ಬಡ ಬ್ರಾಹ್ಮಣರಿಗೆ ಸ್ವ ಉದ್ಯೋಗ, ಶಿಕ್ಷಣಕ್ಕೆ ನೆರವು ನೀಡಲಿವೆ ಈ ಯೋಜನೆಗಳು; ಅರ್ಜಿ ಸಲ್ಲಿಕೆ ಹೇಗೆ?
ಸ್ವ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಬಡ ಬ್ರಾಹ್ಮಣರಿಗೆ ರಾಜ್ಯ ಸರ್ಕಾರದ ಸ್ವಾವಲಂಬನೆ ಯೋಜನೆಯಡಿಯಲ್ಲಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ 1ಲಕ್ಷ ರೂ. ತನಕ ಸಹಾಯಧನ ಪಡೆಯಲು ಅವಕಾಶವಿದೆ.
ಬೆಂಗಳೂರು (ಜ.29): ಇತ್ತೀಚೆಗೆ ಸಚಿವ ಕೃಷ್ಣ ಬೈರೇಗೌಡ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಬಿ ಮತ್ತು ಸಾಂದೀಪಿನಿ ಶಿಷ್ಯ ವೇತನದ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಸಾಂದೀಪನಿ ಶಿಷ್ಯ ವೇತನ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. ಇದರಡಿ ಶಿಕ್ಷಣ, ಪಠ್ಯ ಪುಸ್ತಕ, ಎಲೆಕ್ಟ್ರಾನಿಕ್ ಉಪಕರಣ, ಇನ್ನಿತರ ಅಧ್ಯಯನ ಉಪಕರಣಗಳು, ಸಾರಿಗೆ ವ್ಯವಸ್ಥೆ ಹಾಸ್ಟೆಲ್ ಹಾಗೂ ಬಟ್ಟೆ ಕೂಡಾ ಸಿಗಲಿದೆ. ಈ ಸಂದರ್ಭದಲ್ಲಿ ಸಚಿವರು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ನಿಂದ ಸಾಲ ಪಡೆದಿದ್ದಲ್ಲಿ ಇದರಲ್ಲಿ ಶೇ.20ರಷ್ಟು ಹಣವನ್ನು ಸರ್ಕಾರ 'ಸ್ವಾವಲಂಬಿ' ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗಾಗಿ ಆಸಕ್ತರು ಈ ಎರಡೂ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಹೇಗೆ? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ.
ಏನಿದು ಸ್ವಾವಲಂಬಿ ಯೋಜನೆ?
ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಪಡೆದ ಸಾಲಕ್ಕೆ 1ಲಕ್ಷ ರೂ. ತನಕ ಸಹಾಯಧನ ನೀಡಲಾಗುತ್ತದೆ. ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಗೃಹ/ಗುಡಿ ಕೈಗಾರಿಕೆ ಮುಂತಾದ ಆದಾಯ ತರುವಂತಹ ಲಾಭದಾಯಕ ಉದ್ಯಮಗಳನ್ನು ಕೈಗೊಳ್ಳಲು ಈ ಸಹಾಯಧನ ಸಿಗುತ್ತದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಿಂದ ಸ್ವ ಉದ್ಯೋಗ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಸಾಲ ಪಡೆದಿರೋರು ಅರ್ಜಿ ಸಲ್ಲಿಕೆ ಮಾಡಬಹುದು.
ಸ್ವಂತ ಉದ್ಯಮ ಪ್ರಾರಂಭಿಸೋ ಮಹಿಳೆಯರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 3ಲಕ್ಷ ರೂ. ಸಾಲ; ಅರ್ಜಿ ಸಲ್ಲಿಕೆ ಹೇಗೆ?
ಯಾವೆಲ್ಲ ದಾಖಲೆಗಳು ಅಗತ್ಯ?
ಸ್ವಾವಲಂಬನೆ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:
*ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
*ಫೋಟೋ
*ಬ್ಯಾಂಕ್ ನಲ್ಲಿ ಸಾಲ ಪಡೆದಿರುವ ಬಗ್ಗೆ ದೃಢೀಕರಣ
*ಸಾಲ ಪಡೆದಿರುವ ಬ್ಯಾಂಕಿನ ಪಾಸ್ ಬುಕ್ ಪ್ರತಿ.
*ಬ್ಯಾಂಕ್ ನಿಂದ ಪಡೆದ ಸಾಲದ ಮಂಜೂರಾತಿ ಪತ್ರ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಆ ಬಳಿಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಕೆ ಮಾಡಿ.
ಏನಿದು ಸಾಂದೀಪನಿ ಶಿಷ್ಯ ವೇತನ?
ಈ ಯೋಜನೆಯಡಿ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು 15 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಸಮೀಪದ ಗ್ರಾಮ್ ಒನ್ ಕೇಂದ್ರವನ್ನು 2024ರ ಜನವರಿ 31ರೊಳಗೆ ಸಂಪರ್ಕಿಸಿ, ಅರ್ಜಿ ಸಲ್ಲಿಕೆ ಮಾಡಬೇಕು. ಈ ವರ್ಷ ಒಟ್ಟು 9,206 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಈ ವರ್ಷ ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ 13.77 ಕೋಟಿ ರೂ. ಮೀಸಲಿಟ್ಟಿದೆ ಎಂಬ ಮಾಹಿತಿ ಇದೆ.
ಕಾರು,ಬೈಕ್ ವಿಮೆ ನವೀಕರಿಸುವಾಗ ಹಣ ಉಳಿಸೋದು ಹೇಗೆ? ಈ 5 ಟಿಪ್ಸ್ ಅನುಸರಿಸಿ
ಯಾರು ಅರ್ಹರು?
*ಸಾಂದೀಪನಿ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರು ಕರ್ನಾಟಕ ಮೂಲದವರಾಗಿರಬೇಕು.
*ಅರ್ಜಿದಾರರು ಬ್ರಾಹ್ಮಣರಾಗಿರಬೇಕು.
*ಅವರು ಬಿಪಿಎಲ್ ಪಟ್ಟಿಯಲ್ಲಿರಬೇಕು.
*ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಸ್ಎಸ್ ಎಲ್ ಸಿ ಪರೀಕ್ಷೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.