Personal Finance : ಶೇ. 7.5ರಷ್ಟು ಬಡ್ಡಿ ಬೇಕಾ? ಈ ಸೇವಿಂಗ್ಸ್ ಟಿಪ್ಸ್ ಟ್ರೈ ಮಾಡಿ
ಹಣವನ್ನು ಎಷ್ಟು ಹೂಡಿಕೆ ಮಾಡಿದ್ದೇವೆ ಎನ್ನುವ ಜೊತೆಗೆ ಎಲ್ಲಿ ಮಾಡಿದ್ದೇವೆ ಹಾಗೆ ಎಷ್ಟು ಬಡ್ಡಿ ಬರುತ್ತೆ ಎನ್ನುವುದು ಮುಖ್ಯವಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹಣ ಸಿಗ್ಬೇಕು ಎನ್ನುವ ಜನರು ಬುದ್ಧಿವಂತಿಕೆ ಉಪಯೋಗಿಸಿ ಹೂಡಿಕೆ ಮಾಡ್ತಾರೆ. ಬಡ್ಡಿ ಹೆಚ್ಚಿರುವ ಎಫ್ ಡಿ ಪ್ಲಾನ್ ಒಂದರ ವಿವರ ಇಲ್ಲಿದೆ.
ಗಳಿಸಿದ ಐದು ರೂಪಾಯಿಯಲ್ಲಿ ಕನಿಷ್ಠ ಒಂದು ರೂಪಾಯಿಯಾದ್ರೂ ಉಳಿಕೆ ಮಾಡ್ಬೇಕು. ಈ ಉಳಿತಾಯ ನಮ್ಮನ್ನು ಆಪತ್ ಕಾಲದಲ್ಲಿ ರಕ್ಷಿಸುತ್ತದೆ. ಹೂಡಿಕೆ ಮಾಡುವುದನ್ನು ಪ್ರತಿಯೊಬ್ಬ ತಿಳಿದಿರಬೇಕು. ಮನೆ, ಮದುವೆ, ಮಕ್ಕಳು, ಅವರ ವಿದ್ಯಾಭ್ಯಾಸ, ಅವರ ಮದುವೆ ಹೀಗೆ ಜವಾಬ್ದಾರಿ ಹೆಚ್ಚಾದಂತೆ ಖರ್ಚು ಹೆಚ್ಚಾಗುತ್ತದೆ. ಆ ಸಮಯದಲ್ಲಿ ನಾವು ಮಾಡಿದ ಹೂಡಿಕೆ ನಮ್ಮ ಕೈ ಹಿಡಿಯುತ್ತದೆ. ಹೂಡಿಕೆ ಮಾಡುವ ಮುನ್ನ ಸುರಕ್ಷಿತ ಸ್ಥಳದಲ್ಲಿ ಹಣ ಹಾಕುವುದು ಮುಖ್ಯವಾಗುತ್ತದೆ. ಹೆಚ್ಚು ಲಾಭ ಬೇಕು ಎನ್ನುವವರು ಎಫ್ ಡಿಯಲ್ಲ ಹೂಡಿಕೆ ಮಾಡ್ಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನೇಕ ಎಫ್ ಡಿ ಯೋಜನೆಯನ್ನು ಹೊಂದಿದೆ. ಅದ್ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಕೇರ್ ಯೋಜನೆ ಕೂಡ ಸೇರಿದೆ. ನಾವಿಂದು ವಿಕೇರ್ ಯೋಜನೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಎಸ್‌ಬಿಐ (SBI) ವಿಕೇರ್ (VCare) ಯೋಜನೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಕೇರ್ ಯೋಜನೆ ಹಿರಿಯ ನಾಗರಿಕ (Senior Citizen) ರ ಯೋಜನೆಯಾಗಿದೆ. ಇಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡುವ ಮೂಲಕ ಉತ್ತಮ ಬಡ್ಡಿಯನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ 5 ವರ್ಷದಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಲು ಇಲ್ಲಿ ಅವಕಾಶವಿದೆ. ಈ ಯೋಜನೆಯಡಿಯಲ್ಲಿ ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.
FREE SEWING MACHINE SCHEME : ಮಹಿಳೆಯರು ಸ್ವಾವಲಂಬಿಯಾಗಲು ಇದೇ ಬೆಸ್ಟ್ ವೇ!
ಈ ಹಿಂದೆ ಈ ಯೋಜನೆಗೆ ಹೂಡಿಕೆ ಮಾಡಲು ಜೂನ್ 30, 2023 ಕೊನೆ ದಿನವಾಗಿತ್ತು. ಈಗ ಬ್ಯಾಂಕ್ ಕೊನೆ ದಿನಾಂಕವನ್ನು ವಿಸ್ತರಿಸಿದೆ. ಹಿರಿಯ ನಾಗರಿಕರು ಸೆಪ್ಟೆಂಬರ್ 30,2023ರವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ವಿಕೇರ್ ಯೋಜನೆಯಲ್ಲಿ, ಎಫ್ ಡಿ ಮೇಲೆ ಶೇಕಡಾ 0.80ರಷ್ಟು ಹೆಚ್ಚುವರಿ ಬಡ್ಡಿ ಲಭ್ಯವಿದೆ. ಮತ್ತೊಂದೆಡೆ ಎಫ್ ಡಿ ಮೇಲಿನ ಬಡ್ಡಿಯನ್ನು ಮಾಸಿಕ ಅಥವಾ ತ್ರೈಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುತ್ತದೆ. ಆನ್ಲೈನ್ ಸೇವೆ ಕೂಡ ಲಭ್ಯವಿದ್ದು, ನೀವು ಆನ್ಲೈನ್ ಮೂಲಕವೇ ಈ ಯೋಜನೆಯನ್ನು ನಿರ್ವಹಿಸಬಹುದಾಗಿದೆ.
ಎಸ್‌ಬಿಐ ಬ್ಯಾಂಕ್ ಗ್ರಾಹಕರು ಎಸ್‌ಬಿಐನ ವಿ ಕೇರ್ ಯೋಜನೆಯ ಸಹಾಯದಿಂದ ಸಾಲವನ್ನು ಪಡೆಯಬಹುದು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಸ್‌ಬಿಐನ ವಿಕೇರ್ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ. 60 ವರ್ಷ ಮೇಲ್ಪಟ್ಟ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಎಸ್‌ಬಿಐ ವಿ ಕೇರ್ ಎಫ್‌ಡಿ ಹೂಡಿಕೆಯು ಹಿರಿಯ ನಾಗರಿಕರಿಗೆ ಬಹಳ ಪ್ರಯೋಜನಕಾರಿ ಯೋಜನೆಯಾಗಿದೆ. ಎಸ್‌ಬಿಐ ವಿಕೇರ್ ಯೋಜನೆಯಲ್ಲಿ ಹಿರಿಯ ನಾಗರಿಕರು 5,00,000 ರೂಪಾಯಿ ಠೇವಣಿ ಇಟ್ಟರೆ ಅವರು 5 ವರ್ಷಗಳ ಮೆಚ್ಯೂರಿಟಿಯಲ್ಲಿ 7,16,130 ರೂಪಾಯಿ ಪಡೆಯುತ್ತಾರೆ. ಅಂದರೆ ಈ ಹೂಡಿಕೆಯಲ್ಲಿ ಹಿರಿಯ ನಾಗರಿಕರಿಗೆ 2,16,130 ರೂಪಾಯಿ ಒಟ್ಟೂ ಬಡ್ಡಿಯ ರೂಪದಲ್ಲಿ ಸಿಗುತ್ತದೆ.
ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಸಣ್ಣ ಉಳಿತಾಯ ಬಡ್ಡಿದರ ಏರಿಕೆ; 3 ಯೋಜನೆಗಳಿಗೆ ಹೆಚ್ಚಿನ ಬಡ್ಡಿ
ನೀವೂ ಹಿರಿಯ ನಾಗರಿಕರಾಗಿದ್ದು, ಹೂಡಿಕೆ ಮಾಡಲು ಉತ್ತಮ ಯೋಜನೆಗಾಗಿ ಹುಡುಕುತ್ತಿದ್ದರೆ, ಎಸ್‌ಬಿಐನ ವಿ ಕೇರ್ ಮತ್ತು ಅಮೃತ್ ಕಲಶ್ ಯೋಜನೆ ದಿ ಬೆಸ್ಟ್ ಎನ್ನಬಹುದು. ಎಸ್ ಬಿಐ ಅಮೃತ್ ಕಲಶ ವಿಶೇಷ ಎಫ್ ಡಿ ಯೋಜನೆಯ ಅವಧಿಯನ್ನು ಸಹ ವಿಸ್ತರಿಸಿದೆ. ಎಸ್‌ಬಿಐ ಅಮೃತ್ ಕಲಶ ಎಫ್‌ಡಿ ಯೋಜನೆಯಲ್ಲೂ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಸಿಗ್ತಿದೆ. ಹಿರಿಯ ನಾಗರಿಕರು ಅಮೃತ್ ಕಲಶ ವಿಶೇಷ ಎಫ್‌ಡಿ ಯೋಜನೆಯಡಿ ಅರ್ಜಿ ಸಲ್ಲಿಸಲು ಬಯಸಿದರೆ ಆಗಸ್ಟ್ 15, 2023 ರೊಳಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 400 ದಿನಗಳ ಅವಧಿಗೆ ಶೇಕಡಾ 7.60ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ.