Asianet Suvarna News Asianet Suvarna News

ಜೂ.1ರಿಂದ ಈ 4 ನಿಯಮಗಳಲ್ಲಿ ಬದಲಾವಣೆ; ಹೆಚ್ಚಲಿದೆ ಜನರ ಜೇಬಿನ ಹೊರೆ

ಪ್ರತಿ ತಿಂಗಳ ಪ್ರಾರಂಭದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ಜೂನ್ ತಿಂಗಳ ಪ್ರಾರಂಭದಲ್ಲಿ ಕೂಡ 4 ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. 
 

rule change from june 1 2023 lpg cylinder prices electric two wheelers rbi new scheme anu
Author
First Published May 30, 2023, 5:20 PM IST

Business Desk: ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಒಂದಷ್ಟು ನಿಯಮಗಳಲ್ಲಿ ಬದಲಾವಣೆಯಾಗುವುದು ಸಹಜ. ನಾವೀಗ ಮೇ ತಿಂಗಳ ಅಂತಿಮ ಘಟ್ಟದಲ್ಲಿದ್ದೇವೆ. ಜೂನ್ ತಿಂಗಳು ಪ್ರಾರಂಭವಾಗಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಜೂನ್ 1ರಿಂದ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಅಡುಗೆ ಅನಿಲದ ಬೆಲೆ ಪರಿಷ್ಕರಣೆಯಾಗಲಿದೆ. ಇನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸಲು ಯೋಚಿಸುತ್ತಿರೋರ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಏಕೆಂದರೆ ಜೂ.1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದುಬಾರಿಯಾಗಲಿವೆ. ನಿಷ್ಕ್ರಿಯ ಠೇವಣಿಗಳಿಗೆ ಸಂಬಂಧಿಸಿ ಆರ್ ಬಿಐ '100 ದಿನಗಳು 100 ಪಾವತಿಗಳು' ಎಂಬ ಅಭಿಯಾನವನ್ನು ಜೂ.1ರಿಂದ ಪ್ರಾರಂಭಿಸಲಿದೆ. ಸಿಎನ್ ಜಿ ಹಾಗೂ ಪಿಎನ್ ಜಿ ದರದಲ್ಲಿ ಕೂಡ ಬದಲಾವಣೆಯಾಗಲಿದೆ. ಈ ಎಲ್ಲ ಬದಲಾವಣೆಗಳು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಜೂನ್ ತಿಂಗಳಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಅದರಿಂದ ಏನೆಲ್ಲ ಪರಿಣಾಮಗಳಾಗಲಿವೆ? ಇಲ್ಲಿದೆ ಮಾಹಿತಿ.

1.ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ
ನೀವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ. ಏಕೆಂದ್ರೆ ಜೂ.1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದುಬಾರಿಯಾಗಲಿವೆ. ಇದಕ್ಕೆ ಕಾರಣ ಸರ್ಕಾರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ನೀಡುತ್ತಿದ್ದ ಸಬ್ಸಿಡಿಯಲ್ಲಿ ಜೂ.1ರಿಂದ ಕಡಿತ ಮಾಡಲಿದೆ. ಈ ಹಿಂದೆ ಪ್ರತಿ kWhಗೆ 15 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಇದನ್ನು ಪ್ರತಿ kWhಗೆ 10 ಸಾವಿರ ರೂ. ಗೆ ಇಳಿಕೆ ಮಾಡಲಾಗಿದೆ. ಇದರಿಂದ ಜೂ.1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ 25,000ರೂ.ನಿಂದ 30,000ರೂ. ತನಕ ದುಬಾರಿಯಾಗಲಿದೆ. 

ಈ 6 ಹಣಕಾಸು ಸಂಬಂಧಿ ಕೆಲಸಗಳಿಗೆ ಜೂನ್ ತಿಂಗಳಲ್ಲಿ ಅಂತಿಮ ಗಡುವು, ಆದಷ್ಟು ಬೇಗ ಮಾಡಿ ಮುಗಿಸಿ

2.100 ದಿನಗಳು 100 ಪಾವತಿಗಳು
ಕ್ಲೇಮ್ ಆಗದ ಠೇವಣಿಗಳನ್ನು ಅದರ ನಿಜವಾದ ಹಕ್ಕುದಾರರಿಗೆ ಹಿಂತಿರುಗಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) '100 ದಿನಗಳು 100 ಪಾವತಿಗಳು' ಎಂಬ ಕಾರ್ಯಕ್ರಮವನ್ನು ಜೂ.1ರಿಂದ ಪ್ರಾರಂಭಿಸಲಿದೆ.  ಮೇ 12ರಂದು ಆರ್ ಬಿಐ ನೀಡಿದ ಹೇಳಿಕೆಯಲ್ಲಿ 100 ದಿನಗಳ ವಿಶೇಷ ಕಾರ್ಯಕ್ರಮದಡಿಯಲ್ಲಿ ಬ್ಯಾಂಕ್ ಗಳು ದೇಶದ ಪ್ರತಿ ಜಿಲ್ಲೆಯ ಟಾಪ್ 100 ನಿಷ್ಕ್ರಿಯ ಠೇವಣಿಗಳ ವಾರಸುದಾರರನ್ನು ಹುಡುಕಿ,ಅವರ ಹಣ ಹಿಂತಿರುಗಿಸಲಿವೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ವಹಿವಾಟು ನಡೆಯದ ಖಾತೆಗಳ ಸಂಖ್ಯೆ ಬಹಳಷ್ಟಿದೆ. ಇಂಥ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಖಾತೆದಾರನ ಮರಣ ಅಥವಾ ಇನ್ನಿತರ ಕಾರಣಗಳಿಂದ ಇಂಥ ಖಾತೆಯಲ್ಲಿರುವ ಹಣವನ್ನು ವಾರಸುದಾರರು ಕ್ಲೇಮ ಮಾಡಿರೋದಿಲ್ಲ.ಇಂಥ ಖಾತೆಗಳಲ್ಲಿನ ಹಣವನ್ನು ವಾರಸುದಾರರಿಗೆ ತಲುಪಿಸಲು ಈ ಕಾರ್ಯಕ್ರಮ ನೆರವು ನೀಡಲಿದೆ.

3.ಅಡುಗೆ ಅನಿಲ ಬೆಲೆ
ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ. ಹೀಗಾಗಿ ಜೂ.1ರಂದು ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. 19ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಬೆಲೆಯನ್ನು ಗ್ಯಾಸ್ ಕಂಪನಿಗಳು ಏಪ್ರಿಲ್ ಹಾಗೂ ಮೇನಲ್ಲಿ ಕಡಿತಗೊಳಿಸಿದ್ದವು. ಆದರೆ, ಮಾರ್ಚ್ ಬಳಿಕ 14ಕೆಜಿ ಗೃಹ ಬಳಕೆ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮಾರ್ಚ್ ತಿಂಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 50ರೂ. ಏರಿಕೆ ಮಾಡಲಾಗಿತ್ತು. 

ಕೆವೈಸಿ ಪ್ರಕ್ರಿಯೆಯನ್ನುಇನ್ನಷ್ಟು ಸರಳಗೊಳಿಸಿದ ಹೊಸ ಡಿಜಿಲಾಕರ್, ಹೇಗೆ? ಇಲ್ಲಿದೆ ಮಾಹಿತಿ

4.ಸಿಎನ್ ಜಿ-ಪಿಎನ್ ಜಿ ದರ
ಸಿಎನ್ ಜಿ ಹಾಗೂ ಪಿಎನ್ ಜಿ ದರ ಕೂಡ ಪ್ರತಿ ತಿಂಗಳ ಮೊದಲ ದಿನ ಅಥವಾ ವಾರದಲ್ಲಿ ಬದಲಾಗುತ್ತದೆ. ಪೆಟ್ರೋಲಿಯಂ ಕಂಪನಿಗಳು ದೆಹಲಿ ಹಾಗೂ ಮುಂಬೈನಲ್ಲಿ ದರ ಪರಿಷ್ಕರಣೆ ಮಾಡುತ್ತವೆ. ಜೂನ್ ಪ್ರಾರಂಭದಲ್ಲಿ ಕೂಡ ಸಿಎನ್ ಜಿ ಹಾಗೂ ಪಿಎನ್ ಜಿ ದರದಲ್ಲಿ ಬದಲಾವಣೆ ಆಗಲಿದೆ. 


 

Follow Us:
Download App:
  • android
  • ios