ಉಕ್ರೇನ್ ದೇಶದ ಮೇಲೆ ಮುಂದುವರಿದ ರಷ್ಯಾ ಆಕ್ರಮಣಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ ರಷ್ಯಾ ಸಮರಸ್ಮಾರ್ಟ್ ಫೋನ್ ಗಳು ದುಬಾರಿಯಾಗುವ ಸಾಧ್ಯತೆ ಅಧಿಕ
ಕೈವ್ (ಫೆ. 25): ನೆರೆಯ ಉಕ್ರೇನ್ ನ (Ukraine) ಮೇಲೆ ದಶದಿಕ್ಕುಗಳಿಂದ ಆಕ್ರಮಣ ನಡೆಸಿರುವ ರಷ್ಯಾ (Russia) ಯಾವುದೇ ಕಾರಣಕ್ಕೂ ದೇಶವನ್ನು ವಶಪಡಿಸಿಕೊಳ್ಳದೇ ಸುಮ್ಮನಾಗುವುದಿಲ್ಲ ಎಂದು ಹೇಳಿದೆ. ಇನ್ನೊಂದೆಡೆ ಉಕ್ರೇನ್ ಕೂಡ ಹೋರಾಟವಿಲ್ಲದೆ ರಷ್ಯಾಗೆ ಶರಣಾಗುವುದಿಲ್ಲ ಎಂದು ಹೇಳಿದೆ. ಈ ಎರಡೂ ದೇಶಗಳ ನಡುವಿನ ಯುದ್ಧ ವಿಶ್ವದ ಇತರ ದೇಶಗಳ ಮೇಲೂ ಪರಿಣಾಮ ಬೀರಲಿದೆ. ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟಿನ ಪರಿಣಾಮವಾಗಿ ಚಿಪ್ ವ್ಯತ್ಯಯದಿಂದಾಗಿ (Chip Shortage) ಸಂಕಷ್ಟದಲ್ಲಿರುವ ಉದ್ದಿಮೆಗಳು ಮತ್ತೊಮ್ಮೆ ಅಪಾಯವನ್ನು ಎದುರಿಸಿವೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ನೇರ ಪರಿಣಾಮ ಸ್ಮಾರ್ಟ್ ಫೋನ್ ಗಳ (Smart Phone) ಮೇಲೆ ಆಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಮಟ್ಟದ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಶೋಧನಾ ಸಂಸ್ಥೆ ಟೆಕ್ಸೆಟ್ (Techcet) ಪ್ರಕಾರ, ಉಕ್ರೇನ್ ದೇಶವು ನಿಯಾನ್ ಅನಿಲದ (Neon Gas) ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಚಿಪ್ (Chip) ಮಾಡಲು ಬಳಸುವ ಲೇಸರ್ ಗಾಗಿ ನಿಯಾನ್ ಗ್ಯಾಸ್ ಅನ್ನು ಬಳಸಲಾಗುತ್ತದೆ. ಯುಎಸ್ ಸೆಮಿಕಂಡಕ್ಟರ್ ಗ್ರೇಡ್ ನಿಯಾನ್ ನ ಶೇ. 90ರಷ್ಟು ಪೂರೈಕೆಯಾಗುವುದು ಉಕ್ರೇನ್ ದೇಶದಿಂದ.
ಪಲ್ಲಾಡಿಯಂನ 35 ಪ್ರತಿಶತದ ಮೂಲ ರಷ್ಯಾ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಹೇಳಿದೆ. ಈ ಅಪರೂಪದ ಲೋಹವನ್ನು ಅರೆವಾಹಕಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಈಗ ಈ ಎರಡೂ ದೇಶಗಳು ಯುದ್ಧದ ನಡುವೆ ಇರುವ ಕಾರಣ, ಈ ಅಂಶಗಳ ರಫ್ತನ್ನು ಕಡಿಮೆ ಮಾಡುತ್ತದೆ ಮತ್ತು ಇದು ಇಂಟೆಲ್‌ನಂತಹ ದೊಡ್ಡ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಯಾಕೆಂದರೆ, ಪೂರ್ವ ಯುರೋಪ್ ನಿಂದಲೇ ಈ ಕಂಪನಿಗಳಿಗೆ ಶೇ. 50ರಷ್ಟು ನಿಯಾನ್ ಪೂರೈಕೆಯಾಗುತ್ತದೆ.
ಜೆಪಿ ಮಾರ್ಗನ್ ಸಂಸ್ಥೆಯ ಪ್ರಕಾರ ಈ ಕಂಪನಿಗಳು, ಚೀನಾ, ಅಮೆರಿಕ ಹಾಗೂ ಕೆನಡಾದ ಸಹಾಯವನ್ನು ಕೇಳವ ಮೂಲಕ ನಿಯಾನ್ ಗ್ಯಾಸ್ ಪೂರೈಕೆಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಈ ಪ್ರಕ್ರಿಯೆ ಸಾಕಷ್ಟು ನಿಧಾನವಾಗಿ ನಡೆಯುತ್ತಿದೆ. 2021ರಲ್ಲಿ ಬಹುತೇಕ ಕಂಪನಿಗಳು ಮೈಕ್ರೋ ಚಿಪ್ ನ ಕೊರತೆಯನ್ನು ಎದುರಿಸಿದ್ದು, 2022ರ ಕೊನೆಯಲ್ಲಿ ಈ ಸಮಸ್ಯೆ ಕೊನೆಗೊಳ್ಳಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೆ, ರಷ್ಯಾ ಹಾಗೂ ಉಕ್ರೇನ್ ನಡುವೆ ತಲೆದೋರಿರುವ ಬಿಕ್ಕಟ್ಟು ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ.
Russia Ukraine Crisis: ಯುದ್ಧದಿಂದ ಗ್ಲೋಬಲ್ ಎಕಾನಾಮಿ ತಲ್ಲಣ: ಭಾರತದ ಆರ್ಥಿಕತೆಗೂ ಭಾರೀ ಹೊಡೆತ!
ಆದರೆ, ಯುದ್ಧದ ನಡುವೆ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ರಷ್ಯಾ ಮೇಲೆ ನಿರ್ಬಂಧ ಹೇರುವುದಾಗಿ ಹೇಳಿರುವ ಅಮೆರಿಕ, ರಷ್ಯಾದಿಂದ ಮೈಕ್ರೋಚಿಪ್ ಪೂರೈಕೆಯನ್ನು ನಿಲ್ಲಿಸುವುದಾಗಿಯೂ ಹೇಳಲಾಗಿದೆ. ಆದರೆ, ಮೈಕ್ರೋ ಚಿಪ್ ಗಳನ್ನು ತಯಾರಿಸಲು ಬಳಕೆ ಮಾಡುವ ಉತ್ಪನ್ನಗಳ ವಿಶ್ವದ ಅತ್ಯಂತ ದೊಡ್ಡ ಪೂರೈಕೆದಾರ ರಾಷ್ಟ್ರ ರಷ್ಯಾ ಹಾಗೂ ಉಕ್ರೇನ್ ಆಗಿದೆ.
Russia Ukraine Crisis:ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ಏರಿಕೆ; ಗಗನಕ್ಕೇರಿದ ಚಿನ್ನದ ದರ; ಭಾರತದ ಮೇಲೇನು ಪರಿಣಾಮ?
ಚಿಪ್ ತಯಾರಕರು ಈ ಸಮಸ್ಯೆಯನ್ನು ಒಂದು ವಾರ ಅಥವಾ ಎರಡು ವಾರಗಳವರೆಗೆ ತಡೆಹಿಡಿಯಬಹುದು. ಆದರೆ, ದೀರ್ಘಕಾಲದವರೆಗೆ ಪೂರೈಕೆ ಸ್ಥಗಿತಗೊಂಡರೆ, ಅದರ ದೊಡ್ಡ ಪರಿಣಾಮವು ಕಂಡುಬರುತ್ತದೆ. ಇದು ಅರೆವಾಹಕಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಸ್ಮಾರ್ಟ್‌ಫೋನ್‌ಗಳು, ಕಾರುಗಳಂತಹ ಮೈಕ್ರೋಚಿಪ್ ಉತ್ಪನ್ನಗಳೂ ದುಬಾರಿಯಾಗಲಿವೆ. ಇನ್ನೊಂದೆಡೆ ರಷ್ಯಾದ ಸೇನೆಯು ಉಕ್ರೇನ್ ನ ರಾಜಧಾನಿ ಕೈವ್ ಗೆ ತಲುಪಿದ್ದು, ದೊಡ್ಡ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ರಷ್ಯಾ ಜನವಸತಿ ಪ್ರದೇಶದಲ್ಲಿ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಆದರೆ, ಉಕ್ರೇನ್ ನ ರಕ್ಷಣಾ ವ್ಯವಸ್ಥೆ ಎರಡು ಅಪಾಯಕಾರಿ ಗಿಫ್ಟ್ ಗಳನ್ನು ರಷ್ಯಾಗೆ ನೀಡಿದೆ ಎಂದು ಉಕ್ರೇನ್ ತಿಳಿಸಿದೆ.
