ನವದೆಹಲಿ[ಆ.26]: ನೈರ್ಮಲ್ಯ ಕಾಪಾಡಲು ಬಳಸುವ ಉತ್ಪನ್ನಗಳಾದ ಸ್ಯಾನಿಟರಿ ನ್ಯಾಪ್‌ಕಿನ್ಸ್‌, ಹ್ಯಾಂಡ್‌ವಾಷ್‌, ಸೋಂಕುನಿವಾರಕಗಳು ಅತಿ ಶೀಘ್ರದಲ್ಲಿ ದರ ನಿಯಂತ್ರಣ ಪಟ್ಟಿಗೆ ಸೇರಲಿವೆ.

ಕೇಂದ್ರ ಸರ್ಕಾರ ಈ ಎಲ್ಲಾ ಅಗತ್ಯ ವಸ್ತುಗಳನ್ನು ದರ ನಿಯಂತ್ರಣ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದೆ. ಅಲ್ಲದೇ, ಇನ್ನಿತರೆ ಔಷಧಿಗಳು, ವೈದ್ಯಕೀಯ ಸಾಧನಗಳನ್ನೂ ದರ ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗುತ್ತಿದೆ.

ಇದರಿಂದ ಅತ್ಯಂತ ಉಪಯುಕ್ತ ಮತ್ತು ಅಗತ್ಯವಾದ ಈ ವಸ್ತುಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸುವ ಕಂಪನಿಗಳ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ.