SBI Alert:ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದ್ರೆ ಎಚ್ಚರ, ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡ್ಬೇಡಿ!

ಸೈಬರ್ ವಂಚಕರು ಹೊಸ ವಿಧಾನಗಳ ಮೂಲಕ ವಂಚನೆಗೆ ಹೊಂಚು ಹಾಕೋದು ಸಾಮಾನ್ಯ. ಇದೀಗ ಎಸ್ ಬಿಐ ಗ್ರಾಹಕರ ಖಾತೆಗಳಿಗೆ ಕನ್ನ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ಯೋನೋ ಖಾತೆ ಕ್ಲೋಸ್ ಆಗುತ್ತದೆ ಎಂಬ ಮೆಸೇಜ್ ಜೊತೆಗೆ ಲಿಂಕ್ ಅನ್ನು ಮೊಬೈಲ್ ಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಎಸ್ ಬಿಐ ಗ್ರಾಹಕರು ಎಚ್ಚರ ವಹಿಸಬೇಕಿದೆ. 
 

SBI Alert Viral post claims YONO account closure without PAN update know if its true or fake anu

ನವದೆಹಲಿ (ಫೆ.22): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಗ್ರಾಹಕರಿಗೆ ಇತ್ತೀಚೆಗೆ ನಕಲಿ ಸಂದೇಶಗಳ ಹಾವಳಿ ಹೆಚ್ಚಿದೆ. ಆಗಾಗ ಏನಾದ್ರೂ ಹೊಸ ವಿಷಯವನ್ನು ಪ್ರಸ್ತಾಪಿಸಿ ನಕಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಬಗ್ಗೆ ಎಸ್ ಬಿಐ ಕೂಡ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಕಳೆದ ಕೆಲವು ದಿನಗಳಿಂದ ಎಸ್ ಬಿಐ ಗ್ರಾಹಕರ ಮೊಬೈಲ್ ಗೆ ಎಸ್ ಬಿಐ ಯೋನೋ ಖಾತೆಯಲ್ಲಿ ಪ್ಯಾನ್ ಅಪ್ಡೇಟ್ ಮಾಡದಿದ್ರೆ ಖಾತೆ ಬ್ಲಾಕ್ ಅಥವಾ ಕ್ಲೋಸ್ ಆಗುತ್ತದೆ ಎಂಬ ಮೆಸೇಜ್ ಬರುತ್ತಿದೆ. ಈ ಸಂದೇಶದ ಜೊತೆಗೆ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ನವೀಕರಿಸಲು ಲಿಂಕ್ ಒಂದನ್ನು ಕೂಡ ನೀಡಲಾಗಿದೆ. ಆದರೆ, ಈ ಸಂದೇಶ ನಕಲಿಯಾಗಿದ್ದು, ಎಸ್ ಬಿಐ ಖಾತೆಗಳ ನವೀಕರಣಕ್ಕೆ ಪ್ಯಾನ್ ಅಪ್ಡೇಟ್ ಮಾಡಲು ಸಂದೇಶಗಳ ಮೂಲಕ ಯಾವುದೇ ಲಿಂಕ್ಸ್ ಕಳುಹಿಸಿಲ್ಲ ಎಂದು ಪ್ರೆಸ್ ಇನ್ ಫಾರ್ಮೇಷನ್ ಬ್ಯುರೋ (ಪಿಐಬಿ) ದೃಢೀಕರಿಸಿದೆ. ಬ್ಯಾಂಕಿಂಗ್ ಸೌಲಭ್ಯವನ್ನು ಸರಳ ಹಾಗೂ ಹೆಚ್ಚು ಅನುಕೂಲಕರವಾಗಿಸುವ ಅನೇಕ ಸೌಲಭ್ಯಗಳನ್ನು ಎಸ್ ಬಿಐ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಬ್ಯಾಂಕಿಂಗ್ ಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಎಸ್ ಬಿಐ ಯೋನೋ ಮೊಬೈಲ್ ಬ್ಯಾಂಕಿಂಗ್ ಆ್ಯಪ್  ಬಳಕೆ ಹೆಚ್ಚಿದೆ. 

ಎಸ್ ಬಿಐ ಯೋನೋ ಆ್ಯಪ್  (SBI YONO app) ವಿವಿಧ ಬ್ಯಾಂಕಿಂಗ್ ವಹಿವಾಟುಗಳನ್ನು ಮನೆಯಲ್ಲೇ ಆರಾಮವಾಗಿ ಕುಳಿತು ಮಾಡಲು ಅವಕಾಶ ಕಲ್ಪಿಸಿದೆ. ಹೀಗಾಗಿ ಈ ಹಿಂದಿನಂತೆ ಹಣ ವರ್ಗಾವಣೆ ಅಥವಾ ಇತರ ಯಾವುದೇ ಬ್ಯಾಂಕಿಂಗ್ ಕೆಲಸಗಳಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಆದರೆ, ಯೋನೋ ಆ್ಯಪ್ ಅಥವಾ ಇನ್ನಿತರ ಆನ್ ಲೈನ್ ವಹಿವಾಟಿನ ಸಮಯದಲ್ಲಿ ಸೈಬರ್ ವಂಚನೆ ಬಗ್ಗೆ ಎಚ್ಚರವಾಗಿರುವಂತೆ ಬ್ಯಾಂಕ್ ಗ್ರಾಹಕರನ್ನು ಆಗಾಗ ಜಾಗೃತಗೊಳಿಸುತ್ತಲೇ ಬಂದಿದೆ. ಯಾವುದೇ ಕಾರಣಕ್ಕೂ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆಗಳು ಹಾಗೂ ಒಟಿಪಿ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್ ಬಿಐ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ.

ನಿಮ್ಗೆ ಗೊತ್ತಾ, ಎಟಿಎಂ ಕಾರ್ಡ್ ಹೊಂದಿರೋರಿಗೆ ಸಿಗುತ್ತೆ 10 ಲಕ್ಷ ರೂ. ವಿಮಾ ಕವರೇಜ್!

ಸಂದೇಶ ಅಥವಾ ಇ-ಮೇಲ್ ಮುಖಾಂತರ ಕಳುಹಿಸಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಂತೆ ಎಸ್ ಬಿಐ ಗ್ರಾಹಕರಿಗೆ ಸಲಹೆ ನೀಡಿದೆ. ಹಾಗೆಯೇ  ಅಪರಿಚಿತ ವ್ಯಕ್ತಿಗಳ ಕರೆ ಅಥವಾ ಸಂದೇಶಕ್ಕೆ ಉತ್ತರಿಸದಂತೆ ಕೂಡ ತಿಳಿಸಿದೆ. ಎಚ್ಚರಿಕೆ ವಹಿಸುವ ಮೂಲಕ ಗ್ರಾಹಕರು ಸೈಬರ್ ವಂಚನೆಯಿಂದ ತಮ್ಮ ಖಾತೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ. ಮೊಬೈಲ್ ಗೆ ಬರುವ ಯಾವುದೇ ಸಂದೇಶವನ್ನು ನಂಬುವ ಮುನ್ನ ಎಸ್ ಬಿಐ ವೆಬ್ ಸೈಟ್ ನಲ್ಲಿ ಒಮ್ಮೆ ಈ ಬಗ್ಗೆ ಚೆಕ್ ಮಾಡೋದು ಉತ್ತಮ.

ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!

ಆನ್ ಲೈನ್ ನಲ್ಲೇ ಶಾಖೆ ಬದಲಾವಣೆ
ನೀವು ಖಾತೆ ಹೊಂದಿರುವ ಎಸ್ ಬಿಐ ಶಾಖೆ  ಬದಲಾಯಿಸಲು ಬಯಸಿದ್ರೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿ ಮುಗಿಸಬಹುದು. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಗೊತ್ತಿರೋದು ಅಗತ್ಯ. ಹಾಗೆಯೇ ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರೋದು ಅಗತ್ಯ. ಆನ್ ಲೈನ್  ಮೂಲಕವೇ ಬ್ಯಾಂಕ್ ಶಾಖೆ ಬದಲಾವಣೆ ಮಾಡೋದ್ರಿಂದ ಬ್ಯಾಂಕಿಗೆ ಓಡಾಟ ನಡೆಸಬೇಕಾದ ಅಗತ್ಯವಿಲ್ಲ. ಆನ್ ಲೈನ್ ಪ್ರಕ್ರಿಯೆ ಹೊರತಾಗಿ ಯೋನೋ ಅಪ್ಲಿಕೇಷನ್ ಅಥವಾ ಯೋನೋ ಲೈಟ್ ಮೂಲಕ ನೀವು ನಿಮ್ಮ ಶಾಖೆಯನ್ನು ಬದಲಾಯಿಸಬಹುದು.

Latest Videos
Follow Us:
Download App:
  • android
  • ios