ರೀಟೇಲ್‌ ಹಣದುಬ್ಬರ ಶೇ. 2.86ಕ್ಕೆ ಏರಿಕೆ| ಇಂಧನ ತೈಲ  ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆ| ಕೇಂದ್ರ ಸರ್ಕಾರದ ಅಂಕಿ ಅಂಶಗಳು ಬಹಿರಂಗ| 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಹಣದುಬ್ಬರ ಏರಿಕೆ| ಗ್ರಾಮೀಣ ಭಾಗದಲ್ಲಿ ಶೇ.1.8ರಷ್ಟು ರೀಟೇಲ್ ಹಣದುಬ್ಬರ| ನಗರ ಪ್ರದೇಶದಲ್ಲಿ ಶೇ.4.1ರಷ್ಟು ಹಣದುಬ್ಬರ|

ನವದೆಹಲಿ(ಏ.12): ಇಂಧನ ತೈಲ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ.

ಈ ಕುರಿತು ಖುದ್ದು ಸರ್ಕಾರ ಮಾಹಿತಿ ನೀಡಿದ್ದು, ಫೆಬ್ರವರಿಯಲ್ಲಿ ಈ ಹಣದುಬ್ಬರ ಶೇ.2.57ಕ್ಕೆ ಪರಿಷ್ಕೃತಗೊಂಡಿತ್ತು. ಆಹಾರ ದರ ಸೂಚ್ಯಂಕ (CFPI) ಶೇ.0.3ಕ್ಕೆ ಹೆಚ್ಚಾಗಿದೆ ಎಂದು ಹೇಳಿದೆ.

ಗ್ರಾಮೀಣ ಭಾಗದಲ್ಲಿನ ರೀಟೇಲ್‌ ಹಣದುಬ್ಬರ ಶೇ.1.8ರಷ್ಟಿದ್ದು, ನಗರ ಪ್ರದೇಶದಲ್ಲಿ ಶೇ.4.1ರಷ್ಟಿದೆ. ಇಂಧನ ತೈಲ ಹಣದುಬ್ಬರ ಶೇ. 2.42ರಷ್ಟಿದೆ.

ಏ.4ರಂದು ಆರ್‌ಬಿಐ ರೆಪೊ ದರವನ್ನು 25 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆ ಮಾಡಿತ್ತು. ಕೇಂದ್ರೀಯ ಬ್ಯಾಂಕ್ ಗ್ರಾಹಕ ಹಣದುಬ್ಬರವನ್ನು ಶೇ.4ಕ್ಕೆ ನಿಗದಿಪಡಿಸಿದೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.