Russia Ukraine Crisis:ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ಏರಿಕೆ; ಗಗನಕ್ಕೇರಿದ ಚಿನ್ನದ ದರ; ಭಾರತದ ಮೇಲೇನು ಪರಿಣಾಮ?
*ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಗಗನಕ್ಕೇರಿದ ಚಿನ್ನದ ಬೆಲೆ
*ಬಾಂಬೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ
*2014ರ ಬಳಿಕ ದಾಖಲೆ ಏರಿಕೆ ಕಂಡ ಕಚ್ಚಾ ತೈಲ ಬೆಲೆ
Business Desk: ರಷ್ಯಾ (Russia)-ಉಕ್ರೇನ್ (Ukraine) ನಡುವಿನ ಬಿಕ್ಕಟ್ಟು ಇಂದು (ಫೇ.24) ಯುದ್ಧದ (War) ಸ್ವರೂಪ ಪಡೆದಿದೆ. ರಷ್ಯಾದ (Russia) ಸೇನೆ (Millitary) ಉಕ್ರೇನ್ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧ ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸುತ್ತಿದ್ದಂತೆ ಇತ್ತ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.
ಕಚ್ಚಾ ತೈಲ (Crude Oil) ಬೆಲೆಯಲ್ಲಿ (Price) ಪ್ರತಿ ಬ್ಯಾರಲ್ ಗೆ 100 ಡಾಲರ್ ಏರಿಕೆಯಾಗಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೆಚ್ಚಳ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿದೆ. ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನದ (Gold) ಬೆಲೆಯಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಚಿನ್ನದ ಬೆಲೆಯೇರಿಕೆ ಭಾರತದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ.
Russia Ukraine Crisis: ಉದ್ವಿಗ್ನ ಪರಿಸ್ಥಿತಿ ತಣ್ಣಗಾಗಿಸುವುದು ಮೊದಲ ಆದ್ಯತೆ: ವಿಶ್ವಸಂಸ್ಥೆಯಲ್ಲಿ ಭಾರತ ಕರೆ!
ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಪರಿಣಾಮ?: ರಷ್ಯಾದೊಂದಿಗೆ ಭಾರತ (India) ಬೃಹತ್ ವ್ಯಾಪಾರ (Trade) ಸಂಬಂಧ ಹೊಂದಿದೆ. ಹೀಗಾಗಿ ರಷ್ಯಾ-ಉಕ್ರೇನ್ ಸಂಘರ್ಷ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರೋದ್ರಲ್ಲಿ ಎರಡು ಮಾತಿಲ್ಲ. ಇನ್ನು ಯಾವುದೇ ಒಂದು ಆರ್ಥಿಕತೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಮನಾರ್ಹ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ, ಇವು ಆ ರಾಷ್ಟ್ರದ ಆರ್ಥಿಕ ಆರೋಗ್ಯವನ್ನು ಬಿಂಬಿಸುತ್ತವೆ ಕೂಡ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾದಾಗ ಅದು ಪರೋಕ್ಷವಾಗಿ ಅನೇಕ ಸರಕುಗಳು ಹಾಗೂ ಸೇವೆಗಳ ಬೆಲೆಯೇರಿಕೆಗೂ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ನೋಡೋದಾದ್ರೆ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳೋ ಕಚ್ಚಾ ತೈಲ ಹಾಗೂ ಅನಿಲದ ಪ್ರಮಾಣ ತುಂಬಾನೇ ಕಡಿಮೆ.
ಇದಕ್ಕೆ ಒಂದು ಕಾರಣ ಭಾರತದ ಬಹುತೇಕ ರಿಫೈನರಿಗಳು (Refineries) ರಷ್ಯಾ ರಫ್ತು ಮಾಡೋ ಭಾರೀ ಕಚ್ಚಾ ತೈಲಗಳನ್ನು ಸಂಸ್ಕರಿಸುವಷ್ಟು ಸಾರ್ಮಥ್ಯ ಹೊಂದಿಲ್ಲ. ಇನ್ನೊಂದು ದುಬಾರಿ ಸಾಗಣೆ ವೆಚ್ಚ. ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಸಾಗಣೆ ವೆಚ್ಚ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಹೋಲಿಸಿದ್ರೆ ದುಬಾರಿ ಎಂದೇ ಹೇಳಬಹುದು. ಈ ಕಾರಣದಿಂದ ಭಾರತ ಕಚ್ಚಾ ತೈಲಕ್ಕೆ ರಷ್ಯಾದ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರದ ಕಾರಣ ಈ ಸಂಘರ್ಷ ತೈಲ ಪೂರೈಕೆ ಹಾಗೂ ಬೆಲೆ ಮೇಲೆ ಗಂಭೀರ ಪರಿಣಾಮ ಬೀರೋ ಸಾಧ್ಯತೆಯಿಲ್ಲ.ಆದ್ರೆ ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಯೇರಿಕೆ ಮಾತ್ರ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಪರೋಕ್ಷ ಪರಿಣಾಮ ಬೀರೋದು ಖಚಿತ.
Russia Ukraine Crisis: ಉಕ್ರೇನ್ ವಾಯುನಲೆ ಮೇಲೆ ರಷ್ಯಾ ದಾಳಿ: ವಾಯುಸೇನೆ ನಿಷ್ಕ್ರಿಯ: ವರದಿ
ಕಚ್ಚಾ ತೈಲ ರಫ್ತಿನಲ್ಲಿ ಶೇ.11ರಷ್ಟು ರಷ್ಯಾ ಪಾಲು: ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾ ಶೇ.11ರಷ್ಟು ಪಾಲು ಹೊಂದಿದೆ. ಒಂದು ವೇಳೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮೇಲೆ ಜಾಗತಿಕ ಮಟ್ಟದಲ್ಲಿ ನಿರ್ಬಂಧ ವಿಧಿಸಿದ್ರೆ ಅದು ನೇರವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆ ಮೇಲೆ ಶೇ.60ರಷ್ಟು ಪರಿಣಾಮ ಬೀರೋ ಸಾಧ್ಯತೆಯಿದೆ. ಇದು ಕಚ್ಚಾ ತೈಲ ಬೆಲೆಯಲ್ಲಿ ಇನ್ನಷ್ಟು ಏರಿಕೆಗೆ ಕಾರಣವಾಗೋ ಸಾಧ್ಯತೆಯೂ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ (ಫೆ.24) ಚಿನ್ನದ ಬೆಲೆಯಲ್ಲಿ ಶೇ.1.1 ಹೆಚ್ಚಳ ಕಂಡುಬಂದಿದ್ದು, ಪ್ರತಿ ಔನ್ಸ್ ಗೆ 1,932 ಡಾಲರ್ ಏರಿಕೆಯಾಗಿದೆ.
ಬಾಂಬೆ ಷೇರು ಮಾರುಕಟ್ಟೆ ಕುಸಿತ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಕಂಪನ ಕಂಡುಬಂದಿದೆ. ದಿನದ ವಹಿವಾಟು ಪ್ರಾರಂಭಿಸುತ್ತಿದ್ದಂತೆ 1428 ಅಂಕಗಳ ಕುಸಿತ ದಾಖಲಿಸಿದೆ.