ಎಸ್ಎಸ್‌ಎಲ್‌ಸಿ ಪಾಸಾದವರಿಗೆ ರೆಲ್ವೆ ಇಲಾಖೆಯಲ್ಲಿ 2,573 ಹುದ್ದೆಗಳು

RRB recruitment 2018: Jobs for 10th pass, apply for 2,573 posts at Central Railways
Highlights

ಸೆಂಟ್ರಲ್ ರೈಲ್ವೆಯಲ್ಲಿ 2,573 ಹುದ್ದೆಗಳು

ರೈಲ್ವೆ ನೇಮಕಾತಿ ಮಂಡಳಿಯಿಂದ ಅರ್ಜಿ ಆಹ್ವಾನ

ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಜುಲೈ 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
 

ಬೆಂಗಳೂರು(ಜೂ.27): ಭಾರತೀಯ ರೈಲ್ವೆಯ ಸೆಂಟ್ರಲ್ ರೈಲ್ವೆ ವಲಯದಲ್ಲಿ, ಸುಮಾರು 2,573 ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ  ಅರ್ಜಿ ಆಹ್ವಾನಿಸಿದೆ. ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜುಲೈ 25 ಎಂದು ಇಲಾಖೆ ಸ್ಪಷ್ಟಪಡಿಸಿದೆ.

10 ನೇ ತರಗತಿ ಅಥವಾ ತತ್ಸಮಾನ ಪದವಿಯನ್ನು ಶೇ.50 ಕ್ಕೂ ಹೆಚ್ಚು ಅಂಕಗಳಿಂದ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ರೈಲ್ವೆ ನೇಮಕಾತಿ ಮಂಡಳಿ ತಿಳಿಸಿದೆ. ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ, ಕಲ್ಯಾಣ್ ಡಿಸೇಲ್ ಶೆಡ್, ಕುರ್ಲಾ ಡಿಸೇಲ್ ಶೇಡ್, ಮಾತುಂಗಾ ವರ್ಕಶಾಪ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

15-24 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಆಸಕ್ತರು ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.

loader