Asianet Suvarna News Asianet Suvarna News

ನಿಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 147.5 ರೂ. ಕಡಿತವಾಗಿದೆಯೇ? ಯಾವ ಕಾರಣಕ್ಕೆ ಗೊತ್ತಾ?

ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಕೆಲವರ ಖಾತೆಗಳಿಂದ ಇತ್ತೀಚೆಗೆ 147.5ರೂ. ಕಡಿತವಾಗಿದೆ. ಬಹುತೇಕರಿಗೆ ಯಾವ ಕಾರಣಕ್ಕೆ ಈ ಹಣವನ್ನು ಕಡಿತ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಹಾಗಾದ್ರೆ ಕೆನರಾ ಬ್ಯಾಂಕ್ ಯಾವ ಕಾರಣಕ್ಕೆ ಗ್ರಾಹಕರ ಖಾತೆಯಿಂದ ಹಣ ಕಡಿತ ಮಾಡಿದೆ? ಇಲ್ಲಿದೆ ಉತ್ತರ. 
 

Rs 147 debited from your Canara Bank account Know why
Author
First Published Dec 16, 2022, 11:46 AM IST

ನವದೆಹಲಿ ( ಡಿ.16): ನೀವು ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ನಿಮ್ಮ ಖಾತೆಯಿಂದ  147 .5ರೂ. ಕಡಿತವಾಗಿರಬಹುದು. ಏಕೆ ಕಡಿತ ಮಾಡಲಾಗಿದೆ ಎಂಬ ಪ್ರಶ್ನೆ ಕೂಡ ನಿಮ್ಮನ್ನು ಕಾಡುತ್ತಿರಬಹುದು. ನಿಮಗೆ ತಿಳಿದಿರುವಂತೆ ಎಲ್ಲ ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಬಳಕೆ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಕೆನರಾ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಕ್ಲಾಸಿಕ್/ಸ್ಟ್ಯಾಂಡರ್ಡ್, ಪ್ಲಾಟಿನಂ, ಬ್ಯುಸಿನೆಸ್ ಹಾಗೂ ಇತರ ಆಯ್ದ ಡೆಬಿಟ್ ಕಾರ್ಡ್ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಇದೇ ಕಾರಣಕ್ಕೆ ನಿಮ್ಮ ಬ್ಯಾಂಕ್ ಖಾತೆಯಿಂದ ಇತ್ತೀಚೆಗೆ  147 .5ರೂ. ಕಡಿತವಾಗಿದೆ. ಇನ್ನು ವಿವಿಧ ಮಾದರಿಯ ಡೆಬಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ಕೂಡ ಭಿನ್ನವಾಗಿರುತ್ತದೆ. ಡೆಬಿಟ್ ಕಾರ್ಡ್ ಮೇಲಿನ ನೋಂದಣಿ ಶುಲ್ಕ ಹಾಗೂ ಆಕ್ಟಿವೇಷನ್ ಅಥವಾ ಸದಸ್ಯತ್ವ ಶುಲ್ಕ ಶೂನ್ಯವಾಗಿದ್ರೂ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಶುಲ್ಕ 125ರೂ., ಪ್ಲಾಟಿನಂ ಕಾರ್ಡ್ ಶುಲ್ಕ  350ರೂ., ಬ್ಯುಸಿನೆಸ್ ಕಾರ್ಡ್ ಶುಲ್ಕ 300ರೂ. ಹಾಗೂ ಇತರ ಆಯ್ದ ಕಾರ್ಡ್ ಮೇಲಿನ ಶುಲ್ಕ 1000ರೂ. ಆಗಿದೆ. 

ಇನ್ನು ಡೆಬಿಟ್ ಕಾರ್ಡ್ ಗಳ ಮೇಲಿನ ಸೇವಾ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ ಕೂಡ ವಿಧಿಸಲಾಗುತ್ತದೆ. ಬ್ಯಾಂಕ್ ಸೇವಾ ಶುಲ್ಕದ ಮೇಲೆ ವಿಧಿಸಲಾಗುವ ಇತರ ತೆರಿಗೆಗಳನ್ನು ಕೂಡ ಗ್ರಾಹಕರಿಂದ ಪಡೆಯುತ್ತದೆ. ಹೀಗಾಗಿ ನೀವು ಕೆನರಾ ಬ್ಯಾಂಕ್ ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಹೊಂದಿದ್ರೆ ವಾರ್ಷಿಕ ನಿರ್ವಹಣಾ ಶುಲ್ಕ 125ರೂ.+ಜಿಎಸ್ ಟಿ (22.5 ರೂ.) ಅಂದ್ರೆ 147.5ರೂ. ಪಾವತಿಸಬೇಕಾಗುತ್ತದೆ.

ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಡೆಬಿಟ್ ಕಾರ್ಡ್ ಮಿತಿ ಹೆಚ್ಚಳ
ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್, ಪಿಒಎಸ್ ಹಾಗೂ ಇ-ಕಾಮರ್ಸ್ ವಹಿವಾಟುಗಳ ದೈನಂದಿನ ಮಿತಿಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಎಟಿಎಂ ದೈನಂದಿನ ವಹಿವಾಟು ಮಿತಿಯನ್ನು 40 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ. ಇನ್ನು ಪಿಒಎಸ್ ಮಿತಿಯನ್ನು ಒಂದು ಲಕ್ಷ ರೂ.ನಿಂದ ಎರಡು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.  ಕೆನರಾ ಬ್ಯಾಂಕ್ ಕ್ಲಾಸಿಕ್ ಡೆಬಿಟ್ ಕಾರ್ಡ್ ಮೂಲಕ ಮಾಡುವ ಎನ್ ಎಫ್ ಸಿ ವಹಿವಾಟನ್ನು ಮಾತ್ರ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿಲ್ಲ. ಅದು ಈ ಹಿಂದಿನಂತೆ 25 ಸಾವಿರ ರೂ. ಇದೆ. ಒಮ್ಮೆಗೆ ಐದು ಸಾವಿರ ರೂ. ನಂತೆ ಪ್ರತಿದಿನ ಐದು ವಹಿವಾಟಿಗೆ ಅವಕಾಶವಿದೆ. ಅಂದರೆ 25 ಸಾವಿರ ರೂ. ವಹಿವಾಟು ನಡೆಸಲು ಅವಕಾಶವಿದೆ. ಪ್ಲಾಟಿನಮ್, ಬ್ಯುಸಿನೆಸ್, ಸೆಲೆಕ್ಟ್ ಡೆಬಿಟ್ ಕಾರ್ಡ್ ಗಳ ನಗದು ವಹಿವಾಟಿನ ಮಿತಿಯನ್ನು ಪ್ರತಿದಿನ 50,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಎರಡು ಲಕ್ಷ ರೂ.ನಿಂದ ಐದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಬ್ಯಾಂಕ್ ನಲ್ಲಿ ಡಿಜಿಟಲ್ ರೂಪಾಯಿ ಎಫ್ ಡಿ ಖಾತೆ ತೆರೆಯಲು ಅವಕಾಶವಿದೆಯಾ? ಕೇಂದ್ರ ಸರ್ಕಾರ ಏನ್ ಹೇಳಿದೆ?

ಎಸ್ ಬಿಐ ಖಾತೆಯಿಂದಲೂ ಕಡಿತ
ಎಸ್ ಬಿಐ ಕೂಡ ತನ್ನ ಗ್ರಾಹಕರ ಖಾತೆಗಳಿಂದ ಇತ್ತೀಚೆಗೆ ಎಟಿಎಂ ಅಥವಾ ಡೆಬಿಟ್ ಕಾರ್ಡ್ ವಾರ್ಷಿಕ ನಿರ್ವಹಣಾ ಶುಲ್ಕ ಕಡಿತಗೊಳಿಸಿದೆ. ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್ ಗಳ ನಿರ್ವಹಣೆಗೆ ಎಸ್ ಬಿಐ 125ರೂ. ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಈ ಸೇವಾ ಶುಲ್ಕಕ್ಕೆ ಶೇ.18ರಷ್ಟು ಜಿಎಸ್ ಟಿ ಅನ್ವಯಿಸುತ್ತದೆ. ಹೀಗಾಗಿ 125ರೂ.ಗೆ ಶೇ.18ರಷ್ಟು ಜಿಎಸ್ ಟಿ ಅಂದರೆ 22.5ರೂ. ಸೇರಿಸಿದ್ರೆ ಒಟ್ಟು 147.5ರೂ. ಕಡಿತಗೊಳಿಸಲಾಗಿದೆ. 

Follow Us:
Download App:
  • android
  • ios