ಇಸ್ಲಾಮಾಬಾದ್(ಅ.24): ಆರ್ಥಿಕವಾಗಿ ಮುಳುಗುತ್ತಿರುವ ಹಡಗಿನಂತಾಗಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ 6 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ಸಹಾಯ ಘೋಷಿಸಿದೆ.   

ಸೌದಿ ರಾಜಧಾನಿ ರಿಯಾದ್ ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕ  ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಪಾಕ್ ಮನವಿಗೆ ಸ್ಪಂದಿಸಿರುವ ಸೌದಿ ಅರೇಬಿಯಾ ತನ್ನ ಮಿತ್ರ ರಾಷ್ಟ್ರಕ್ಕೆ ಬರೋಬ್ಬರಿ 6 ಬಿಲಿಯನ್ ಯುಎಸ್ ಡಾಲರ್ ನೆರವು ಘೋಷಿಸಿದೆ.

ಮೊದಲ ಕಂತಿನ ಭಾಗವಾಗಿ ಈಗಾಗಲೇ 3 ಬಿಲಿಯನ್ ಯುಎಸ್ ಡಾಲರ್ ನೆರವು ಪಾಕ್ ಗೆ ನೀಡಲಾಗಿದ್ದು, ಇನ್ನುಳಿದ 3 ಬಿಲಿಯನ್ ಯುಎಸ್ ಡಾಲರ್ ನೆರವನ್ನು ಎರಡನೇ ಕಂತಿನಲ್ಲಿ ನೀಡಲಾಗುವುದು ಎಂದು ಸೌದಿ ತಿಳಿಸಿದೆ.

ಇನ್ನು ಸೌದಿಯ ಹಣಕಾಸು ನೆರವು ಪಾಕಿಸ್ತಾನಕ್ಕೆ ಉಸಿರಾಡಲು ಸಮಯ ನೀಡಿದಂತೆಯೇ ಸರಿ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಐಎಂಎಫ್ ನೆರವಿನ ನಿರೀಕ್ಷೆಯಲ್ಲಿರುವ ಪಾಕಿಸ್ತಾನಕ್ಕೆ ಸೌದಿ ನೆರವು ಕೊಂಚ ಸಮಾಧಾನ ತರಲಿದೆ ಎಂಬುದು ತಜ್ಞರ ಅಂಬೋಣ.
 

ಫ್ರೆಂಡ್ಸ್ ಸಾಲ ಕೊಡಿ, ಆಮೇಲೆ ಮಜಾ ನೋಡಿ: ಗೋಗರೆದ ಇಮ್ರಾನ್!