ಐಐಟಿ, ಐಐಎಂ ಮಾಡಿಲ್ಲ, ಹಳ್ಳಿ ಹುಡುಗಿಗೆ ಗೂಗಲ್‌ನಲ್ಲಿ ದಾಖಲೆ ವೇತನದ ಉದ್ಯೋಗ
ಐಐಟಿ, ಐಐಎಂ, ವಿಐಟಿ, ಐಐಐಟಿ ಸೇರಿದಂತೆ ತಾಂತ್ರಿಕ ವಿಶ್ವಿವಿದ್ಯಾಲಯ ಕಾಲೇಜುಗಳಲ್ಲಿ ಓದಿಲ್ಲ. ಆದರೆ ಡಿಗ್ರಿ ಮುಗಿಸಿದ ಗ್ಯಾನಿ ಕುಮಾರಿ ಇದೀಗ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅದು ದಾಖಲೆಯ ವೇತನ.

ಪ್ರತಿಭೆ ಇದ್ದರೆ ಸಾಕು, ನಿಮಗೆ ಅವಕಾಶಗಳು ಬಂದೇ ಬರುತ್ತದೆ. ಉತ್ತಮ ಅವಕಾಶ, ವೇದಿಕೆ ಆಯ್ಕೆ ಮಾಡಿ ಮುನ್ನಡೆದರೆ ಯಶಸ್ಸು ಕಂಡಿತ ಸಿಕ್ಕೆ ಸಿಗುತ್ತೆ ಅನ್ನೋದು ಹಲವರು ಸಾಬೀತು ಮಾಡಿದ್ದಾರೆ. ಇದೀಗ ಗ್ಯಾನಿ ಕುಮಾರಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಕಾರಣ ಈಕೆ ಐಐಟಿ, ಐಐಐಟಿ,ವಿಐಟಿ, ಐಐಎಂ ಸೇರಿದಂತೆ ಯಾವುದೇ ತಾಂತ್ರಿಕ ಹಾಗೂ ಪ್ರತಿಷ್ಠಿತ ಕಾಲೇಜಿನಿಂದ ಪದವಿ ಪಡೆದಿಲ್ಲ. ಆದರೆ ವಿಶ್ವದ ಅತೀ ದೊಡ್ಡ ಟೆಕ್ ಕಂಪನಿಯಾಗಿರುವ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ.
ಗ್ಯಾನಿ ಕುಮಾರಿ ಬಿಟೆಕ್ ಪದವಿ ಮುಗಿಸಿದ್ದಾಳೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಎಂಜಿನೀಯರಿಂಗ್‌ನಲ್ಲಿ ಪದವಿ ಪಡೆದು ಇದೀಗ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. 2024ರಲ್ಲಿ ಈಕೆ ಬಿಟೆಕ್ ಪದವಿ ಮುಗಿಸಿದ್ದಾಳೆ. ಇದೀಗ ಒಂದೇ ವರ್ಷಕ್ಕೂ ಮೊದಲೇ ಗ್ಯಾನಿ ಕುಮಾರಿ ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ಎನ್ಐಟಿ ಕಾಲೇಜಿನಲ್ಲಿ ಪದವಿ ಮಾಡಿದರೂ ಗೂಗಲ್ ಸಂಸ್ಥೆಯಲ್ಲಿ ಎಂಜಿನೀಯರ್ ಆಗಿ ಕೆಲಸ ಗಿಟ್ಟಿಸಿಕೊಳ್ಳಬುಹುದು ಅನ್ನೋದು ಸಾಬೀತು ಮಾಡಿದ್ದಾಳೆ.
ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ತಿಂಗಳ ಸ್ಯಾಲರಿ ಲಕ್ಷ ಲಕ್ಷ ರೂಪಾಯಿ. ಗ್ಯಾನಿ ಕುಮಾರಿಗೆ ಉತ್ತಮ ವೇತನ ಆಫರ್ ಮಾಡಲಾಗಿದೆ. ಇದಕ್ಕೆ ಕಾರಣ ಈಕೆ ಕಾಲೇಜು ಮುಗಿಸಿದ ಬೆನ್ನಲ್ಲೇ ಮೈಕ್ರೋಸಾಫ್ಟ್‌ಲ್ಲಿ ಎಂಜಿನೀಯರ್ ಆಗಿ ಸೇರಿಕೊಂಡಿದ್ದಳು. ಮೈಕ್ರೋಸಾಫ್ಟ್‌ನಿಂದ ಇದೀಗ ಗೂಗಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಪ್ರತಿಭ ಜೊತೆಗೆ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಿದ ಅನುಭವವೂ ಇರುವ ಕಾರಣ ಗ್ಯಾನಿ ಕುಮಾರಿಗೆ ಉತ್ತಮ ವೇತನ ಆಫರ ಮಾಡಲಾಗಿದೆ.
ಬಿಟೆಕ್ ಪದವಿ ಮಾಡುತ್ತಿರುವಾಗ 3 ತಿಂಗಳು ಗೂಗಲ್ ಹೈದರಾಬಾದ್ ಕಚೇರಿಯಲ್ಲಿ ಇಂಟರ್ನಶಿಫ್ ಮುಗಿಸಿದ್ದ ಗ್ಯಾನಿ ಕುಮಾರಿ ಬಳಿಕ ನೇರವಾಗಿ ಮೈಕ್ರೋಸಾಫ್ಟ್ ಕೆಲಸದ ಆಫರ್ ನೀಡಿತ್ತು. ಹೀಗಾಗಿ ಮೈಕ್ರೋಸಾಫ್ಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕಳೆದ ಕೆಲ ತಿಂಗಳುಗಳಿಂದ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗ್ಯಾನಿ ಕುಮಾರಿ ಇದೀಗ ಗೂಗಲ್ ಸಂಸ್ಥೆ ಸೇರಿಕೊಂಡಿದ್ದಾಳೆ. ಈಕೆಯ ಮತ್ತೊಂದು ವಿಶೇಷ ಅಂದರೆ ಕಾಲೇಜು ದಿನಗಳಲ್ಲೇ ರಿಮೂಟ್ ಜಾಬ್ ಗಿಟ್ಟಿಸಿಕೊಂಡು ಪದವಿ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿದ್ದಾಳೆ.
ಗ್ಯಾನಿ ಕುಮಾರಿ ಇದೀಗ ಗೂಗಲ್‌ನಲ್ಲಿ ಉತ್ತಮ ವೇತನದೊಂದಿಗೆ ಕೆಲಸ ಗಿಟ್ಟಿಸಿಕೊಳ್ಳಲು ಕೇವಲ ವಿದ್ಯಾಭ್ಯಾಸ ಮಾತ್ರವಲ್ಲ, ಟೆಕ್ನಿಕಲ್ ಕೌಶಲ್ಯ. ತಂತ್ರಜ್ಞಾನ, ಕೋಡಿಂಗ್‌ನಲ್ಲಿ ಈಕೆ ಪಳಗಿದ್ದಾಳೆ. ಹಿರಿಯ, ಅನುಭವಿ ಉದ್ಯೋಗಿಗಳನ್ನೇ ನಾಚಿಸುವ ರೀತಿಯಲ್ಲಿ ಈಕೆ ಕೆಲಸ ಮಾಡುತ್ತಾಳೆ. ಇದೇ ಕಾರಣದಿಂದ ಗೂಗಲ್ ಈಕೆಗೆ ಬಿಗ್ ಆಫರ್ ನೀಡಿ ಕಂಪನಿಗೆ ಸೇರಿಸಿಕೊಂಡಿದೆ. C++, ಜಾವಾ, ಪೈಥಾನ್, ಎಸ್‌ಕ್ಯೂಎಲ್, ಡೇಟಾ ಸ್ಟ್ರಕ್ಚರ್, ಆಲ್ಗೋರಿದಂ ಸೇರಿದಂತೆ ಹಲವು ವಿಷಗಳಲ್ಲಿ ಗ್ಯಾನಿ ಕುಮಾರಿ ಪರಿಣಿತಿ ಹೊಂದಿದ್ದಾರೆ.
ಬಿಹಾರದ ಪಾಟ್ನಾದ ಸಮೀಪದಲ್ಲಿರುವ ಸಣ್ಣ ಹಳ್ಳಿಯಿಂದ ಬಂದ ಈ ಪ್ರತಿಭೆ ಇದೀಗ ಪ್ರತಿಷ್ಠಿಕ ಕಂಪನಿಯಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಹಳ್ಳಿಯಿಂದ ಬರವು ಹಲವರಿಗೆ ಈಕೆ ಸ್ಪೂರ್ತಿಯಾಗಿದ್ದಾಳೆ. ಪ್ರತಿಭೆ, ಉತ್ತಮ ವಿದ್ಯಾಭ್ಯಾಸ ಇದ್ದರೆ ಯಾವದೇ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯ ಅನ್ನೋದು ಈಕೆ ತೋರಿಸಿಕೊಟ್ಟಿದ್ದಾಳೆ.