ಟರ್ಬನ್ ಚಾಲೆಂಜ್ ಗೆದ್ದ ಉದ್ಯಮಿ ರುಬೆನ್ ಸಿಂಗ್| ಬಣ್ಣ ಬಣ್ಣದ ಟರ್ಬನ್ ಗೆ ಅದೇ ಬಣ್ಣದ ರೋಲ್ಸ್ ರಾಯ್ಸ್ ಕಾರು| ಒಟ್ಟು 6 ಬಣ್ಣದ ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ರುಬೆನ್ ಸಿಂಗ್| ಸಾಮಾಜಿಕ ಜಾಲತಾಣಗಳಲ್ಲಿ ರುಬೆನ್ ಸಿಂಗ್ ಕಾರುಗಳದ್ದೇ ಕಾರುಬಾರು

ಇಂಗ್ಲೆಂಡ್(ಫೆ.05): ರುಬೆನ್ ಸಿಂಗ್ ಹೆಸರು ಯಾರು ಕೇಳಿಲ್ಲ ಹೇಳಿ? ದೂರದ ಇಂಗ್ಲೆಂಡ್‌ನಲ್ಲಿ ಯಶಸ್ವಿ ಉದ್ಯಮಿ ಎನಿಸಿರುವ ಈತ, ಸಪ್ತ ಸಾಗರದಾಚೆಗೂ ಭಾರತದ ಹೆಸರನ್ನು ಮುಗಿಲೆತ್ತರಕ್ಕೆ ಏರಿಸುತ್ತಿದ್ದಾನೆ.

ಯಶಸ್ವಿ ಉದ್ಯಮಿ ರುಬೆನ್ ಸಿಂಗ್ ಇತ್ತೀಚಿಗೆ 'ಟರ್ಬನ್ ಚಾಲೆಂಜ್‌'ವೊಂದನ್ನು ಸ್ವೀಕರಿಸಿದ್ದರು. ದಿನಕ್ಕೊಂದರಂತೆ ರುಬೆನ್ ಎಷ್ಟು ಬಣ್ಣದ ಟರ್ಬನ್ ಧರಿಸುತ್ತಾರೋ ಅಷ್ಟು ಬಣ್ಣದ ರೋಲ್ಸ್ ರಾಯ್ಸ್ ಕಾರು ಖರೀದಿಸಬೇಕು ಎಂಬುದು ಆ ಚಾಲೆಂಜ್ ಆಗಿತ್ತು.

View post on Instagram

ಅದರಂತೆ ಚಾಲೆಂಜ್ ಸ್ವೀಕರಿಸಿರುವ ರುಬೆನ್, ಇದೀಗ ಒಟ್ಟು ೬ ದುಬಾರಿ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ್ದಾರೆ. ಇದನ್ನವರು 'ಜ್ಯುವೆಲ್ಸ್ ಕಲೆಕ್ಷನ್'ಹೆಸರಲ್ಲಿ ತಮ್ಮ ಇನ್ಸಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುಬೆನ್ ಸಿಂಗ್ ಅವರ ೬ ರೋಲ್ಸ್ ರಾಯ್ಸ್ ಕಾರುಗಳದ್ದೇ ಚರ್ಚೆ ನಡೆಯುತ್ತಿದ್ದು, ದುಬಾರಿ ಕಾರುಗಳ ಒಡೆಯನಿಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿದೆ.

View post on Instagram