ಭಾರತದ 2ನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾದ Russia: 5ನೇ ಸ್ಥಾನಕ್ಕೆ ಕುಸಿದ ಅಮೆರಿಕ
ಸೆಪ್ಟೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾ ನಂತರ ರಷ್ಯಾ ಭಾರತದ ಎರಡನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರರಾಗಿದೆ. ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ಈ ಹೇಳಿಕೆ ನೀಡಿದೆ.
ರಷ್ಯಾ ಮತ್ತೆ ಭಾರತದ ಎರಡನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾ ನಂತರ ರಷ್ಯಾ ಭಾರತದ ಎರಡನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರರಾಗಿದೆ. ಕಾರ್ಗೋ ಟ್ರ್ಯಾಕರ್ ವೋರ್ಟೆಕ್ಸಾ ಈ ಹೇಳಿಕೆ ನೀಡಿದೆ. 2 ತಿಂಗಳ ಕಾಲ ಕುಸಿದ ನಂತರ ನವದೆಹಲಿಯ ಕಚ್ಚಾ ತೈಲ ಆಮದುಗಳು ಆಗಸ್ಟ್‌ನಿಂದ ಶೇ. 18.5 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. .ಸೆಪ್ಟೆಂಬರ್‌ನಲ್ಲಿ, ದಿನಕ್ಕೆ 879,000 ಬ್ಯಾರೆಲ್‌ಗಳ (bpd)ಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಲಾಗಿದೆ. ಜೂನ್‌ನ 933,000 bpd ನಂತರ ಭಾರತಕ್ಕೆ ಒಂದು ತಿಂಗಳಲ್ಲಿ ಕಚ್ಚಾ ತೈಲ ಎರಡನೇ ಅತಿ ಹೆಚ್ಚು ಆಮದಾಗಿದೆ ಎಂದು ತಿಳಿದುಬಂದಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕಚ್ಚಾ ತೈಲ ಆಮದು ಕಡಿಮೆಯಾಗಿತ್ತು, ಈಗ ಮತ್ತೆ ಸೆಪ್ಟೆಂಬರ್ ತಿಂಗಳಲ್ಲಿ ಆಮದು ಹೆಚ್ಚಾಗಿದೆ.
“ದೇಶೀಯ ಬೇಡಿಕೆ ಮತ್ತು ಯುರೋಪ್‌ನಿಂದ ಹೆಚ್ಚಿನ ರಫ್ತು ಬೇಡಿಕೆಯನ್ನು ಪೂರೈಸಲು ರಿಫೈನರಿಗಳು ಪೂರೈಕೆ ಹೆಚ್ಚಿಸಿರುವುದರಿಂದ, ಭಾರತವು ಈ ತ್ರೈಮಾಸಿಕದಲ್ಲಿ ಹೆಚ್ಚು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಪರಿಗಣಿಸಬಹುದು, ಆದರೆ ಇದು ಬೆಲೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಸ್ಪರ್ಧಿ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಆಫ್ರಿಕಾಕ್ಕೆ ಹೋಲಿಸಿದರೆ ರಷ್ಯಾದ ಕಚ್ಚಾ ತೈಲವನ್ನು ನೀಡಲಾಯಿತು’’ ಎಂದು ವೋರ್ಟೆಕ್ಸಾದ ವಿಶ್ಲೇಷಕಿ ಸೆರೆನಾ ಹುವಾಂಗ್ ಮಾದ್ಯಮವೊಂದಕ್ಕೆ ಹೇಳಿದ್ದಾರೆ.
ಇದನ್ನು ಓದಿ: US Recession ಭೀತಿ: 80 ಡಾಲರ್‌ಗಿಂತ ಕಡಿಮೆಗೆ ಕುಸಿದ Crude Oil; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಯಾವಾಗ..?
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುವ ಮೊದಲು, ಕಚ್ಚಾ ತೈಲ ಆಮದುಗಳು ರಷ್ಯಾದಿಂದ ಕೇವಲ 1 ಪ್ರತಿಶತದಷ್ಟು ಇದ್ದವು. ಏಕೆಂದರೆ ಸರಕು ಸಾಗಣೆಯು ದುಬಾರಿಯಾಗಿತ್ತು. ಆದರೆ ಈಗ ಅದು 21 ಪ್ರತಿಶತಕ್ಕೆ ಏರಿದೆ. ಇದಕ್ಕೆ ಕಾರಣ ರಷ್ಯಾದ ಕಚ್ಚಾ ತೈಲ ವ್ಯಾಪಾರಿಗಳು ಹೆಚ್ಚು ರಿಯಾಯಿತಿಗಳನ್ನು ಒದಗಿಸಿರುವುದು. ಫೆಬ್ರವರಿಯಿಂದ, ಮಾಸ್ಕೋ ಉಕ್ರೇನ್ ಅನ್ನು ಆಕ್ರಮಿಸಿದಾಗ, ಆಮದು ಬಿಲ್‌ಗಳನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ರಿಯಾಯಿತಿಯಲ್ಲಿ ರಷ್ಯಾದ ತೈಲದ ಆಮದುಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿತು. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.
ಹೆಚ್ಚುತ್ತಿರುವ ರಷ್ಯಾದ ಆಮದುಗಳು ಯುಎಸ್, ಇರಾಕ್ ಮತ್ತು ಯುಎಇಯಂತಹ ಇತರ ಪ್ರಮುಖ ರಫ್ತುದಾರರಿಗೆ ಮಾರುಕಟ್ಟೆ ಪಾಲು ದೊಡ್ಡ ಹೊಡೆತವನ್ನು ನೀಡಿತು. ಕಳೆದ ತಿಂಗಳು, ಸೌದಿ ಅರೇಬಿಯಾ ಭಾರತಕ್ಕೆ ಅಗ್ರ ಪೂರೈಕೆದಾರನಾಗಿ ಹೊರಹೊಮ್ಮಿತು. ಆದರೆ ಇರಾಕ್ ಮತ್ತು ಯುಎಇ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿದೆ. ಪ್ರಸ್ತುತ, ಅಮೆರಿಕ ಐದನೇ ಅತಿದೊಡ್ಡ ಪೂರೈಕೆದಾರನಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 4 ಪ್ರತಿಶತವನ್ನು ಹೊಂದಿದೆ. ಇದು ಒಂದು ವರ್ಷದ ಹಿಂದೆ ಶೇ. 10 ಪ್ರತಿಶತದಷ್ಟು ಕಚ್ಚಾ ತೈಲವನ್ನು ಪೂರೈಸುತ್ತಿತ್ತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷದ ಪ್ರಯೋಜನ ಪಡೆದ ಭಾರತ; ತೈಲ ಆಮದಿನಿಂದ 35,000 ಕೋಟಿ ರೂ. ಲಾಭ
2022 ರ ಮೊದಲ ತ್ರೈಮಾಸಿಕದಲ್ಲಿ ಸರಾಸರಿ 60,000 ಬಿಪಿಡಿಯಿಂದ ಸೆಪ್ಟೆಂಬರ್‌ನಲ್ಲಿ ಇಂಧನ ತೈಲ ಆಮದು ಸುಮಾರು 100,000 ಬಿಪಿಡಿಗೆ ತಲುಪುವುದರೊಂದಿಗೆ ರಷ್ಯಾದ ಸಂಸ್ಕರಿಸಿದ ಉತ್ಪನ್ನಗಳ ಭಾರತದ ಖರೀದಿಯು ಏರಿಕೆಯಾಗಿದೆ. ಅಲ್ಲದೆ, ಭಾರತವು ಸಿಕ್ಕಾ ಬಂದರಿನಲ್ಲಿ ತನ್ನ ಮೊದಲ 90,000 ಟನ್‌ಗಳ ರಷ್ಯಾದ ನಾಫ್ತಾ ಸರಕುಗಳನ್ನುಕಳೆದ ತಿಂಗಳು ಪಡೆಯಿತು ಎಂದು ವೊರ್ಟೆಕ್ಸಾ ಮಾಹಿತಿ ನೀಡಿದೆ. "ಯುರೋಪ್‌ನಲ್ಲಿ ರಷ್ಯಾದ ತೈಲಕ್ಕಾಗಿ ಡಿಮ್ಯಾಂಡ್ ಕಡಿಮೆಯಾಗುತ್ತಿದ್ದು ಮತ್ತು ಸೀಮಿತ ಪರ್ಯಾಯ ತಾಣಗಳೊಂದಿಗೆ, ಭಾರತವು ರಷ್ಯಾಕ್ಕೆ ಹೆಚ್ಚು ಪ್ರಮುಖ ವ್ಯಾಪಾರ ಪಾಲುದಾರನಾಗುತ್ತಿದೆ" ಎಂದು ಸೆರೆನಾ ಹುವಾಂಗ್ ಹೇಳಿದ್ದಾರೆಂದು ತಿಳಿದುಬಂದಿದೆ.