ದಾವೋಸ್(ಜ.23): ಸಿಎಎ ವಿರೋಧಿ ಹೋರಾಟವನ್ನು ಟೀಕಿಸಿರುವ ಸದ್ಗುರು ಜಗ್ಗಿ ವಾಸುದೇವ್, ದೇಶದ ರಸ್ತೆಗಳಲ್ಲಿ ಹೀಗೆ ಬಸ್’ಗಳನ್ನು ಸುಡುತ್ತಿದ್ದರೆ ವಿದೇಶಿ ಹೂಡಿಕೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. 

ದಾವೋಸ್’ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಸದ್ಗುರು ಜಗ್ಗಿ ವಾಸುದೇವ್, ಖಾಸಗಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.

ಪ್ರೂಫ್ ಕೇಳಿದವ್ರಿಗೆ ಹೇಳಿ 'ಚಾರ್ ಮಿನಾರ್ ನಮ್ಮಪ್ಪ ಕಟ್ಟಿದ್ದು, ನಿಮ್ಮಪ್ಪ ಅಲ್ಲ'!

ಸಿಎಎ ವಿರೋಧಿ ಹೋರಾಟ ದೇಶದ ವರ್ಚಸ್ಸನ್ನು ಕುಗ್ಗಿಸುತ್ತಿದ್ದು, ದೇಶದ ರಸ್ತೆಗಳಲ್ಲಿ ಸುಡುತ್ತಿರುವ ಬಸ್’ಗಳನ್ನು ನೋಡಿದವರು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಗಲಭೆ : ಹೊರಬಿತ್ತು ಕಮ್ಮಕ್ಕು ನೀಡಿದ ಸ್ಫೋಟಕ ಮಾಹಿತಿ !

ಸರ್ಕಾರ ಕೂಡ ಹಿಂಸಾತ್ಮಕ ಪ್ರತಿಭಟನೆ ಕೊನೆಗಾಣಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸದ್ಗುರು, ದೇಶದಲ್ಲಿ ಶಾಂತಿ ನೆಲೆಸಿದ್ದರೆ ಮಾತ್ರ ವಿದೇಶಿ ಹೂಡಿಕೆ ಸಾಧ್ಯ ಎಂದು ಹೇಳಿದ್ದಾರೆ.