೋಟಿ ರು. ನಷ್ಟಅನುಭವಿಸಿದೆ.

ವೇತನ ಪರಿಷ್ಕರಣೆ, ಗ್ಯಚ್ಯುಟಿ ಮಿತಿ ಹೆಚ್ಚಳ, ಮರುಪಾವತಿ ಆಗದ ಸಾಲ (ಎನ್‌ಪಿಎ)ಸೇರಿದಂತೆ ಒಟ್ಟಾರೆಯಾಗಿ ಹಿಂದಿನ ತ್ರೈಮಾಸಿಕದಲ್ಲಿ ಎಸ್‌ಬಿಐ ನಷ್ಟಅನುಭವಿಸಿದೆ.

ನೌಕರರ ಮೇಲಿನ ವೆಚ್ಚ ಶೇ.25.68ರಷ್ಟುಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್‌ಬಿಐ 2,006 ಕೋಟಿ ರು. ಲಾಭ ಗಳಿಸಿತ್ತು. ಇದೇ ವೇಳೆ, ಡಿಸೆಂಬರ್‌ ತ್ರೈಮಾಸಿಕದ ವೇಳೆಗೆ ಲಾಭಕ್ಕೆ ಮರಳುವ ವಿಶ್ವಾಸವನ್ನು ಬ್ಯಾಂಕ್‌ ವ್ಯಕ್ತಪಡಿಸಿದೆ.