Asianet Suvarna News Asianet Suvarna News

ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ!

* ಸತತ 2ನೇ ತಿಂಗಳೂ 1 ಲಕ್ಷ ಕೋಟಿಗಿಂತ ಹೆಚ್ಚಿನ ಜಿಎಸ್‌ಟಿ

* ಕಳೆದ ವರ್ಷದ ಇದೇ ಅವಧಿಗಿಂತ ಶೇ.30 ಹೆಚ್ಚು ಆದಾಯ

* ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ

Rs 1 12 lakh crore GST mop up in August but lower than July pod
Author
an, First Published Sep 2, 2021, 1:55 PM IST
  • Facebook
  • Twitter
  • Whatsapp

 

ನವದೆಹಲಿ(ಸೆ.02): ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟುಅಂಶಗಳು ಬುಧವಾರ ಹೊರಬಿದ್ದಿದೆ. ಆಗಸ್ಟ್‌ ತಿಂಗಳಿನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರೊಂದಿಗೆ ಸತತ 2ನೇ ತಿಂಗಳು ಕೂಡಾ ಜಿಎಸ್‌ಟಿ ಸಂಗ್ರಹ ಪ್ರಮಾಣ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿದೆ. ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಶೇ.30ರಷ್ಟುಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ‘ಆಗಸ್ಟ್‌ನಲ್ಲಿ ಒಟ್ಟಾರೆ 1,12,020 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರದ ಜಿಎಸ್‌ಟಿ 20522 ಕೋಟಿ ರು., ರಾಜ್ಯಗಳ ಜಿಎಸ್‌ಟಿ 26605 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ ಪ್ರಮಾಣ 56,247 ಕೋಟಿ ರು., ಸೆಸ್‌ ರೂಪದಲ್ಲಿ 8646 ಕೋಟಿ ರು.’ ಎಂದು ಹೇಳಿದೆ.

2020ರ ಆಗಸ್ಟ್‌ನಲ್ಲಿ 86449 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಸಂಗ್ರಹದಲ್ಲಿ ಶೇ.30ರಷ್ಟುಏರಿಕೆಯಾಗಿದೆ. ಆದರೆ 2021ರ ಜುಲೈ ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಜುಲೈನಲ್ಲಿ 1.16 ಲಕ್ಷ ಕೋಟಿ ಸಂಗ್ರಹವಾಗಿತ್ತು.

ಟಾಪ್‌ 3 ರಾಜ್ಯಗಳು

ಮಹಾರಾಷ್ಟ್ರ 15175 ಕೋಟಿ ರು.

ಗುಜರಾತ್‌ 7556 ಕೋಟಿ ರು.

ಕರ್ನಾಟಕ 7429 ಕೋಟಿ ರು.

Follow Us:
Download App:
  • android
  • ios