Asianet Suvarna News Asianet Suvarna News

ಕಾರು,ಬೈಕ್ ವಿಮೆ ನವೀಕರಿಸುವಾಗ ಹಣ ಉಳಿಸೋದು ಹೇಗೆ? ಈ 5 ಟಿಪ್ಸ್ ಅನುಸರಿಸಿ

ಕಾರು ಮತ್ತು ಬೈಕ್ ವಿಮಾ ಪಾಲಿಸಿಗಳನ್ನು ಆನ್ ಲೈನ್ ನಲ್ಲಿ ನವೀಕರಿಸುವಾಗ ಕೆಲವು ಟಿಪ್ಸ್ ಅನುಸರಿಸಿದ್ರೆ ಒಂದಿಷ್ಟು ಹಣ ಉಳಿತಾಯ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 

5 Ways to Save Money while Renewing Your Car and Bike Insurance Online anu
Author
First Published Jan 28, 2024, 3:59 PM IST | Last Updated Jan 28, 2024, 4:34 PM IST

Business Desk: ಕಾರು ಹಾಗೂ ದ್ವಿಚಕ್ರ ವಾಹನದ ವಿಮೆ ಚಾಲನೆ ಸಮಯದಲ್ಲಿ ಎದುರಾಗುವ ಅನಿರೀಕ್ಷಿತ ಅಪಘಾತಗಳಿಂದ ನಮಗೆ ರಕ್ಷಣೆ ಒದಗಿಸುತ್ತವೆ. ಕಾರು ಹಾಗೂ ದ್ವಿಚಕ್ರ ವಾಹನ ಹೊಂದಿರೋರು ವಾಹನ ವಿಮೆ ಹೊಂದಿರೋದು ಕಡ್ಡಾಯ. ಹಾಗೆಯೇ ಬಹುತೇಕ ವಾಹನ ವಿಮೆಗಳನ್ನು ಪ್ರತಿವರ್ಷ  ನವೀಕರಿಸೋದು ಅಗತ್ಯ. ಕೆಲವರ ಪಾಲಿಗೆ ಇದು ದೊಡ್ಡ ಕೆಲಸವೂ ಹೌದು. ಆದರೆ, ಇಂದು ಎಲ್ಲವೂ ಡಿಜಿಟಲೀಕರಣಗೊಂಡಿರುವ ಕಾರಣ ಕಾರು ಹಾಗೂ ಬೈಕ್ ವಿಮೆಯನ್ನು ಕೂಡ ಮನೆಯಲ್ಲೇ ಕುಳಿತು ನವೀಕರಿಸಬಹುದು. ಇದು ಪ್ರಾಯೋಗಿಕ ಹಾಗೂ ಕೈಗೆಟುಕುವ ದರದಲ್ಲಿ ನವೀಕರಿಸುವ ಆಯ್ಕೆಯನ್ನು ಒದಗಿಸುತ್ತಿದೆ ಕೂಡ. ಹಾಗಾದ್ರೆ ಕಾರು ಹಾಗೂ ದ್ವಿಚಕ್ರ ವಾಹನಗಳ ವಿಮೆ ನವೀಕರಿಸುವಾಗ ವೆಚ್ಚವನ್ನು ತಗ್ಗಿಸಲು  ಇರುವ ಐದು ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ.

1.ಪಾಲಿಸಿಗಳು ಹಾಗೂ ಕಂಪನಿಗಳನ್ನು ಹೋಲಿಸಿ ನೋಡಿ
ವಿವಿಧ ವಾಹನ ವಿಮಾ ಪಾಲಿಸಿಗಳು ಹಾಗೂ ಅವುಗಳನ್ನು ನೀಡುವ ಕಂಪನಿಗಳ ಬಗ್ಗೆ ಮಾಹಿತಿ ಪಡೆಯಬೇಕು. ಹಾಗೆಯೇ ಆ ಪಾಲಿಸಿಗಳು ಹಾಗೂ ಅದನ್ನು ನೀಡುವ ಕಂಪನಿಗಳನ್ನು ಹೋಲಿಸಿ ನೋಡಬೇಕು. ಇದರಿಂದ ಆನ್ ಲೈನ್ ನಲ್ಲಿ ವಿಮೆ ನವೀಕರಿಸುವಾಗ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ವಿವಿಧ ಕಂಪನಿಗಳು ನೀಡುವ ವಿವಿಧ ವಿಮಾ ಪ್ಲ್ಯಾನ್ ಗಳನ್ನು ಹೋಲಿಸಿ ನೋಡಲು ಸಮಯ ತೆಗೆದುಕೊಳ್ಳಿ. ಹಾಗೆಯೇ ಕವರೇಜ್, ಕಡಿತಗಳು ಹಾಗೂ ಪ್ರೀಮಿಯಂ ವೆಚ್ಚಕ್ಕೆ ಸಂಬಂಧಿಸಿ ಯಾವುದೇ ಹೆಚ್ಚುವರಿ ಪ್ರಯೋಜನಗಳಿದ್ದರೆ ಅವುಗಳ ಮಾಹಿತಿ ಹೊಂದಿರಿ. ಬಹುತೇಕ ಸಮಯದಲ್ಲಿ ಇಂಟರ್ನೆಟ್ ನಲ್ಲಿ ವಿಮೆಗಳ ಹೋಲಿಕೆ ಸಾಧನಗಳು ಸಿಗುತ್ತವೆ. ಇವು ವೆಚ್ಚ ಹಾಗೂ ಕವರೇಜ್ ಅನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವು ನೀಡುತ್ತವೆ. 

ನೀವು ಹೊಸ ಕಾರಿಗೆ ವಿಮೆ ಖರೀದಿಸುತ್ತಿದ್ರೆ 'ನೋ ಕ್ಲೇಮ್ ಬೋನಸ್' ಬಗ್ಗೆ ತಿಳಿಯಲೇಬೇಕು, ಯಾಕೆ ಗೊತ್ತಾ?

2.ಕ್ಲೇಮ್ ಆಗದ ಬೋನಸ್ ಗಳ ಪ್ರಯೋಜನ ಪಡೆಯಿರಿ
ನೀವು ಉತ್ತಮ ಚಾಲಕರಾಗಿದ್ದು, ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೇಮ್ ಮಾಡದಿದ್ದರೆ ನೋ ಕ್ಲೇಮ್ ಬೋನಸ್ (ಎನ್ ಸಿಬಿ) ಪಡೆಯಬಹುದು. ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೇಮ್ ಮಾಡದ ಗ್ರಾಹಕರಿಗೆ ವಿಮಾ ಕಂಪನಿಗಳು ನೀಡುವ ಡಿಸ್ಕೌಂಟ್ ಅನ್ನೇ ಎನ್ ಸಿಬಿ ಎನ್ನಬಹುದು. ನೀವು ಆನ್ ಲೈನ್ ನಲ್ಲಿ ನಿಮ್ಮ ಪಾಲಿಸಿ ನವೀಕರಿಸುವ ಸಮಯದಲ್ಲಿ ನೀವು ಗಳಿಸಿರುವ ಯಾವುದೇ ಎನ್ ಸಿಬಿಯನ್ನು ಬಳಸಬಹುದಾಗಿದೆ. ಇದು ನಿಮ್ಮ ಪ್ರೀಮಿಯಂ ಅನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಲು ನೆರವು ನೀಡುತ್ತದೆ. ಎನ್ ಸಿಬಿ ಮೊತ್ತ ಹೆಚ್ಚಿದಷ್ಟೂ ಉಳಿತಾಯದ ಪ್ರಮಾಣ ಕೂಡ ದೊಡ್ಡದಿರುತ್ತದೆ. ಹೀಗಾಗಿ ಸುರಕ್ಷಿತವಾಗಿ ವಾಹನ ಚಾಲಾಯಿಸಿ ಹಾಗೂ ವಿಮೆ ಕ್ಲೇಮ್ ಮಾಡದಂತೆ ದಾಖಲೆ ನಿರ್ವಹಣೆ ಮಾಡಿ. ಇದರಿಂದ ಆ ಬಳಿಕ ಒಂದಿಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. 

3.ಆನ್ ಲೈನ್ ಡಿಸ್ಕೌಂಟ್ಸ್ ಹಾಗೂ ಉತ್ತೇಜನಗಳು
ಆನ್ ಲೈನ್ ಮಾರುಕಟ್ಟೆಯಲ್ಲಿ ಇತರ ಎಲ್ಲ ಉತ್ಪನ್ನಗಳಿಗೆ ಹೇಗೆ ಡಿಸ್ಕೌಂಟ್ಸ್ ಹಾಗೂ  ವಿಶೇಷ ಆಫರ್ ಗಳಿರುತ್ತವೋ ಹಾಗೆಯೇ ವಿಮೆಗೆ ಕೂಡ ಇರುತ್ತದೆ. ಹೀಗಾಗಿ ನಿಮ್ಮ ಕಾರ್ ಅಥವಾ ಬೈಕ್ ವಿಮೆಯನ್ನು ಆನ್ ಲೈನ್ ನಲ್ಲಿ ನವೀಕರಿಸುವಾಗ ಇಂಥ ವಿಶೇಷ ರಿಯಾಯ್ತಿ ಹಾಗೂ ಆಫರ್ ಗಳನ್ನು ಹುಡುಕಿ. ಈ ಡಿಸ್ಕೌಂಟ್ ಗಳು ನಿಮಗೆ ವಿವಿಧ ರೂಪದಲ್ಲಿ ಸಿಗುತ್ತವೆ. ಉದಾಹರಣೆಗೆ ಸಮಯಾವಧಿ ಮಾರಾಟಗಳು, ಕ್ಯಾಶ್ ಬ್ಯಾಕ್ ಪ್ರೋತ್ಸಾಹಧನಗಳು ಅಥವಾ ವಿಶೇಷ ಆನ್ ಲೈನ್ ಆಫರಿಂಗ್ ಇತ್ಯಾದಿ. 

4.ಹೆಚ್ಚುವರಿ ಉಳಿತಾಯಕ್ಕೆ ಒಂದೇ ಕಂಪನಿಯ ಅನೇಕ ಪಾಲಿಸಿ
ಅನೇಕ ವಿಮಾ ಕಂಪನಿಗಳು ಗ್ರಾಹಕರಿಗೆ ಅನೇಕ ವಿಧದ ಕವರೇಜ್ ಆಯ್ಕೆಗಳನ್ನು ನೀಡುತ್ತವೆ. ನಿಮ್ಮ ಬಳಿ ಕಾರು ಹಾಗೂ ಬೈಕ್ ಎರಡೂ ಇದ್ದರೆ ನೀವು ಒಂದೇ ಕಂಪನಿಯಿಂದ ಎರಡಕ್ಕೂ ಪಾಲಿಸಿಗಳನ್ನು ಪಡೆಯಬಹುದು. ಹೀಗೆ ಒಂದೇ ಕಂಪನಿಯ ಒಂದಕ್ಕಿಂತ ಹೆಚ್ಚಿನ ಪಾಲಿಸಿಗಳನ್ನು ಪಡೆದಾಗ ನಿಮಗೆ ಹೆಚ್ಚಿನ ಪ್ರಯೋಜನಗಳು ಕೂಡ ಸಿಗುತ್ತವೆ. ಹೀಗಾಗಿ ಆನ್ ಲೈನ್ ನಲ್ಲಿ ಕಾರ್ ಅಥವಾ ಬೈಕ್ ಪಾಲಿಸಿಗಳನ್ನು ನವೀಕರಿಸುವಾಗ ಈ ಅವಕಾಶವನ್ನು ಬಳಸಿಕೊಳ್ಳಿ. 

ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದೀರಾ? ಎಚ್ಚರಿಕೆ ಅತೀ ಅಗತ್ಯ!

5.ಸ್ವಯಂ ಕಡಿತಗಳು
ನಿಮ್ಮ ವಿಮಾ ಕವರೇಜ್ ಪ್ರಾರಂಭವಾಗುವ ಮುನ್ನ ನೀವು ಎಷ್ಟು ಮೊತ್ತ ಪಾವತಿಸುತ್ತೀರಿ ಎಂಬುದನ್ನು ಸ್ವಯಂ ಕಡಿತಗಳು (Voluntary Deductibles) ಎಂದು ಕರೆಯಲಾಗುತ್ತದೆ. ಸ್ವಯಂ ಕಡಿತಗಳ ಪ್ರಮಾಣ ಹೆಚ್ಚಿದಷ್ಟೂ ಪ್ರೀಮಿಯಂ ಮೊತ್ತ ತಗ್ಗುತ್ತದೆ. 


 

Latest Videos
Follow Us:
Download App:
  • android
  • ios