ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಮಾತ್ರ ಕೆಲಸ?

ಖಾಸಗಿ ವಲಯದ ಕಂಪನಿಗಳಲ್ಲಿ ಇರುವ ವಾರಕ್ಕೆ 5 ದಿನ ಕೆಲಸ, ಉಳಿದ 2 ದಿನ ರಜೆ ನೀತಿ ಶೀಘ್ರವೇ ದೇಶದ ಸರ್ಕಾರಿ ಬ್ಯಾಂಕಿಂಗ್‌ ವಲಯಕ್ಕೂ ಕಾಲಿಡುವ ಸಾಧ್ಯತೆ ಇದೆ.

Bank employees work 5 days a week The IBA agreed in principle to the proposal of the employees organization akb

ನವದೆಹಲಿ: ಖಾಸಗಿ ವಲಯದ ಕಂಪನಿಗಳಲ್ಲಿ ಇರುವ ವಾರಕ್ಕೆ 5 ದಿನ ಕೆಲಸ, ಉಳಿದ 2 ದಿನ ರಜೆ ನೀತಿ ಶೀಘ್ರವೇ ದೇಶದ ಸರ್ಕಾರಿ ಬ್ಯಾಂಕಿಂಗ್‌ ವಲಯಕ್ಕೂ ಕಾಲಿಡುವ ಸಾಧ್ಯತೆ ಇದೆ. ವಾರಕ್ಕೆ 5 ದಿನ ಕರ್ತವ್ಯದ ನೀತಿ ಜಾರಿ ತರುವಂತೆ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಯಾದ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಎಂಪ್ಲಾಯಿಸ್‌ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಭಾರತೀಯ ಬ್ಯಾಂಕ್ಸ್‌ ಅಸೋಸಿಯೇಷನ್‌ (IBA) ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಒಂದು ವೇಳೆ ಈ ಪ್ರಸ್ತಾಪವನ್ನು ಐಬಿಐ ಒಪ್ಪಿದರೆ, ಅದನ್ನು ನೆಗೋಷಿಯಬಲ್‌ ಇನ್ಟುಮೆಂಟ್‌ ಆ್ಯಕ್ಟ್‌ನ 25ನೇ ವಿಧಿ ಅನ್ವಯ ಸರ್ಕಾರ ಜಾರಿಗೊಳಿಸಬೇಕಿರುತ್ತದೆ ಎಂದು ಐಬಿಎ ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜನ್‌ (S.Nagarajan) ಹೇಳಿದ್ದಾರೆ. ಪ್ರಸಕ್ತ ಬ್ಯಾಂಕ್‌ ಉದ್ಯೋಗಿಗಳು (Bank employees) 4 ಭಾನುವಾರದ ರಜೆ ಜೊತೆಗೆ 2 ಮತ್ತು 4ನೇ ಶನಿವಾರ ರಜೆ ಪಡೆಯುತ್ತಿದ್ದಾರೆ. ಅದರ ಬದಲಾಗಿ ದಿನದ ಕೆಲಸ ಅವಧಿಯನ್ನು 50 ನಿಮಿಷ ಹೆಚ್ಚಿಸಿ ವಾರಕ್ಕೆ 5 ದಿನ ಕೆಲಸದ ನೀತಿ ಜಾರಿಗೆ ತರುವಂತೆ ಉದ್ಯೋಗಿಗಳು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಈ ಕುರಿತು ಇದೀಗ ಐಬಿಎ ಮತ್ತು ಉದ್ಯೋಗಿಗಳ ನಡುವೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಸ್ತಾಪಕ್ಕೆ ಐಬಿಎ ತಾತ್ವಿಕವಾಗಿ ಒಪ್ಪಿದೆ ಎಂದು ಮೂಲಗಳು ಹೇಳಿವೆ.

ಆರ್ ಡಿ ಖಾತೆಗೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತೆ? ಇಲ್ಲಿದೆ ಮಾಹಿತಿ

ಇದನ್ನು ಸರ್ಕಾರ ಮತ್ತು ಆರ್‌ಬಿಐ (RBI) ಕೂಡಾ ಒಪ್ಪಿದರೆ ಬ್ಯಾಂಕ್‌ ಉದ್ಯೋಗಿಗಳು ನಿತ್ಯ ಬೆಳಗ್ಗೆ 9.45ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರ ಬದಲಿಗೆ ಅವರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಸಿಗಲಿದೆ.

ಶೇ.90ರಷ್ಟು ರೋಡ್ ಫಂಡಿಂಗ್, ಸುಲಭ ಸಾಲದ ಜೊತೆ ಆಕರ್ಷಕ ಕೊಡುಗೆ ಘೋಷಿಸಿದ ಟೊಯೋಟಾ!

Latest Videos
Follow Us:
Download App:
  • android
  • ios