ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ವರ್ಷದಲ್ಲಿಯೇ ಅತ್ಯಂತ ಕಡಿಮೆ!
ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ 2022 ರಲ್ಲಿ 5.88 ಶೇಕಡಾ ಮತ್ತು ಡಿಸೆಂಬರ್ 2021 ರಲ್ಲಿ ಶೇಕಡಾ 5.66 ರಷ್ಟಿತ್ತು. ಅದರೊಂದಿಗೆ ಸತತ ಮೂರನೇ ತಿಂಗಳು ಚಿಲ್ಲರೆ ಹಣದುಬ್ಬರದಲ್ಲಿ ಇಳಿಕೆ ಆದಂತಾಗಿದೆ.
ನವದೆಹಲಿ (ಜ.12): ಆಹಾರ ಪದಾರ್ಥಗಳ ಬೆಲೆಗಳು ಇಳಿಕೆಯಾಗಿರುವುದರಿಂದ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಒಂದು ವರ್ಷದ ಕನಿಷ್ಠ 5.72 ಶೇಕಡಾಕ್ಕೆ ಕುಸಿದಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ತಿಳಿಸಿವೆ. ಡಿಸೆಂಬರ್ ಸತತ 2ನೇ ತಿಂಗಳಾಗಿದ್ದು, ಚಿಲ್ಲರೆ ಹಣದುಬ್ಬರವು ಆರ್‌ಬಿಐಯ ಟಾಲರೆನ್ಸ್ ಬ್ಯಾಂಡ್ 4 (+/- 2) ರಷ್ಟು ಒಳಗೆ ಬಂದಿದೆ. ಚಿಲ್ಲರೆ ಹಣದುಬ್ಬರವು ಪ್ರಾಥಮಿಕವಾಗಿ ಆಹಾರ ಮತ್ತು ಪಾನೀಯಗಳ ಹಣದುಬ್ಬರ ದರದ ಕುಸಿತದಿಂದಾಗಿ ಇಳಿಕೆಯಾಗಿದೆ. ಇದು ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಬಾಸ್ಕೆಟ್‌ನ 46% ನಷ್ಟಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 2022 ರಲ್ಲಿ 6.77 ಶೇಕಡಾ ಮತ್ತು ನವೆಂಬರ್‌ನಲ್ಲಿ 5.88 ಶೇಕಡಾದಷ್ಟಿತ್ತು. ಗ್ರಾಮೀಣ ಪ್ರದೇಶಗಳಲ್ಲಿನ ಸಿಪಿಐ ಹಣದುಬ್ಬರವು ನವೆಂಬರ್‌ನಲ್ಲಿ 6.09% ರಿಂದ ಡಿಸೆಂಬರ್‌ನಲ್ಲಿ 6.05% ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಹಣದುಬ್ಬರವು ನಗರ ಪ್ರದೇಶಗಳಲ್ಲಿ 5.39% ಕ್ಕೆ ಹೋಲಿಸಿದರೆ 6.05% ರಷ್ಟಿದೆ.