ಬೆಂಗಳೂರಿನ ಟೆಕ್ಕಿಯೊಬ್ಬರು ಕಡಿಮೆ ವೇತನದಿಂದ ಆರಂಭಿಸಿ ೩೦ರ ಒಳಗೆ ಒಂದು ಕೋಟಿ ಉಳಿತಾಯ ಮಾಡಿದ್ದಾರೆ. ಸಾಲ ಮಾಡಿ ಓದಿದ ಇವರು, ೧೫,೦೦೦ ರೂ. ವೇತನದಿಂದ ಹಂತ ಹಂತವಾಗಿ ೩೨ ಲಕ್ಷ ರೂ. ವಾರ್ಷಿಕ ವೇತನದ ಉದ್ಯೋಗ ಪಡೆದರು. ಸರಳ ಜೀವನ, ಶಿಸ್ತುಬದ್ಧ ಹೂಡಿಕೆ ಮತ್ತು ಮ್ಯೂಚುವಲ್ ಫಂಡ್, ಎಸ್ಐಪಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಇದು ಸಾಧ್ಯವಾಯಿತು.

ಬೆಂಗಳೂರು(ಮೇ.18) ಸ್ಯಾಲರಿ ಪಡೆಯುವ ಬಹುತೇಕರ ಸಮಸ್ಯೆ ತಿಂಗಳ ಕೊನೆಯಲ್ಲ ಒಂದು ರೂಪಾಯಿ ಇರುವುದಿಲ್ಲ. ಮುಂದಿನ ತಿಂಗಳ ಸ್ಯಾಲರಿ ವೇಳೆ ಒಂದಷ್ಟು ಸಾಲ. ಇದರ ನಡುವೆ ಉಳಿತಾಯದ ಮಾತು ದೂರ. 10,000 ರೂಪಾಯಿ, 15,000 ರೂಪಾಯಿ ಸೇರಿದಂತೆ ಕಡಿಮೆ ವೇತನದಲ್ಲಿ ವೃತ್ತಿ ಆರಂಭಿಸುವ ಹಲವರು ಹೇಗಾದರೂ ಮಾಡಿ ತಮ್ಮ ಆರ್ಥಿಕ ಸಂಕಷ್ಟ ದೂರ ಮಾಡಿ ನೆಮ್ಮದಿಯಿಂದ ಬದುಕಲ ಬಯಸುತ್ತಾರೆ. ಆದರೆ ಜೀವನ ಜಂಜಾಟದಲ್ಲಿ ಇದು ಸಾಧ್ಯವಾಗುವುದಿಲ್ಲ. ಆದರೆ ಕೆಲ ಸೂಚನೆಗಳನ್ನು, ಶಿಸ್ತನ್ನು ಪಾಲಿಸಿದರೆ 1 ಕೋಟಿ ರೂ ಆಸ್ತಿ ಮಾಡುವುದು ಕಷ್ಟವಲ್ಲ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ಜೀವನ ರೋಚಕ ಪಯಣವನ್ನು ಬಿಚ್ಚಿಟ್ಟಿದ್ದಾರೆ.

ರೆಡ್ಡಿಟ್ ಮೂಲಕ ಬೆಂಗಳೂರು ಟೆಕ್ಕಿ, ಸಾಮಾನ್ಯ ಕುಟುಂಬದಿಂದ ಬಂದು ಅತೀ ಕಡಿಮೆ ಸಂಬಳದಲ್ಲಿ ಬದುಕು ಕಟ್ಟಿಕೊಂಡು ಇದೀಗ ಕೋಟಿ ಆಸ್ತಿ ಸಂಪಾದಿಸಿದ ಬಗೆ ಹೇಗೆ ಅನ್ನೋದು ವಿವರಿಸಿದ್ದಾರೆ. 23ನೇ ವಯಸ್ಸಿಗೆ ವೃತ್ತಿ ಆರಂಭಿಸಿದ ಈ ಬೆಂಗಳೂರು ಟೆಕ್ಕಿ, 30 ದಾಟುವ ಮೊದಲೇ 1 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ತಾಳ್ಮೆ ಹಾಗೂ ಸರಿಯಾದ ದಾರಿಯಲ್ಲಿ ಸಾಗಿದರೆ ಸಾಕು. ಶ್ರೀಮಂತಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂದಿದ್ದಾರೆ.

ಬಡ ಕುಟುಂಬ, ಸಾಲ ಮಾಡಿ ವಿದ್ಯಾಭ್ಯಾಸ
ತಂದೆಗೆ 8,000 ರೂಪಾಯಿ ವೇತನ, ತಾಯಿಗೆ 5,000 ರೂಪಾಯಿ ಸ್ಯಾಲರಿ ಇದರಲ್ಲಿ ನಮ್ಮ ಜೀವನ ಸಾಗಬೇಕಿತ್ತು. ನನ್ನ ಶಾಲೆ, ಕಾಲೇಜು ಫೀಸ್ ಕಟ್ಟಬೇಕಿತ್ತು. ಉತ್ತಮವಾಗಿ ಓದಿ ರ್ಯಾಂಕ್ ಪಡೆಯುವ ವಿದ್ಯಾರ್ಥಿ ತಾನಾಗಿರಲಿಲ್ಲ ಎಂದು ಬೆಂಗಳೂರು ಟೆಕ್ಕಿ ಹೇಳಿಕೊಂಡಿದ್ದಾರೆ. ಆದರೆ ಫಸ್ಟ್ ಕ್ಲಾಸ್ ಮಾರ್ಕ್ ಪಡೆಯುತಿದ್ದ ಟೆಕ್ಕಿ, ಜೆಇಇ ಪರೀಕ್ಷೆ ಪಾಸ್ ಮಾಡಿದ ಬಳಿಕ ಕಾಲೇಜು ಸೇರಿಕೊಳ್ಳಲು ದುಡ್ಡಿರಲಿಲ್ಲ. ಕುಟುಂಬಸ್ಥರು ನೆರವು ನೀಡಿದ ಕಾರಣ ಶಿಕ್ಷಣ ಪೂರೈಸಿದ ಟೆಕ್ಕಿ ಬಳಿಕ 2018ರಲ್ಲಿ ಬೆಂಗಳೂರಿನ ಕಂಪನಿಯೊಂದರಲ್ಲಿ ವೃತ್ತಿ ಆರಂಭಿಸಿದ್ದರೆ. ಈ ವೇಳೆ ತಿಂಗಳ ಸಂಬಳ 15,000 ರೂಪಾಯಿ.

ಬೆಂಗಳೂರಿನ ದುಬಾರಿ ದುನಿಯಾದಲ್ಲಿ ಬದುಕು
ಬೆಂಗಳೂರಿನ ದುಬಾರಿ ದುನಿಾಯದಲ್ಲಿ ಪಿಜಿ ಬಾಡಿಗೆ, ಊಟ, ತಿಂಡಿ ಖರ್ಚು, ಇತರ ಖರ್ಚು ವೆಚ್ಚ ನೋಡಿಕೊಳ್ಳುವುದೇ ಸವಾಲಾಗಿತ್ತು. ಹೊಸ ಬಟ್ಟೆ ಖರೀದಿ ಇಲ್ಲ, ಇತರ ಖರ್ಚು ವೆಚ್ಚಕ್ಕೆ ಹಣ ಇರಲಿಲ್ಲ. 15,000 ರೂಪಾಯಿ ವೇತನದಲ್ಲಿ 2,000 ರೂಪಾಯಿ ಇಳಿತಾಯ ಮಾಡುತ್ತಿದ್ದ ಟೆಕ್ಕಿ ಕೋವಿಡ್ ವೇಳೆ ವಾರ್ಷಿಕ 12 ಲಕ್ಷ ರೂಪಾಯಿ ವೇತನದ ಉದ್ಯೋಗ ಆಫರ್ ಒಪ್ಪಿಕೊಂಡು ಹೊಸ ಕೆಲಸಕ್ಕೆ ಸೇರಿದೆ ಎಂದು ರೆಡ್ಡಿಟ್‌ನಲ್ಲಿ ಹೇಳಿದ್ದಾರೆ. 2022ರಲ್ಲಿ ವಾರ್ಷಿಕ 32 ಲಕ್ಷ ರೂಪಾಯಿ ಉದ್ಯೋಗ ಆಫರ್ ಒಪ್ಪಿಕೊಂಡೆ ಎಂದಿದ್ದಾರೆ. ನನ್ನ ಗೋಲ್ 30ರ ವೇಳೆಗೆ ನಾನು ಒಂದಿಷ್ಟು ಉಳಿತಾಯ ಮಾಡಬೇಕು, ಸಾಲ ಮಾಡಬಾರದು ಅನ್ನೋದು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದೆ ಎಂದಿದ್ದಾರೆ.

35ನೇ ವಯಸ್ಸಿಗೆ ಅರ್ಥಿಕವಾಗಿ ಸದೃಢವಾಗಬೇಕು
ಸ್ಯಾಲರಿ ಹೆಚ್ಚಾದರೂ ನಾನು ಆ್ಯಂಡ್ರಾಯ್ಡ್ ಫೋನ್ ಬದಲಿಸಿಲ್ಲ. 2019ರಲ್ಲಿ ಖರೀದಿಸಿದ ಫೋನ್ ಬಳಸುತ್ತಿದ್ದೇನೆ. ಅನಗತ್ಯ ಬಟ್ಟೆ ಖರೀದಿಸುವುದಿಲ್ಲ. ಕಂಪನಿಯಿಂದ ಕೊಟ್ಟ ಉಚಿತ ಟಿ ಶರ್ಟ್‌ಗೆ ತುಂಬಾ ಇದೆ. ನನ್ನ ಚಪ್ಪಲಿ, ಶೂ ಬೆಲೆ 250 ರೂಪಾಯಿ, 1000 ರೂಪಾಯಿ. ದುಬಾರಿ ವಸ್ತುಗಳು ನನ್ನಲ್ಲಿಲ್ಲ. ಬ್ರ್ಯಾಂಡ್ ನನಗೆ ಬೇಕಿಲ್ಲ.ಐಷಾರಾಮಿ ಜೀವನ ನಾನು ಬಯಸಿಲ್ಲ. ನನಗೆ ಬೇಕು ಎಂದು ಏನಿಸಿಲ್ಲ. ಸಾಮಾನ್ಯ ಬಡ ಕುಟುಂಬದಿಂದ ಬಂದ ನನಗೆ ಸ್ವಲ್ಪ ಸ್ಯಾಲರಿ ಬಂದಾಗ ಬದಲಾಗಬೇಕು ಎನಿಸಿಲ್ಲ. 35ನೇ ವಯಸ್ಸಿಗೆ ನಾನು ಸಂಪೂರ್ಮವಾಗಿ ಆರ್ಥಿಕವಾಗಿ ಸದೃಢವಾಗಬೇಕು. ಕೆಲಸ ಇಲ್ಲದಿದ್ದರೂ ನಾನು ಯಾವುದೇ ಸಾಲ ಮಾಡದೇ ಬದುಕಬೇಕು ಎಂದಿದ್ದಾರೆ.

ಹೂಡಿಕೆ ವಿಚಾರದಲ್ಲಿ ಮುತುವರ್ಜಿವಹಿಸಿದ್ದೇನೆ ಎಂದಿದ್ದಾರೆ. ಎಸ್ಐಪಿ, ಮ್ಯೂಚ್ಯುವಲ್ ಫಂಡ್ ಸೇರಿದಂತೆ ಕೆಲ ಹೂಡಿಕೆ ಮಾಡಿದ್ದೇನೆ. ಇದೀಗ 71,000 ರೂಪಾಯಿ ತಿಂಗಳಿಗೆ ಎಸ್ಐಪಿಯಲ್ಲಿ ಹೂಡಿಕೆ ಮಾಡುತ್ತೇನೆ. 2023ರಲ್ಲಿ ಈ ಮೊತ್ತ 31.6 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. 2025ರ ವೇಳೆಗೆ ಇದೇ ಮೊತ್ತ 1 ಕೋಟಿ ರೂಪಾಯಿ ಆಗಿದೆ. 25 ಲಕ್ಷ ರೂಪಾಯಿ ಆರೋಗ್ಯ ವಿಮೆ ಮಾಡಿದ್ದೇನೆ. ಇದಕ್ಕೆ 10 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪೋಷಕರಿಗೂ ವಿಮೆ ಮಾಡಿಸಿದ್ದೇನೆ. ಒಂದಷ್ಟು ಹೂಡಿಕೆ ಮಾಡಿದ್ದೇನೆ. ಎಲ್ಲವೂ ಬ್ಯಾಂಕ್, ಮ್ಯೂಚ್ಯುವಲ್ ಫಂಡ್ ಸೇರಿದಂತೆ ಇತರ ಸಣ್ಣ ಸಣ್ಣ ಹೂಡಿಕೆ. ಆದರೆ ಇದರ ರಿಟರ್ಸನ್ ಉತ್ತಮವಾಗಿದೆ ಎಂದು ಬೆಂಗಳೂರಿನ ಟಿಕ್ಕಿ ಹೇಳಿದ್ದಾರೆ.