ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಜಾಕ್ ಪಾಟ್ ; ಬರೀ ಎರಡೇ ವರ್ಷದಲ್ಲಿ ಶೇ.339 ರಿಟರ್ನ್ಸ್
ಷೇರು ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ಜಾಕ್ ಪಾಟ್ ತಂದುಕೊಡುತ್ತವೆ. ಈ ಒಂದು ಕಂಪನಿಯ ಷೇರು ಕೂಡ ಹೂಡಿಕೆದಾರರಿಗೆ ಬರೀ ಎರಡು ವರ್ಷಗಳ ಅವಧಿಯಲ್ಲಿ ಶೇ.399ರಷ್ಟು ರಿಟರ್ನ್ಸ್ ನೀಡಿದೆ.
Business Desk: ಷೇರು ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ಭಾರೀ ರಿಟರ್ನ್ಸ್ ತಂದುಕೊಡುತ್ತವೆ. ಯಾವ ಷೇರಿನಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಸಿಗುತ್ತೆ ಎಂದು ಯೋಚಿಸುತ್ತಿರುವ ಹೂಡಿಕೆದಾರರು ಈ ಒಂದು ಕಂಪನಿಯ ಷೇರಿನ ಬಗ್ಗೆ ತಿಳಿದುಕೊಳ್ಳಲೇಬೇಕು. ಭಾರತದ ಷೇರು ಮಾರುಕಟ್ಟೆಯ ಬಿಗ್‌ಬುಲ್ ಎಂದೇ ಹೆಸರಾಗಿದ್ದ ರಾಕೇಶ್ ಜುಂಜುನ್‌ವಾಲಾ ಪತ್ನಿ ರೇಖಾ ಜುಂಜುನ್‌ವಾಲಾ ಕೂಡ ಈ ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗಾದ್ರೆ ಕಡಿಮೆ ಅವಧಿಯಲ್ಲಿ ಭಾರೀ ರಿಟರ್ನ್ಸ್ ತಂದುಕೊಟ್ಟ ಈ ಷೇರು ಯಾವುದು ಅಂತೀರಾ? ನಿರ್ಮಾಣ ಸಂಸ್ಥೆ ಎನ್ ಸಿಸಿ ಷೇರುಗಳು. ಕಳೆದ ಎರಡು ವರ್ಷಗಳಲ್ಲಿ ಎನ್ ಸಿಸಿ ಷೇರುಗಳು ಮಲ್ಟಿ ಬ್ಯಾಗರ್ ಷೇರುಗಳಾಗಿ ಬದಲಾಗಿವೆ. 2022ರ ಮೇ 13ರಂದು ಎನ್ ಸಿಸಿ ಷೇರು 62.1ರೂ.ಗೆ ಕ್ಲೋಸ್ ಆಗಿತ್ತು. ಆದರೆ, ಇಂದು (ಮೇ 16) ಟ್ರೇಡಿಂಗ್ ನಲ್ಲಿ ಈ ಷೇರಿನ ಬೆಲೆ 273ರೂ. ಅಂದ್ರೆ ಬರೀ ಎರಡು ವರ್ಷಗಳ ಅವಧಿಯಲ್ಲಿ ಈ ಷೇರು ಹೂಡಿಕೆದಾರರಿಗೆ ಶೇ.399ರಷ್ಟು ರಿಟರ್ನ್ಸ್ ನೀಡಿದೆ. ಈ ಅವಧಿಯಲ್ಲಿ ಬಿಎಸ್ ಇ ಬೆಂಚ್ ಮಾರ್ಕ್ 500 ಸೂಚ್ಯಂಕ ಶೇ.51.69ಕ್ಕೆ ಏರಿಕೆಯಾಗಿದೆ. ಬಿಎಸ್ ಇಯಲ್ಲಿ ಎನ್ ಸಿಸಿ ಷೇರುಗಳು ಈ ನಿನ್ನೆಗಿಂತ ಇಂದು ಶೇ.8ರಷ್ಟು ಏರಿಕೆ ಕಂಡಿವೆ. ನಿನ್ನೆ 251.05 ರೂ.ಗೆ ಕ್ಲೋಸ್ ಆಗಿದ್ರೆ ಇಂದು 272.95ರೂ.ಗೆ ಏರಿಕೆ ಕಂಡಿವೆ. ಇನ್ನು 2024ರ ಏಪ್ರಿಲ್ 5ರಂದು ಈ ಷೇರು 277.90 ರೂ. ದಾಖಲೆಯ ಮಟ್ಟಕ್ಕೆ ತಲುಪಿತ್ತು ಕೂಡ.
ಎನ್ ಸಿಸಿ ಷೇರುಗಳು ಬರೀ ಒಂದು ವರ್ಷದ ಅವಧಿಯಲ್ಲಿ ಶೇ.140ರಷ್ಟು ಗಳಿಕೆ ಕಂಡಿದ್ರೆ, ಈ ವರ್ಷದ ಪ್ರಾರಂಭದಿಂದ ಇಲ್ಲಿಯ ತನಕ ಶೇ.62ರಷ್ಟು ಏರಿಕೆ ಕಂಡಿವೆ. ಇನ್ನು ಈ ಸಂಸ್ಥೆಯ ಮಾರುಕಟ್ಟೆ ಬಡವಾಳ 16,989 ಕೋಟಿ ರೂ. ಇದೆ. ಇನ್ನು ಬಿಎಸ್ ಇಯಲ್ಲಿ ಈ ಕಂಪನಿಯ ಒಟ್ಟು 9.94 ಲಕ್ಷ ಷೇರುಗಳು ಒಬ್ಬರಿಂದ ಒಬ್ಬರಿಗೆ ಮಾರಾಟವಾಗಿದ್ದು, 26.53 ಕೋಟಿ ರೂ. ವಹಿವಾಟು ನಡೆದಿದೆ. ಇನ್ನು ಎನ್ ಸಿಸಿಯ ಆರ್ ಎಸ್ ಐ 53.6ರಷ್ಟಿದೆ. ಇದು ಈ ಕಂಪನಿಯ ಷೇರುಗಳು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಖರೀದಿಯಾಗಲಿಲ್ಲ. ಹಾಗೆಯೇ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇನ್ನು ಎನ್ ಸಿಸಿ ಇಂದು ನಾಲ್ಕನೇ ತ್ರೈಮಾಸಿಕದ ವರದಿ ಪ್ರಕಟಿಸಿದ ಬೆನ್ನಲ್ಲೇ ಷೇರಿನ ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದೆ.
ರಾಕೇಶ್ ಜುಂಜುನ್‌ವಾಲಾ ಪತ್ನಿಗೆ ಒಂದೇ ದಿನ 800 ಕೋಟಿ, ಒಂದು ತಿಂಗಳಲ್ಲಿ 2360 ಕೋಟಿ ನಷ್ಟ!
ಇನ್ನು ಎನ್ ಸಿಸಿ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ.25.2ರಷ್ಟು ಹೆಚ್ಚಳವಾಗಿದೆ. ಇನ್ನು 2024ರ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಎನ್ ಸಿಸಿ ನಿವ್ವಳ ಲಾಭ 239.2 ಕೋಟಿ ರೂ. ಇತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಲಾಭ ಗಳಿಕೆ 239.2 ಕೋಟಿ ರೂ.ಗೆ ಏರಿಕೆ ಕಂಡಿದೆ. ಇನ್ನು 2023ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಗಳಿಕೆ 191 ಕೋಟಿ ರೂ. ಇತ್ತು.
ಇನ್ನು ಎನ್ ಸಿಸಿ ಕಾರ್ಯನಿರ್ವಹಣೆ ಆದಾಯ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.31ರಷ್ಟು ಏರಿಕೆ ಕಂಡಿದ್ದು, 6485 ಕೋಟಿ ರೂ. ತಲುಪಿದೆ. ಇನ್ನು 2023ರ ಮಾರ್ಚ್ ತ್ರೈಮಾಸಿಕದಲ್ಲಿ 4949 ಕೋಟಿ ರೂ. ಇತ್ತು.
2024ರ ಮಾರ್ಚ್ ತ್ರೈಮಾಸಿಕದಲ್ಲಿ ಹೂಡಿಕೆದಾರರ ದಿವಂಗತ ರಾಕೇಶ್ ಜುಂಜುನ್ ವಾಲಾ ಪತ್ನಿ ರೇಖಾ ಜುಂಜುನ್ ವಾಲಾ ಎನ್ ಸಿಸಿ ಶೇ.10.64ರಷ್ಟು ಷೇರುಗಳು ಅಥವಾ 6.67 ಕೋಟಿ ಷೇರುಗಳನ್ನು ಹೊಂದಿದ್ದರು.
ಷೇರು ಮಾರುಕಟ್ಟೆಯಿಂದ್ಲೇ ತಿಂಗಳಿಗೆ 650 ಕೋಟಿ ರೂ. ಲಾಭ ಮಾಡಿದ ಮಹಿಳೆ ಇವರೇ!
ಎನ್ ಸಿಸಿ ಲಿಮಿಟೆಡ್ ಮೂಲಸೌಕರ್ಯ ವಲಯದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪನಿಯಾಗಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಕಟ್ಟಡಗಳು, ಗೃಹ ನಿರ್ಮಾಣದ ಪ್ರಾಜೆಕ್ಟ್ ಗಳು, ರಸ್ತೆಗಳು, ಸೇತುವೆಗಳು ಹಾಗೂ ಫ್ಲೈ ಒವರ್ಸ್, ನೀರು ಪೂರೈಕೆ ಹಾಗೂ ಪರಿಸರ ಸಂಬಂಧಿ ಪ್ರಾಜೆಕ್ಟ್ ಗಳು ಮುಂತಾದ ನಿರ್ಮಾಣ ಕಾಮಗಾರಿಯಲ್ಲಿ ಎಸ್ ಸಿಸಿ ತೊಡಗಿಸಿಕೊಂಡಿದೆ.