Asianet Suvarna News Asianet Suvarna News

ಈ ನಟನಷ್ಟು ಲಕ್ಸುರಿ ಕಾರ್‌ ಕಲೆಕ್ಷನ್‌ ಶಾರೂಕ್‌, ರಜನೀಕಾಂತ್‌ ಅಲ್ಲು ಅರ್ಜುನ್‌ ಹತ್ರಾನೂ ಇಲ್ಲ!

ಭಾರತದ ಈ ನಟ ನಟಿಸಿದ ಯಾವ ಸಿನಿಮಾನೂ ಹಿಟ್ ಆಗಿಲ್ಲ. ಆದರೂ ಈ ನಟನ ಆಸ್ತಿ ಬರೋಬ್ಬರಿ 2500 ಕೋಟಿ. ಇವರ ಲಕ್ಸುರಿ ಕಾರ್‌ ಕಲೆಕ್ಷನ್‌ ಶಾರೂಕ್‌, ರಜನೀಕಾಂತ್‌, ಅಲ್ಲು ಅರ್ಜುನ್‌ ಅವರಂಥಾ ಸ್ಟಾರ್ ನಟರ ಹತ್ರಾನೂ ಇಲ್ಲ. ಯಾರು ಆ ನಟ?

Saravanan One of Indias richest actors has never given a hit, has more luxury cars than Khans Vin
Author
First Published Nov 15, 2023, 2:21 PM IST

ಭಾರತದಲ್ಲಿ ಈಗ ಹೈಬಜೆಟ್‌ ಚಿತ್ರಗಳನ್ನು ನಿರ್ಮಿಸುವುದು ಸಾಮಾನ್ಯವಾಗಿದೆ. ಇಂಥಾ ಬಹು ಬಜೆಟ್‌ನ ಸಿನಿಮಾಗಳು 500 ಕೋಟಿಯಿಂದ 1000 ಕೋಟಿ ರೂ. ವರೆಗೂ ಗಳಿಕೆ ಮಾಡುತ್ತವೆ. ಪ್ರಮುಖ ನಟ-ನಟಿಯರು ಸಹ ಸಂಭಾವನೆಯಾಗಿ ಐದು, ಹತ್ತು ಕೋಟಿಗಳನ್ನು ಪಡೆಯುತ್ತಾರೆ. ಹೀಗಾಗಿ ಸಿನಿಮಾರಂಗದಲ್ಲಿ ಸಕ್ಸಸ್‌ಫುಲ್‌ ಆದ ಬಹುತೇಕ ನಟ-ನಟಿಯರು ಕೋಟ್ಯಾಧಿಪತಿಗಳಾಗಿರುತ್ತಾರೆ. ಆದರೆ ಈ ಒಬ್ಬ ನಟ ಸಿನಿಮಾರಂಗದಲ್ಲಿ ಸಕ್ಸಸ್‌ ಆಗಿಲ್ಲದಿದ್ದರೂ ಸಿನಿಮಾರಂಗದ ಅತೀ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಈ ನಟ ಒಂದೇ ಒಂದು ಹಿಟ್ ಸಿನಿಮಾ ನೀಡದಿರುವುದು ಅಚ್ಚರಿಯ ವಿಷಯವಾಗಿದೆ.

ಮಾತ್ರವಲ್ಲ ಈ ನಟ ಶಾರೂಕ್‌ ಖಾನ್‌, ಸಲ್ಮಾನ್ ಖಾನ್‌, ಅಮೀರ್ ಖಾನ್‌ಗಿಂತಲೂ ಹೆಚ್ಚು ಲಕ್ಸುರಿಯಸ್‌ ಕಾರುಗಳನ್ನು ಹೊಂದಿದ್ದಾರೆ. 2500 ಕೋಟಿಯ ಬಿಸಿನೆಸ್ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಆ ನಟ ಮತ್ಯಾರೂ ಅಲ್ಲ, ಸರವಣನ್ ಅರುಲ್.

ಒಂದೇ ಚಿತ್ರದಲ್ಲಿ ನಟಿಸಿ ಭರ್ತಿ 1800 ಕೋಟಿ ಗಳಿಸಿದ ನಟ; ಆ ನಂತ್ರ ಆರು ವರ್ಷದಿಂದ ಮಾಡಿದ ಸಿನ್ಮಾವೆಲ್ಲಾ ಫ್ಲಾಪ್‌!

ಭಾರತದ ಶ್ರೀಮಂತ ನಟರಲ್ಲಿ ಒಬ್ಬರಾದ ಸರವಣನ್ ಅರುಲ್
ಲೆಜೆಂಡ್ ಸರವಣನ್ ಎಂದು ಕರೆಯಲ್ಪಡುವ ಸರವಣನ್ ಅರುಲ್ ಒಬ್ಬ ಭಾರತೀಯ ಉದ್ಯಮಿ (Businessman) ಮತ್ತು ನಟ. ಸರವಣನ್ ಇದುವರೆಗೆ 'ದಿ ಲೆಜೆಂಡ್' ಎಂಬ ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಜೆಡಿ ಜೆರ್ರಿ ನಿರ್ದೇಶನದ ಈ ಚಿತ್ರದಲ್ಲಿ (Movie) ಊರ್ವಶಿ ರೌಟೇಲಾ, ವಿವೇಕ್, ಯೋಗಿ ಬಾಬು, ಸುಮನ್, ನಾಸರ್ ಮತ್ತು ವಿಜಯ್‌ಕುಮಾರ್ ನಟಿಸಿದ್ದಾರೆ. ಭಾರೀ ಪ್ರಚಾರ, ಹೆಸರಾಂತ ನಟ-ನಟಿಯರು ಅಭಿನಯಿಸಿದ್ದರೂ ಈ ಚಿತ್ರವು ಭಾರಿ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಆದರೆ ಸರವಣನ್‌ ಮಾತ್ರ ಸಾರ್ವಜನಿಕರ ದೃಷ್ಟಿಯಲ್ಲಿ ನಟ ಎಂದು ಗುರುತಿಸಲ್ಪಟ್ಟಿದ್ದಾರೆ. 

ಸರವಣನ್ ಲಕ್ಷಾಂತರ ಗಳಿಸಿದ್ದು ಹೇಗೆ?
ನಟನಾಗಿದ್ದರೂ ಸರವಣನ್ ಸಿನಿಮಾದ ಮೂಲಕ ಹಣ ಸಂಪಾದಿಸಲ್ಲಿಲ್ಲ. ಬದಲಿಗೆ ಸರವಣನ್‌ ಉದ್ಯಮದಲ್ಲಿ ಹೆಚ್ಚು ಸಕ್ಸಸ್ ಆಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ಶಾಪಿಂಗ್ ಕಾಂಪ್ಲೆಕ್ಸ್ ಸರಣಿಯಾದ ದಿ ನ್ಯೂ ಲೆಜೆಂಡ್ ಸರವಣ ಸ್ಟೋರ್ಸ್‌ನ ಮಾಲೀಕರಾಗಿದ್ದಾರೆ. ಕಂಪನಿಯು 2021-22 ಹಣಕಾಸು ವರ್ಷದಲ್ಲಿ  2500 ಕೋಟಿ ರೂ. ವಹಿವಾಟು ನಡೆಸಿದೆ. ಕಂಪೆನಿಯು 2022ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸರವಣನ್ ಅವರ ಚೊಚ್ಚಲ ಚಲನಚಿತ್ರ 'ದಿ ಲೆಜೆಂಡ್'ನ್ನು ಸಹ ನಿರ್ಮಿಸಿದೆ. 

ದಕ್ಷಿಣಭಾರತದ ಅತ್ಯಂತ ಶ್ರೀಮಂತ ನಟನ ಆಸ್ತಿ ಭರ್ತಿ 200 ಮಿಲಿಯನ್; ರಜನೀಕಾಂತ್‌, ಕಮಲ್ ಹಾಸನ್‌, ವಿಜಯ್ ಅಲ್ಲ!

ಉದ್ಯಮಿ ಮತ್ತು ನಟ ಅತ್ಯಾಸಕ್ತಿಯ ಕಾರು ಸಂಗ್ರಾಹಕ ಕೂಡಾ ಹೌದು. ಅವರ ಗ್ಯಾರೇಜ್ ಹಲವಾರು ಐಷಾರಾಮಿ ಮತ್ತು ಸ್ವಾನ್ಕಿ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದೆ. ಸರವಣನ್‌ ಒಂದಲ್ಲ, ಎರಡಲ್ಲ..ಬದಲಿಗೆ ಮೂರು ರೋಲ್ಸ್ ರಾಯ್ಸ್ ಸೆಡಾನ್‌ಗಳ ಮಾಲೀಕರಾಗಿದ್ದಾರೆ, ಇದು ಭಾರತದ ಯಾವುದೇ ನಟರಿಂದ ಹೆಚ್ಚು.

ಇವುಗಳಲ್ಲದೆ, ಅವರು ಲಂಬೋರ್ಗಿನಿ ಹುರಾಕನ್, ಫೆರಾರಿ 488, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಆಸ್ಟನ್ ಮಾರ್ಟಿನ್ ಡಿಬಿ 11, ಲಂಬೋರ್ಘಿನಿ ಉರಸ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಪೋರ್ಷೆ 911 ಟರ್ಬೊ ಎಸ್ ಅನ್ನು ಹೊಂದಿದ್ದಾರೆ. ಬಹು ವರದಿಗಳ ಪ್ರಕಾರ, ಅವರ ಐಷಾರಾಮಿ ಕಾರು ಸಂಗ್ರಹವು ಭಾರತದ ಎಲ್ಲಾ ನಟರಲ್ಲಿ ದೊಡ್ಡದಾಗಿದೆ, ಇದು ಮೂವರು ಖಾನ್‌ಗಳು, ಅಲ್ಲು ಅರ್ಜುನ್ ಅಥವಾ ರಜನಿಕಾಂತ್‌ಗಿಂತಲೂ ದೊಡ್ಡದಾಗಿದೆ.

Follow Us:
Download App:
  • android
  • ios