ಉಕ್ಕು ಉದ್ಯಮದಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಮೊಹಮ್ಮದ್ ತಾವು ನಿವೃತ್ತರಾದ ಬಳಿಕ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಹೀಗೆ ಸಮರ್ಕಂಡ್‌ಗೆ ಹೋಗಿದ್ದಾಗ ತಾವು ಬೆಂಗಳೂರಿನಲ್ಲಿ ಮಸಾಲಾ ಟೀ ಮತ್ತು ಪರೋಟಾ ಸೇರಿದಂತೆ ಇತರ ಖಾದ್ಯಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದ ಮೊಹಮ್ಮದ್, ಸಮರ್ಕಂಡ್‌ನಲ್ಲಿ ಒಂದೇ ಒಂದು ಭಾರತೀಯ ಶೈಲಿಯ ಹೋಟೆಲ್‌ ಇಲ್ಲ ಎಂಬುದನ್ನು ಕಂಡು ಆಶ್ಚರ್ಯಗೊಂಡಿದ್ದರಂತೆ. ಬಳಿಕ ತಾವೇ ಒಂದು ಹೋಟೆಲ್‌ ತೆರೆಯಲು ನಿರ್ಧರಿಸಿದ್ದಾರೆ.

ಸಮರ್ಕಂಡ್‌ (ನವೆಂಬರ್ 20, 2023): ಬೆಂಗಳೂರಿನಲ್ಲಿ ತಾನು ಇಷ್ಟಪಟ್ಟು ಸವಿಯುತ್ತಿದ್ದ ಮಸಾಲಾ ಟೀ ಮತ್ತು ಪರೋಟಾ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಸಿಗದೇ ಬೇಸರಗೊಂಡಿದ್ದ ಬೆಂಗಳೂರು ಮೂಲದ ಮೊಹಮ್ಮದ್‌ ನೌಶಾದ್‌ ಎಂಬ 61 ವರ್ಷದ ವ್ಯಕ್ತಿ ಅಲ್ಲಿಯೇ ‘ದ ಇಂಡಿಯನ್‌ ಕಿಚನ್‌’ ಎಂಬ ನೂತನ ಹೋಟೆಲ್‌ವೊಂದನ್ನು ಸ್ಥಾಪಿಸಿದ್ದಾರೆ. ಇದು ಸಮರ್ಕಂಡ್‌ನಲ್ಲಿರುವ ಏಕೈಕ ಭಾರತೀಯ ಶೈಲಿಯ ಹೋಟೆಲ್‌ ಆಗಿದೆ.

ಉಕ್ಕು ಉದ್ಯಮದಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಮೊಹಮ್ಮದ್ ತಾವು ನಿವೃತ್ತರಾದ ಬಳಿಕ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಹೀಗೆ ಸಮರ್ಕಂಡ್‌ಗೆ ಹೋಗಿದ್ದಾಗ ತಾವು ಬೆಂಗಳೂರಿನಲ್ಲಿ ಮಸಾಲಾ ಟೀ ಮತ್ತು ಪರೋಟಾ ಸೇರಿದಂತೆ ಇತರ ಖಾದ್ಯಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದ ಮೊಹಮ್ಮದ್, ಸಮರ್ಕಂಡ್‌ನಲ್ಲಿ ಒಂದೇ ಒಂದು ಭಾರತೀಯ ಶೈಲಿಯ ಹೋಟೆಲ್‌ ಇಲ್ಲ ಎಂಬುದನ್ನು ಕಂಡು ಆಶ್ಚರ್ಯಗೊಂಡಿದ್ದರಂತೆ.

ಇದನ್ನು ಓದಿ: 6 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡಿದ ಕಾರ್ಖಾನೆ ಕೆಲಸಗಾರನ ಮಗ 55,000 ಕೋಟಿ ರೂ. ಕಂಪನಿ ಮಾಲೀಕರಾಗಿದ್ದೇಗೆ ನೋಡಿ..

ಬಳಿಕ ತಾವೇ ಒಂದು ಹೋಟೆಲ್‌ ತೆರೆಯಲು ನಿರ್ಧರಿಸಿದ್ದಾರೆ. ತಮಿಳುನಾಡು ಮೂಲದ ಬಾಣಸಿಗ ಅಶೋಕ್‌ ಕಾಳಿದಾಸ ಎಂಬುವವರು ಮೊಹಮ್ಮದ್ ಜತೆ ಕೈ ಜೋಡಿಸಿದ್ದಾರೆ. ಇದೀಗ ಇಲ್ಲಿನ ಮಸಾಲೆ ದೋಸೆ ಹಾಗೂ ಚಿಕನ್‌ ಬಿರಿಯಾನಿ ನಗರದಲ್ಲಿ ಭಾರೀ ಜನಪ್ರಿಯತೆ ಗಳಿಸಿವೆ. ಪ್ರವಾಸಿಗರು ಮತ್ತು ಸ್ಥಳೀಯರೂ ಸೇರಿದಂತೆ ಅಲ್ಲಿನ ಭಾರತೀಯ ಮೂಲದ ಜನರು ಇದೇ ಹೋಟೆಲಿಗೆ ಬಂದು ತಮ್ಮಿಷ್ಟದ ಖಾದ್ಯ ಸವಿಯುತ್ತಾರೆ.

‘ನನಗೆ ನಿವೃತ್ತಿಯ ನಂತರ ಕೆಲಸ ಮಾಡುವ ಯೋಜನೆ ಇರಲಿಲ್ಲ ಮತ್ತು ಹೋಟೆಲ್‌ನಲ್ಲಿ ಕೆಲಸ ಮಾಡಿದ ಅನುಭವವಿರಲಿಲ್ಲ. ನಾನು ಪ್ರವಾಸಿಯಾಗಿ ಇಲ್ಲಿಗೆ ಬಂದಾಗ ನನ್ನ ಎಂದಿನ ತಿಂಡಿಯಾದ ಮಸಾಲಾ ಟೀ ಮತ್ತು ಪರೋಟವನ್ನು ಸೇವಿಸಲು ಹೊರಟೆ. ಆದರೆ ಆಗ ಇಲ್ಲಿ ಭಾರತೀಯ ಶೈಲಿಯ ಒಂದೇ ಒಂದು ತಿನಿಸು ಅಥವಾ ಹೋಟೆಲ್‌ ಇಲ್ಲ ಎಂಬುದನ್ನು ಕಂಡು ಆಶ್ಚರ್ಯವಾಯಿತು. ಬಳಿಕ ನಾನೇ ಹೋಟೆಲ್‌ ಪ್ರಾರಂಭಿಸಿದೆ. ಇದೀಗ ಪ್ರತಿದಿನ ಹೋಟೆಲ್‌ಗೆ 300 ರಿಂದ 400 ಜನರು ಆಗಮಿಸುತ್ತಾರೆ’

ಇದನ್ನೂ ಓದಿ: ಸಾಫ್ಟ್‌ವೇರ್‌ ಎಂಜಿನಿಯರ್ ಆಗೋದು ತುಂಬಾ ಸುಲಭ; ಇದು ಮಾತ್ರ ತುಂಬಾ ಕಷ್ಟ ಅಂದ್ರು ನಾರಾಯಣ ಮೂರ್ತಿ

ಇದನ್ನೂ ಓದಿ: 100 ದಿನದಲ್ಲೇ ರೆಡಿಯಾಯ್ತು ಟೆಸ್ಲಾ ಸೈಬರ್‌ ಟ್ರಕ್‌ ಮರದ ವಾಹನ: ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಹೀಗಿದೆ..