ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!

ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ಮಂಗಳವಾರ ಚೆನ್ನೈ ನಗರದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಬೆಲೆಬಾಳುವ ವಸ್ತುವನ್ನು ಕಿಲೋಗೆ 60 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ.

retail tomato prices climb to rs 155 per kg tamil nadu government launches fairprice sales to offset the surge ash

ಚೆನ್ನೈ ( ಜುಲೈ 5, 2023): ಮಳೆಯಿಂದ ಉಂಟಾದ ಉತ್ಪಾದನಾ ಪ್ರದೇಶದಲ್ಲಿ ಪೂರೈಕೆ ಕೊರತೆಯಿಂದಾಗಿ ದೇಶದ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆಗಳು ಕಿಲೋಗ್ರಾಂಗೆ 155 ರೂ.ಗೆ ಗಗನಕ್ಕೇರಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಈ ಹಿನ್ನೆಲೆ ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಸರಿದೂಗಿಸಲು ಹಾಗೂ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದಂತೆ ಮಾಡಲು ಈ ರಾಜ್ಯ ಸರ್ಕಾರವು ಕಡಿಮೆ ಬೆಲೆಗೆ ಪಡಿತರ ಅಂಗಡಿಗಳಲ್ಲಿ ಟೊಮ್ಯಾಟೋ ಮಾರಾಟ ಮಾಡುತ್ತಿದೆ.

ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ಮಂಗಳವಾರ ಚೆನ್ನೈ ನಗರದ 82 ನ್ಯಾಯಬೆಲೆ ಅಂಗಡಿಗಳಲ್ಲಿ ಬೆಲೆಬಾಳುವ ವಸ್ತುವನ್ನು ಕಿಲೋಗೆ 60 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಅಗತ್ಯವಿದ್ದರೆ ಈ ಉಪಕ್ರಮವನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಲಾಗುವುದು ಎಂದೂ ಸಹಕಾರಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಹೇಳಿದರು. ಇನ್ನು, ಚೆನ್ನೈ ಮಾತ್ರವಲ್ಲದೆ, ಕೊಯಮತ್ತೂರು, ಸೇಲಂ, ಈರೋಡ್ ಮತ್ತು ವೆಲ್ಲೂರಿನಲ್ಲಿರುವ ಪನ್ನೈ ಪಸುಮೈ (ಫಾರ್ಮ್ ಫ್ರೆಶ್) ಮಳಿಗೆಗಳಲ್ಲಿ ಟೊಮ್ಯಾಟೋವನ್ನು ಕಿಲೋಗೆ 60 ರೂ.ಗೆ ಲಭ್ಯವಾಗುವಂತೆ ಮಾಡುತ್ತಿದೆ ಎಂದೂ ಅವರು ಹೇಳಿದರು.

ಇದನ್ನು ಓದಿ: 15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ

ಸೋಮವಾರ ಸಂಜೆ ಸಚಿವಾಲಯದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಡಿತರ ಅಂಗಡಿಗಳ ಮೂಲಕ ಟೊಮ್ಯಾಟೋ ಮಾರಾಟ ಮಾಡಲು ತೀರ್ಮಾನಿಸಲಾಯಿತು. ಅಲ್ಲದೆ, ಟೊಮ್ಯಾಟೋ ಬೆಳೆಯುವ ಪ್ರದೇಶಗಳನ್ನು ಗುರುತಿಸಿ ಮತ್ತು ತಮಿಳುನಾಡಿನಾದ್ಯಂತ ಗ್ರಾಹಕರಿಗೆ ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಲು ಸಹಕಾರಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ನೆರೆಯ ರಾಜ್ಯಗಳಿಂದ ಟೊಮ್ಯಾಟೋ ಆವಕ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದೂ ಈ ಸಭೆಯಲ್ಲಿ ತಿಳಿಸಲಾಯಿತು.

ಇನ್ನು, ಇಲ್ಲಿನ ಕೊಯಂಬೀಡು ಸಗಟು ಮಾರುಕಟ್ಟೆಯ ಮೂಲಗಳ ಪ್ರಕಾರ, ಟೊಮ್ಯಾಟೊ ಕೆಜಿಗೆ 110 ರೂ.ಗೆ ಚಿಲ್ಲರೆ ದರದಲ್ಲಿ ಮಾರಾಟವಾಗುತ್ತಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ಬೆಲೆ ಹೆಚ್ಚಾಗಿದೆ. ಈ ಹಿನ್ನೆಲೆ ಒಂದು ಕುಟುಂಬಕ್ಕೆ ದಿನಕ್ಕೆ ಒಂದು ಕಿಲೋ ಟೊಮ್ಯಾಟೋ ನೀಡಲು ಯೋಜಿಸಲಾಗಿದೆ ಎಂದು ಸಹಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್‌: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’

ಮೊದಲ ಹಂತದಲ್ಲಿ, ಇದು ಉತ್ತರ ಚೆನ್ನೈನ 32 ಸ್ಥಳಗಳಲ್ಲಿ ಮತ್ತು ಮಧ್ಯ ಹಾಗೂ ದಕ್ಷಿಣ ಚೆನ್ನೈ ಪ್ರದೇಶಗಳಲ್ಲಿ ತಲಾ 25 ಫಾರ್ಮ್ ಫ್ರೆಶ್ ಅಂಗಡಿಗಳಲ್ಲಿ ಮಾರಾಟವಾಗಲಿದೆ.
ಇದಲ್ಲದೆ, ಅವಶ್ಯಕತೆಗೆ ಅನುಗುಣವಾಗಿ, ರಾಜ್ಯದ ಇತರ ಭಾಗಗಳಲ್ಲಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಟೊಮ್ಯಾಟೋಗಳನ್ನು ಲಭ್ಯವಾಗುವಂತೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಾಗೂ, "ಶೀಘ್ರದಲ್ಲೇ ಬೆಲೆಯನ್ನು ಸ್ಥಿರಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದೂ ಸಚಿವರು ಹೇಳಿದ್ದಾರೆ. 

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೂಚನೆಗಳ ಆಧಾರದ ಮೇಲೆ ಪನ್ನೈ ಪಸುಮೈ ಮಳಿಗೆಗಳಲ್ಲಿ ಮಾರಾಟವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಅಲ್ಲದೆ, ಟೊಮ್ಯಾಟೋ ಮಾತ್ರವಲ್ಲ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಶುಂಠಿಯ ಬೆಲೆಯೂ ಗಗನಕ್ಕೇರಿದ್ದು, ಕಿಲೋಗೆ 150 ರಿಂದ 200 ರೂ. ವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ

Latest Videos
Follow Us:
Download App:
  • android
  • ios