Asianet Suvarna News Asianet Suvarna News

ಎಸ್ ಬಿಐ ಅಮೃತ್ ಕಲಶ್ ಎಫ್ ಡಿ ಯೋಜನೆ ಅಂತಿಮ ಗಡುವು ಮತ್ತೊಮ್ಮೆ ವಿಸ್ತರಣೆ; ಡಿ.31ರ ತನಕ ಕಾಲಾವಕಾಶ

ಎಸ್ ಬಿಐ ಅಮೃತ್ ಕಲಶ್ ಎಫ್ ಡಿ ಯೋಜನೆ ಅಂತಿಮ ಗಡುವನ್ನು ಎಸ್ ಬಿಐ ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ 2023ರ ಆಗಸ್ಟ್ 15 ಅಂತಿಮ ಗಡುವು ಆಗಿತ್ತು.ಇದನ್ನು ಈಗ ಡಿಸೆಂಬರ್ 31, 2023ರ ತನಕ ವಿಸ್ತರಿಸಲಾಗಿದೆ. 
 

SBI Amrit Kalash FD Scheme Deadline Extended Till Dec 31 2023 anu
Author
First Published Aug 17, 2023, 4:41 PM IST

ನವದೆಹಲಿ (ಆ.17): ಎಸ್ ಬಿಐ ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡಲು ನೀಡಿದ್ದ ಅಂತಿಮ ಗಡುವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಇನ್ನೊಮ್ಮೆ ವಿಸ್ತರಿಸಿದೆ. 2023ರ ಡಿಸೆಂಬರ್ 31ರ ತನಕ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಎಸ್ ಬಿಐ ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡಲು  2023ರ ಆಗಸ್ಟ್ 15ರ ಅಂತಿಮ ಗಡುವು ನೀಡಲಾಗಿತ್ತು. ಈ ಎಫ್ ಡಿ ಯೋಜನೆ ಮೂಲಕ ಹಿರಿಯರು ಹಾಗೂ ಸಾಮಾನ್ಯ ನಾಗರಿಕರಿಗೆ ಎಲ್ಲ ಅವಧಿಗೂ ಉತ್ತಮ ಬಡ್ಡಿದರ ನೀಡಲಾಗುತ್ತಿದೆ.ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಅಂದರೆ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು  ಬ್ಯಾಂಕಿನ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಹೆಚ್ಚುವರಿ ಶೇ.1ರಷ್ಟು ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ.

ಎಸ್ ಬಿಐ ಅಮೃತ್ ಕಲಶ್ ಯೋಜನೆಯನ್ನು  2023ರ ಫೆಬ್ರವರಿ 15 ರಂದು ಪರಿಚಯಿಸಲಾಗಿತ್ತು. ಇದರ ಅವಧಿ 2023ರ ಫೆಬ್ರವರಿಯಿಂದ  2023ರ ಮಾರ್ಚ್ 31ರ ನಡುವೆ ಇತ್ತು. ಆದರೆ, ಆ ಬಳಿಕ ಇದೀಗ ಮೂರನೇ ಬಾರಿ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ. ಅಮೃತ್ ಕಲಶ್ ಎಫ್ ಡಿ ಯೋಜನೆ ಗಡುವು ವಿಸ್ತರಣೆ ಬಗ್ಗೆ ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. 

ಬ್ಯಾಂಕ್ FD ಖಾತೆಯನ್ನು ಆನ್‌ಲೈನಲ್ಲೇ ಸುಲಭವಾಗಿ ಕ್ಲೋಸ್ ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ

ಏನಿದು ಎಸ್ ಬಿಐ ಅಮೃತ್ ಕಲಶ್ ಎಫ್ ಡಿ ಯೋಜನೆ?
ಇದು ನಿಗದಿತ ಅವಧಿಯ ಸ್ಥಿರ ಠೇವಣಿ ಯೋಜನೆಯಾಗಿದೆ. ಈ ಎಫ್ ಡಿ 400 ದಿನಗಳ ಅವಧಿಯನ್ನು ಹೊಂದಿದೆ. ಪ್ರಾರಂಭದಲ್ಲಿ ಇದರ ಅವಧಿ  2023ರ ಫೆಬ್ರವರಿ 15 ಹಾಗೂ 2023ರ ಮಾರ್ಚ್ 31ರ ನಡುವೆ ಇತ್ತು. ಆ ಬಳಿಕ ಎಸ್ ಬಿಐ ಏಪ್ರಿಲ್ 12ರಂದು ಅಮೃತ್ ಕಲಶ್ ಎಫ್ ಡಿ ಯೋಜನೆಯನ್ನು ಮರುಪರಿಚಯಿಸಿದ್ದು, ಜೂನ್ 30, 2023ರ ತನಕ ಜಾರಿಯಲ್ಲಿರಲಿದೆ ಎಂದು ತಿಳಿಸಿತ್ತು. ಆದರೆ, ಆ ಬಳಿಕ ಮತ್ತೊಮ್ಮೆ ಗಡುವನ್ನು ವಿಸ್ತರಿಸಿದ್ದು,  2023ರ ಆಗಸ್ಟ್ 15ರ ತನಕ ಲಭ್ಯವಿರಲಿದೆ ಎಂದು ತಿಳಿಸಿತ್ತು. ಈಗ ಮತ್ತೆ ಈ ಯೋಜನೆ ಅಂತಿಮ ಗಡುವನ್ನು 2023ರ ಡಿಸೆಂಬರ್ 31ರ ತನಕ ವಿಸ್ತರಿಸಲಾಗಿದೆ.ಇದು ಹೊಸದಾಗಿ ಠೇವಣಿ ಇಡಲು ಹಾಗೂ ಮೆಚ್ಯುರ್ ಆಗಿರುವ ಠೇವಣಿಗಳ ನವೀಕರಣಕ್ಕೆ ಕೂಡ ಅನ್ವಯಿಸುತ್ತದೆ. 

Personal Finance : ಶೇ. 7.5ರಷ್ಟು ಬಡ್ಡಿ ಬೇಕಾ? ಈ ಸೇವಿಂಗ್ಸ್ ಟಿಪ್ಸ್ ಟ್ರೈ ಮಾಡಿ

ಅಮೃತ್ ಕಲಶ್ ಎಫ್ ಡಿ ಖಾತೆ ತೆರೆಯೋದು ಹೇಗೆ?
ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಮೃತ್ ಕಲಶ್  ( Amrit Kalash) ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅವಧಿಯಲ್ಲಿ ಪಾವತಿಸಲಾಗುತ್ತದೆ. ಅಮೃತ್ ಕಲಶ್ ಠೇವಣಿ ಯೋಜನೆ ಮೂಲಕ ಸಾಲಕ್ಕೆ (Loan) ಕೂಡ ಅರ್ಜಿ ಸಲ್ಲಿಸಬಹುದು. ಇನ್ನು ಅವಧಿಗೆ ಮುನ್ನ ವಿತ್ ಡ್ರಾ (Withdraw) ಮಾಡಲು ಕೂಡ ಗ್ರಾಹಕರಿಗೆ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಈ ಠೇವಣಿಗೆ ಟಿಡಿಎಸ್ ಕೂಡ ಅನ್ವಯಿಸುತ್ತದೆ. ಇನ್ನು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎನ್ ಆರ್ ಐ (NRI) ಟರ್ಮ್ ಡೆಪಾಸಿಟ್ ಗೆ ಕೂಡ ಈ ಯೋಜನೆ ಅನ್ವಯಿಸುತ್ತದೆ. 

Follow Us:
Download App:
  • android
  • ios