ಈ ವಸ್ತು ಖರೀದಿಸಲು ನೀರಿನಂತೆ ಹಣ ಚೆಲ್ಲಿದ ಶ್ರೀಮಂತರು… ಹೆಚ್ಚಾಯ್ತು ಬೆಲೆ

ಶ್ರೀಮಂತರಿಗೆ ಹಣಕ್ಕಿಂತ ಐಷಾರಾಮಿ ಮುಖ್ಯವಾಗಿರುತ್ತೆ. ಹಾಗಾಗಿ ಅವರಿಷ್ಟದ ವಸ್ತುವನ್ನು ಕೋಟಿ ಕೊಟ್ಟು ಖರೀದಿ ಮಾಡ್ತಾರೆ. ಈ ವರ್ಷ ಶ್ರೀಮಂತರ ಗಮನ ಯಾವ ಕಡೆ ಇದೆ, ಅದ್ರಿಂದ ಆಗಿದ್ದೇನು ಎನ್ನುವ ವಿವರ ಇಲ್ಲಿದೆ.
 

rich people buy artistic works gold jewellery cars and other products resulted in price hike roo

ಕೈನಲ್ಲಿ ಹಣವಿದೆ ಅಂದ್ರೆ ನಾವೇ ದುಬಾರಿ ವಸ್ತುಗಳನ್ನು ಖರೀದಿಸಲು ಮುಂದಾಗ್ತೇವೆ. ಇನ್ನು ಶ್ರೀಮಂತರು ಕೇಳ್ಬೇಕೆ? ಅವರಿಗೆ ಇಷ್ಟವಾದ ವಸ್ತುಗಳ ಬೆಲೆಯನ್ನು ಅವರು ಕೇಳೋದಿಲ್ಲ. ಹಣ ಎಷ್ಟೇ ಇರಲಿ, ನೀರಿನಂತೆ ಖರ್ಚು ಮಾಡಿ ಆ ವಸ್ತುವನ್ನು ಖರೀದಿ ಮಾಡ್ತಾರೆ. ಜನಸಾಮಾನ್ಯರು ಸಾಮಾನ್ಯವಾಗಿ ಚಪ್ಪಲಿ ಹರಿದ್ಮೇಲೆ, ಬಟ್ಟೆಗಳು ಹಳೆಯದಾಗ್ತಿದೆ ಅಂದಾಗ ಇಲ್ಲವೆ ಹಬ್ಬ ಹತ್ತಿರ ಬರ್ತಿದೆ ಎಂದಾಗ ಖರೀದಿ ಮಾಡ್ತಾರೆ. ವಾಚ್ ಹಾಳಾದ್ಮೇಲೆ ಖರೀದಿ ಮಾಡೋದಲ್ಲದೆ, ಬ್ಯಾಗ್ ಅಗತ್ಯವಿದ್ರಷ್ಟೆ ತೆಗೆದುಕೊಳ್ತಾರೆ. ಆದ್ರೆ  ಕೋಟ್ಯಾಧೀಶರು ಹಾಗಲ್ಲ. ಬಟ್ಟೆ ಎಷ್ಟೇ ಇರಲಿ, ವಾಚ್ ಎಷ್ಟೇ ಸ್ಟಾಕ್ ಆಗಿರಲಿ, ಫ್ಯಾಷನ್ (Fashion) ಗಾಗಿ ಮತ್ತೊಂದಿಷ್ಟು ದುಬಾರಿ ವಸ್ತು (Material) ಗಳನ್ನು ಖರೀದಿ ಮಾಡ್ತಾರೆ.

ಈ ವರ್ಷ ಕೆಲ ವಸ್ತುಗಳ ಖರೀದಿಗೆ ಶ್ರೀಮಂತ (Rich) ರು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಕೋಟ್ಯಾಧಿಪತಿಗಳ ಈ ಖರೀದಿಯಿಂದಾಗಿ  ಆ ವಸ್ತುಗಳ ಬೆಲೆಗಳು ಹೆಚ್ಚಾಗಿವೆ.  
ಹೊಸ ನೈಟ್ ಫ್ರಾಂಕ್ ಈ ಬಗ್ಗೆ ವರದಿ ಮಾಡಿದೆ. ಅದ್ರ ಪ್ರಕಾರ, ಶೇಕಡಾ 53 ರಷ್ಟು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು ಈ ಬಾರಿ ಅಂದ್ರೆ 2023 ರಲ್ಲಿ ಕೆಲ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡಿದ್ದಾರೆ. ಅವರು ಆ ವಸ್ತುಗಳನ್ನು ಹೆಚ್ಚು ಖರೀದಿ ಮಾಡ್ತಿರುವ ಕಾರಣ ಆ ವಸ್ತುಗಳ ಬೆಲೆಯಲ್ಲಿ ಶೇಕಡಾ 30ರಷ್ಟು ಹೆಚ್ಚಳ ಕಂಡು ಬಂದಿದೆ. 

ದೃಷ್ಟಿಹೀನ ಉದ್ಯಮಿ ಸಾಧನೆಗೆ ಮನಸೋತ ಆನಂದ್ ಮಹೀಂದ್ರಾ; ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿ ಶ್ಲಾಘನೆ

ಶ್ರೀಮಂತರು ಖರೀದಿಸಿದ ವಸ್ತುಗಳು ಯಾವುವು? : 2023ರಲ್ಲಿ ಈವರೆಗೆ ಶ್ರೀಮಂತರು ಹೆಚ್ಚು ಹಣವನ್ನು ಕಲಾಕೃತಿ, ವಾಚು ಮತ್ತು ಕಾರು, ವೈನ್ ಮತ್ತು ಬಣ್ಣದ ವಜ್ರಕ್ಕೆ ಖರ್ಚು ಮಾಡಿದ್ದಾರೆ. ಇದ್ರಿಂದಾಗಿ ಅನೇಕ ಕಲಾಕೃತಿಗಳ ಬೆಲೆ ಸರಾಸರಿ  ಶೇಕಡಾ 30ರಷ್ಟು ಏರಿದೆ. ವಾಚ್‌ಗಳು ಮತ್ತು ಆಭರಣಗಳ ಬೆಲೆ ಶೇಕಡಾ 10ರಷ್ಟು ಹೆಚ್ಚಾಗಿದೆ. ಕಾರುಗಳು ಮತ್ತು ವೈನ್ ಬೆಲೆಯು ಶೇಕಡಾ 5 ರಷ್ಟು ಏರಿಕೆಯಾಗಿದೆ. ಬಣ್ಣದ ವಜ್ರಗಳ ಬೆಲೆಯು ಶೇಕಡಾ 4 ರಷ್ಟು ಹೆಚ್ಚಾಗಿದೆ.

ಚೀನಾ ಒಂದರಲ್ಲೇ 198 ಕಲಾವಿದರ ಕಲಾಕೃತಿಗಳು ಮಾರಾಟವಾಗಿವೆ. ಅತಿ ಹೆಚ್ಚು ಕಲಾಕೃತಿ ಮಾರಾಟವಾದ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಇನ್ನು ಅಮೆರಿಕಾ ಎರಡನೇ ಸ್ಥಾನದಲ್ಲಿದೆ. 110 ಅಮೆರಿಕನ್ನರ ಕಲಾಕೃತಿ ಮಾರಾಟವಾಗಿದೆ. ಜಪಾನ್ ನಲ್ಲಿ 65 ಕಲಾವಿದರ ಕಲಾಕೃತಿ ಹೆಚ್ಚು ಮಾರಾಟವಾದ್ರೆ ಕೊರಿಯಾದಲ್ಲಿ 60 ಕಲಾವಿದರ ಕಲಾಕೃತಿ ದುಬಾರಿ ಬೆಲೆಗೆ ಮಾರಾಟವಾಗಿದೆ. ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. 59 ಭಾರತೀಯ ಕಲಾವಿದರ ಕಲಾಕೃತಿಗಳನ್ನು ಏಷ್ಯಾ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.

OnePlus ಬಳಕೆಗಾರರಿಗೆ ಸೂಪರ್‌ ಆಫರ್‌: ಫೋನ್‌ ಸ್ಕ್ರೀನ್‌ಗೆ ಲೈಫ್‌ಟೈಮ್‌ ವಾರಂಟಿ, 30 ಸಾವಿರ ರೂ. ವೋಚರ್!

ವರದಿಯ ಪ್ರಕಾರ, ಚಿನ್ನ ಖರೀದಿ ಮೇಲೆ ಭಾರತೀಯರ ಆಸಕ್ತಿ ಹೆಚ್ಚಿದ್ದು, 2023ರಲ್ಲಿ ಶೇಕಡಾ 41 ರಷ್ಟು ಅತಿ ಶ್ರೀಮಂತ ಭಾರತೀಯರು  ಆಭರಣಗಳ ಮೇಲೆ ಹೆಚ್ಚು ಹೂಡಿಕೆ ಮಾಡುವ ನಿರೀಕ್ಷೆ ಇದೆ. ಶೇಕಡಾ 29 ರಷ್ಟು ಕ್ಲಾಸಿಕ್ ಕಾರು ಮತ್ತು ವೈನ್‌ ಮೇಲೆ ಹೂಡಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 

ಭಾರತದಲ್ಲಿ ಹೆಚ್ಚಾಗ್ತಿದೆ ಶ್ರೀಮಂತರ ಸಂಖ್ಯೆ : ಜನಸಂಖ್ಯೆಯಲ್ಲಿ ಮುಂದಿರುವ ಭಾರತದಲ್ಲಿ ಶ್ರೀಮಂತರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿದ್ರೆ ಈ ವರ್ಷ 1 ಕೋಟಿಗೂ ಹೆಚ್ಚು ಆದಾಯ ಗಳಿಸಿದ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ. 2022-23 ರ ಹಣಕಾಸು ವರ್ಷದಲ್ಲಿ, ಐಟಿಆರ್ ಸಲ್ಲಿಸಿದವರಲ್ಲಿ 1 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವ ತೆರಿಗೆದಾರರ ಸಂಖ್ಯೆ 2.69 ಲಕ್ಷ ಇದೆ. 2018 – 2019ಕ್ಕೆ ಹೋಲಿಸಿದರೆ  ಇದು ಶೇಕಡಾ 49.4ರಷ್ಟು ಹೆಚ್ಚಾಗಿದೆ. 

Latest Videos
Follow Us:
Download App:
  • android
  • ios