ಮುಂಬೈ(ಡಿ.10): ಹೆಚ್ಚು ಮೌಲ್ಯದ ಹಣ ವರ್ಗಾವಣೆ ವ್ಯವಸ್ಥೆಯಾದ ಆರ್‌ಟಿಜಿಎಸ್‌ ಸೇವೆಯನ್ನು ಜನ ಸಾಮಾನ್ಯರು ದಿನದ 24 ಗಂಟೆಯೂ ಬಳಕೆ ಮಾಡಬಹುದಾದ ಕಾಲ ದೂರವಿಲ್ಲ.

ಹೌದು ಡಿಸೆಂಬರ್‌ 14ರ ಮಧ್ಯರಾತ್ರಿಯಿಂದಲೇ ದಿನದ 24 ಗಂಟೆಯೂ ಗ್ರಾಹಕರಿಗೆ ಆರ್‌ಟಿಜಿಎಸ್‌ ಸೇವೆ ಲಭ್ಯವಾಗಲಿದೆ. ಇದರೊಂದಿಗೆ ಈ ವ್ಯವಸ್ಥೆ ಜಾರಿ ಮಾಡಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಲಿದೆ. ‘ಡಿ.14ರ ಮಧ್ಯರಾತ್ರಿ 12.30ರಿಂದಲೇ ವರ್ಷಪೂರ್ತಿ ಬೇಕಾದಾಗೆಲ್ಲಾ ಆರ್‌ಟಿಜಿಎಸ್‌ ಸೇವೆಯನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ’ ಎಂದು ಬುಧವಾರ ಆರ್‌ಬಿಐ ಘೋಷಣೆ ಮಾಡಿದೆ.

ಏಪ್ರಿಲ್‌ನಿಂದ ಉದ್ಯೋಗಿಗಳ ಕೈಗೆ ಸಿಗುವ ಸಂಬಳ ಮತ್ತಷ್ಟು ಕಡಿತ!

ಕಡಿಮೆ ಪ್ರಮಾಣದ ಹಣ ವರ್ಗಾವಣೆಗೆ ಪ್ರಸಿದ್ಧಿಯಾದ ನೆಫ್ಟ್‌ ಸೇವೆಯನ್ನು ದಿನದ 24 ಗಂಟೆಯೂ ವಿಸ್ತರಿಸಿದ ವರ್ಷದಲ್ಲೇ ಆರ್‌ಟಿಜಿಎಸ್‌ ಸೇವೆಯನ್ನು 24 ಗಂಟೆಯೂ ವಿಸ್ತರಿಸಿದ ಹೆಗ್ಗಳಿಕೆಗೆ ಆರ್‌ಬಿಐ ಪಾತ್ರವಾಗಿದೆ.

ಕಾಂಟಾಕ್ಟ್‌ಲೆಸ್ ಕಾರ್ಡ್‌ ಪೇಮೆಂಟ್‌ ಮಿತಿ ಏರಿಕೆ

ಇದೇ ವೇಳೆ ಕೇಂದ್ರ ಬ್ಯಾಂಕ್‌ ಸಂಪರ್ಕ ರಹಿತ ಕಾರ್ಡ್‌ ಪಾವತಿ (ಪಿನ್‌ ನಂಬರ್‌ ನಮೂದಿಸದೆ ಕಾರ್ಡ್‌ ಮೂಲಕ ಹಣ ಪಾವತಿ) ಹಾಗೂ ಯುಪಿಐ ಪಾವತಿ ಮಿತಿಯನ್ನೂ ಈಗಿರುವ 2,000 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಏರಿಕೆ ಮಾಡಿದೆ. 2021ರ ಜನವರಿ 1 ರಿಂದ ಇದು ಜಾರಿಗೆ ಬರಲಿದ್ದು, ಈ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ಬಿಡಲಾಗಿದೆ.