ಡೀಸೆಲ್ ಬೆಲೆ, ಡಾಲರ್ ಬೆಲೆ ಎರಡೂ ಒಂದೇ: ಏನಾಗತ್ತೋ ಇನ್ಮುಂದೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 12:22 PM IST
Rupee Collapses To Lifetime Low Of 72.91 Against US Dollar
Highlights

ಮತ್ತೆ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ! ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ! ಪ್ರತೀ ಡಾಲರ್ ಗೆ 72.91 ರೂ. ಗೆ ತಲುಪಿದ ರೂಪಾಯಿ ಮೌಲ್ಯ! ಸರಕು ಸಾಗಣೆ ವೆಚ್ಚಗಳ ಬೆಲೆ ದುಬಾರಿ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾದ ಕಚ್ಚಾ ತೈಲದರ

 

ಮುಂಬೈ(ಸೆ.12): ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆ ಮುಂದುವರೆದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73 ರ ಸನಿಹಕ್ಕೆ ಬಂದು ತಲುಪಿದೆ. 

ಇಂದು ವಹಿವಾಟು ಪ್ರಾರಂಭವಾಗುತ್ತಿದ್ದಂತೇ ಡಾಲರ್ ಎದುರು ರೂಪಾಯಿ ಮೌಲ್ಯ 72.91 ರಷ್ಟಕ್ಕೆ ಕುಸಿಯಿತು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 78 ಡಾಲರ್ ಗೆ ತಲುಪಿರುವ ಹಿನ್ನೆಲೆಯಲ್ಲಿ ಡಾಲರ್ ತನ್ನ ಪ್ರಾಬಲ್ಯ ಕಾಯ್ದುಕೊಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈ ವರ್ಷದ ಆರಂಭದಿಂದ ಇದುವರೆಗೆ ರೂಪಾಯಿ ಮೌಲ್ಯ ಶೇ.12 ರಷ್ಟು ಕುಸಿತಗೊಂಡಿದ್ದು, ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

 

ಅದೇ ಕತೆ, ನಮಗಷ್ಟೇ ವ್ಯಥೆ: ಮತ್ತೆ ಕುಸಿದ ರೂಪಾಯಿ ಮೌಲ್ಯ!

ಪ್ಲೀಸ್.. ಗಾಂಧಿ ನೋಟನ್ನು ಕಾಪಾಡಿ ಮೋದಿ!

ಹೆದ್ರಬ್ಯಾಡ್ರಿ ನಾ ಇದ್ದೇನೆ: ಎಲ್ಲರ 'ಆ' ಆತಂಕಕ್ಕೆ ಜೇಟ್ಲಿ 'ಈ' ಉತ್ತರ!

ರೊಕ್ಕಾ ಅಲ್ಲ ಡಾಲರ್ ಪ್ರಾಬ್ಲಂ: ಧಮೇಂದ್ರ ಹೊಸ ಲೆಕ್ಕ!

ಸೆನ್ಸೆಕ್ಸ್'ನ್ನೂ ಪಾತಾಳಕ್ಕೆ ಎಳೆದೊಯ್ದ ರೂಪಾಯಿ ಮೌಲ್ಯ ಕುಸಿತ!

loader