Asianet Suvarna News Asianet Suvarna News

ಏನೂಂದ್ರೆ, ಕರೆನ್ಸಿ ವ್ಯಾಲ್ಯೂ ಜಾಸ್ತಿಯಾಗಲಿದೆ ಮತ್ತೆ ಮೋದಿ ಬಂದ್ರೆ!

ಕೆಟ್ಟ ಪ್ರದರ್ಶನದಿಂದ ಉತ್ತಮ ಪ್ರದರ್ಶನದತ್ತ ರೂಪಾಯಿ ಮೌಲ್ಯ| ಸಾರ್ವತ್ರಿಕ ಚುನಾವಣೆಯತ್ತ ದೃಷ್ಟಿ ನೆಟ್ಟ ಭಾರತದ ಆರ್ಥಿಕ ಕ್ಷೇತ್ರ| 5 ವರ್ಷದಲ್ಲಿ ಬದಲಾಗಿದೆ ಭಾರತದ ಆರ್ಥಿಕ ಚಹರೆ| ‘ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆದಲ್ಲಿ ಭಾರತದ ರೂಪಾಯಿ ಮೌಲ್ಯ ವೃದ್ಧಿ’| ಸಿಂಗಾಪೂರದ ಸ್ಕಾಟಿಯಾ ಬ್ಯಾಂಕ್ ಕರೆನ್ಸಿ ತಜ್ಞ ಗಾವೋ ಕಿ ಅಭಿಮತ| ‘ಜೂನ್ ತಿಂಗಳಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 67 ರೂ. ಆಗಿರಲಿದೆ’| 

Rupee Value Will Be High If Modi Comes In Power For Second Term
Author
Bengaluru, First Published Mar 20, 2019, 12:33 PM IST

ನವದೆಹಲಿ(ಮಾ.20): ಲೋಕಸಭೆ ಚುನಾವಣೆ ಕಾವು ಎಲ್ಲಾ ಕ್ಷೇತ್ರವನ್ನು ಆವರಿಸಿದೆ. ಅದರಲ್ಲೂ ಭಾರತದ ಆರ್ಥಿಕ ಕ್ಷೇತ್ರ ಸಾರ್ವತ್ರಿಕ ಚುನಾವಣೆಯತ್ತ ದೃಷ್ಟಿ ನೆಟ್ಟು ಕುಳಿತಿದೆ.

ಕಳೆದ 5 ವರ್ಷದಲ್ಲಿ ಭಾರತದ ಆರ್ಥಿಕ ಚಹರೆ ಬಹುವಾಗಿ ಬದಲಾಗಿದ್ದು, ಭವಿಷ್ಯದಲ್ಲಿ ಹೊಸ ಸರ್ಕಾರದ ಆರ್ಥಿಕ ನಿಲುವುಗಳ ಕುರಿತು ಈಗಲೇ ಚರ್ಚೆಗಳು ಶುರುವಾಗಿವೆ. ಪ್ರಸಕ್ತ ಸರ್ಕಾರವೇ ಮುಂದುವರೆದಲ್ಲಿ ಆರ್ಥಿಕ ನಾಗಾಲೋಟದ ವೇಗ ಹೆಚ್ಚಾಗಲಿದ್ದು, ಒಂದು ವೇಳೆ ಸರ್ಕಾರ ಬದಲಾದಲ್ಲಿ ಅರ್ಥ ವ್ಯವಸ್ಥೆಯ ಪಲ್ಲಟಗಳಿಗೆ ಮುನ್ನುಡಿ ಬರೆಲಿದೆಯೇ ಎಂಬ ಕುತೂಹಲ ಇದೀಗ ಮನೆ ಮಾಡಿದೆ.

ಈ ಮಧ್ಯೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆದಲ್ಲಿ ಭಾರತದ ರೂಪಾಯಿ ಮೌಲ್ಯ ಏರಲಿದೆ ಎಂದು ಅಂದಾಜಿಸಲಾಗಿದೆ. ಏಷ್ಯಾದ ಅತ್ಯಂತ ಕೆಟ್ಟ ಪ್ರದರ್ಶನದ ಕರೆನ್ಸಿ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಭಾರತದ ರೂಪಾಯಿ ಮೌಲ್ಯ ಕೇವಲ 5 ವಾರಗಳಲ್ಲಿ ಏರಿಕೆಯಾಗಿರುವುದು ಇದಕ್ಕೆ ಪುಷ್ಠಿ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಂಗಾಪೂರದ ಸ್ಕಾಟಿಯಾ ಬ್ಯಾಂಕ್ ಕರೆನ್ಸಿ ತಜ್ಞ ಗಾವೋ ಕಿ, ಎರಡನೇ ಅವಧಿಗೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆದರೆ ಮುಂಬರುವ ಜೂನ್ ತಿಂಗಳಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 67 ರೂ. ಆಗಿರಲಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios