8 ವರ್ಷದ ಈ ಬಾಲಕನ ಆದಾಯ 185 ಕೋಟಿ ರೂ..!
ಜಗತ್ತಿನ ಹಲವು ದೇಶಗಳು ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ ಎಂದೆಲ್ಲಾ ಗೋಳಾಡುತ್ತಿದ್ದರೆ, ಇತ್ತ ವಿಯೆಟ್ನಾಂ ಮೂಲದ ಅಮೆರಿಕದಲ್ಲಿ ನೆಲೆಸಿರುವ 8 ವರ್ಷದ ಬಾಲಕನೊಬ್ಬ ಈ ವರ್ಷ ಭರ್ಜರಿ 185 ಕೋಟಿ ರು. ಆದಾಯ ಸಂಗ್ರಹಿಸಿದ್ದಾನೆ.
ನ್ಯೂಯಾರ್ಕ್ (ಡಿ. 20): ಜಗತ್ತಿನ ಹಲವು ದೇಶಗಳು ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ ಎಂದೆಲ್ಲಾ ಗೋಳಾಡುತ್ತಿದ್ದರೆ, ಇತ್ತ ವಿಯೆಟ್ನಾಂ ಮೂಲದ ಅಮೆರಿಕದಲ್ಲಿ ನೆಲೆಸಿರುವ 8 ವರ್ಷದ ಬಾಲಕನೊಬ್ಬ ಈ ವರ್ಷ ಭರ್ಜರಿ 185 ಕೋಟಿ ರು. ಆದಾಯ ಸಂಗ್ರಹಿಸಿದ್ದಾನೆ.
ಮಕ್ಕಳ ಆಟಿಕೆ ಕುರಿತು ವಿಡಿಯೋ ರಿವ್ಯೂ ಮಾಡುವ ಮೂಲಕ ಯುಟ್ಯೂಬ್ ಸ್ಟಾರ್ ಆಗಿರುವ ರಾರಯನ್ ಕಜಿಗೆ 2019ರಲ್ಲಿ ಇಷ್ಟೊಂದು ಆದಾಯ ಬಂದಿದೆ. ಈ ಮೂಲಕ ಯುಟ್ಯೂಬ್‌ನಲ್ಲಿ ಅತಿ ಹೆಚ್ಚು ಆದಾಯ ಸಂಗ್ರಹಿಸಿದವರ ಪಟ್ಟಿಯಲ್ಲಿ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. 2018ರಲ್ಲಿ ಈತನ ಆದಾಯ 155 ಕೋಟಿ ರು. ಇತ್ತು.
ಅತಿ ಹೆಚ್ಚು ಸಂಬಳ ಕೊಡುವ ನಗರ: ಬೆಂಗಳೂರು ನಂ.1!
ಆಟಿಕೆಗಳ ಕುರಿತ ಈತನ ವಿಮರ್ಶೆ ಅದೆಷ್ಟುಖ್ಯಾತಿ ಹೊಂದಿವೆಯೆಂದರೆ ಈತನ ಸಾವಿರಾರು ವಿಡಿಯೋಗಳು ಇದುವರೆಗೆ 3000 ಕೋಟಿ ಬಾರಿ ವೀಕ್ಷಿಸಲ್ಪಟ್ಟಿವೆ. ಈತನ ಬ್ರ್ಯಾಂಡ್‌ನೇಮ್‌ನಲ್ಲೇ 80ಕ್ಕೂ ಹೆಚ್ಚು ಉತ್ಪನ್ನಗಳೂ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈತನದ್ದೇ ಆತ ರ್ಯಾನ್ಸ್ ವರ್ಲ್ಡ್ ಎಂಬ ಯುಟ್ಯೂಬ್ ಚಾನೆಲ್ ಇದ್ದು ಅದಕ್ಕೆ 2 ಕೋಟಿಗೂ ಹೆಚ್ಚು ಚಂದಾದಾರರಿದ್ದಾರೆ.