ಸ್ವಿಟ್ಜರ್ಲೆಂಡ್ ಮೂಲದ 'ಸಾನನ್' ತಳಿಯ ಮೇಕೆಗಳು ಅತಿ ಹೆಚ್ಚು ಹಾಲು ನೀಡುವ ಸಾಮರ್ಥ್ಯ ಹೊಂದಿವೆ. ಈ ಮೇಕೆ ಹಾಲಿಗೆ ಸೌಂದರ್ಯವರ್ಧಕ ತಯಾರಿಕೆಯಲ್ಲಿ ಭಾರಿ ಬೇಡಿಕೆಯಿದ್ದು, ಪ್ರತಿ ಲೀಟರ್‌ಗೆ ಅಧಿಕ ಬೆಲೆಯಿದೆ. ಹೀಗಾಗಿ, ಸಾನನ್ ಮೇಕೆ ಸಾಕಾಣಿಕೆಯು ರೈತರಿಗೆ ಅತ್ಯಂತ ಲಾಭದಾಯಕ ಉದ್ಯಮವಾಗಿದೆ.

ಬೆಂಗಳೂರು (ಜೂ.30): ರೈತರು ಕೇವಲ ಕೃಷಿಯನ್ನೇ ನಂಬಿ ಕೂರದೆ, ಅದರ ಜೊತೆಗೆ ಉಪಕಸುಬು ಅಥವಾ ಉದ್ಯಮ ಮಾಡಿದರೆ ನಾಲ್ಕು ಕಾಸು ಕೈ ಸೇರುತ್ತದೆ. ಉಪಕಸುಬುಗಳಲ್ಲಿ ಮೇಕೆ ಸಾಕಾಣಿಕೆ (Goat Farming) ಅತ್ಯಂತ ಲಾಭದಾಯಕ ಉದ್ಯಮ. ಅದರಲ್ಲೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಲು ನೀಡುವ ವಿದೇಶಿ ತಳಿಯ ಮೇಕೆಯೊಂದು ರೈತರನ್ನು ಕೋಟ್ಯಾಧಿಪತಿ ಮಾಡಬಲ್ಲದು. ಆ ತಳಿಯ ಹೆಸರೇ ಸಾನನ್ (Saanen Goat).ಹಾಲು ಉತ್ಪಾದನೆಯಲ್ಲಿ ಹಸು, ಎಮ್ಮೆಗಳಷ್ಟೇ ಮೇಕೆ ಹಾಲೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮೇಕೆ ಹಾಲು ಅನೇಕ ಕಾಯಿಲೆಗಳಿಗೆ ಗುಣಕಾರಿಯಾಗಿದ್ದು, ಜ್ವರ ಬಂದಾಗ ಅಥವಾ ಬಿಸಿಲಿನ ಬೇಗೆ ಹೆಚ್ಚಾದಾಗ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ದಿನಗಳಲ್ಲಂತೂ ಸೌಂದರ್ಯವರ್ಧಕಗಳ (Cosmetics) ತಯಾರಿಕೆಯಲ್ಲಿ ಮೇಕೆ ಹಾಲಿಗೆ ಭಾರಿ ಬೇಡಿಕೆ ಬಂದಿದೆ. ಸ್ವಿಟ್ಜರ್ಲೆಂಡ್ ಮೂಲದ 'ಸಾನನ್' ತಳಿಯ ಮೇಕೆಗಳು ಜಗತ್ತಿನಾದ್ಯಂತ ಅತಿ ಹೆಚ್ಚು ಹಾಲು ಕೊಡುವ ತಳಿಗಳಾಗಿ ಪ್ರಸಿದ್ಧಿ ಪಡೆದಿವೆ. ನಮ್ಮ ದೇಶಿ ತಳಿಯ ಮೇಕೆಗಳು ಅತ್ಯಂತ ಕಡಿಮೆ ಹಾಲು ನೀಡುತ್ತವೆ (ಕೆಲವೊಮ್ಮೆ ಕೇವಲ ಒಂದು ಕಪ್ ಮಾತ್ರ ಸಿಗುತ್ತದೆ). ಆದರೆ ಸಾನನ್ ಮೇಕೆಗಳ ಹಾಲು ಕೊಡುವ ಸಾಮರ್ಥ್ಯ ಅಗಾಧವಾಗಿದೆ. ಹಾಗಾಗಿ ಡೇರಿ ಉದ್ಯಮ ಮತ್ತು ಸ್ವಸಹಾಯ ಸಂಘಗಳಿಗೆ (Self Help Groups) ಈ ತಳಿ ಅತ್ಯಂತ ಸೂಕ್ತವಾಗಿದೆ.

ಸಾನನ್ ಮೇಕೆ ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡುತ್ತದೆ?

ಹಾಲು ನೀಡುವಲ್ಲಿ ಈ ವಿದೇಶಿ ತಳಿ ಇತರೆಲ್ಲಾ ತಳಿಗಳಿಗಿಂತ ಮುಂಚೂಣಿಯಲ್ಲಿದ್ದು, ದಾಖಲೆ ಪ್ರಮಾಣದ ಹಾಲು ಕೊಡುತ್ತದೆ. ಮೇಕೆಗಳನ್ನು ಚೆನ್ನಾಗಿ ನೋಡಿಕೊಂಡು, ಉತ್ತಮ ಪೌಷ್ಟಿಕ ಆಹಾರ ನೀಡಿ ಸರಿಯಾಗಿ ಮೇಯಿಸಿದರೆ, ಇವು ದಿನಕ್ಕೆ ತಲಾ 3 ರಿಂದ 5 ಲೀಟರ್ ವರೆಗೆ ಸುಲಭವಾಗಿ ಹಾಲು ನೀಡುತ್ತವೆ. ದು ವರ್ಷದಲ್ಲಿ ಈ ತಳಿಯ ಮೇಕೆಗಳು ಸುಮಾರು 800 ರಿಂದ 1,000 ಲೀಟರ್ ವರೆಗೆ ಹಾಲು ಕೊಡುತ್ತವೆ. ದರ ಹಾಲು ಅತ್ಯಂತ ಗಟ್ಟಿ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಈ ಹಾಲಿನಿಂದ ಉತ್ತಮ ಗುಣಮಟ್ಟದ ಪನೀರ್, ತುಪ್ಪ ಮತ್ತು ಖೋವಾ (ಖವಾ) ತಯಾರಿಸಲಾಗುತ್ತದೆ. ಇದರ ಅದ್ಭುತ ರುಚಿಯಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟವೂ ಹೆಚ್ಚಾಗಿರುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಈ ಮೇಕೆಯ ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಸಾನನ್ ಮೇಕೆಗಳ ಬೆಲೆಯು ಅವುಗಳ ವಯಸ್ಸು, ಆರೋಗ್ಯ ಮತ್ತು ಹಾಲು ಕೊಡುವ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಒಂದು ಸಾನನ್ ತಳಿಯ ಮೇಕೆ ಖರೀದಿಸಲು ₹25,000 ದಿಂದ ₹40,000 ದವರೆಗೆ ಹಣ ನೀಡಬೇಕಾಗುತ್ತದೆ.ಉತ್ತಮ ತಳಿಯ ಗಂಡು ಮೇಕೆ ಖರೀದಿಸಲು ₹20,000 ದಿಂದ ₹35,000 ದವರೆಗೆ ಖರ್ಚಾಗುತ್ತದೆ. ನೀವು ಸರ್ಕಾರದ ನಿಯಮಾವಳಿಗಳಡಿ ನೋಂದಾಯಿತ (Registered) ಹೈ-ಕ್ವಾಲಿಟಿ ಸಾನನ್ ಮೇಕೆ ಖರೀದಿಸಬೇಕಾದರೆ ₹50,000 ದಿಂದ ₹60,000 ದವರೆಗೆ ಬೆಲೆ ಇರುತ್ತದೆ.

ಹಾಲಿನ ಮಾರುಕಟ್ಟೆ ಮೌಲ್ಯ ಮತ್ತು ಭಾರಿ ಬೇಡಿಕೆ

ಸಾನನ್ ಮೇಕೆ ಹಾಲಿಗೆ ಮಾರುಕಟ್ಟೆಯಲ್ಲಿ ಚಿನ್ನದಂತಹ ಬೆಲೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇದರ ಹಾಲು ಪ್ರತಿ ಲೀಟರ್‌ಗೆ ₹150 ರಿಂದ ₹200 ರವರೆಗೆ ಮಾರಾಟವಾಗುತ್ತದೆ. ಮೊದಲೇ ಹೇಳಿದಂತೆ, ಪ್ರೀಮಿಯಂ ಸೋಪ್, ಕ್ರೀಮ್‌ಗಳಂತಹ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಈ ಹಾಲಿಗೆ ಭಾರಿ ಬೇಡಿಕೆಯಿರುವುದರಿಂದ ರೈತರು ಮತ್ತು ಯುವಕರು ಈ ಮೇಕೆ ಸಾಕಾಣಿಕೆಯನ್ನು ದೊಡ್ಡ ಮಟ್ಟದ ಬಿಸಿನೆಸ್ ಆಗಿ ಸುಲಭವಾಗಿ ಪರಿವರ್ತಿಸಬಹುದು.