Asianet Suvarna News Asianet Suvarna News

ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ 15 ತಿಂಗಳ ಕನಿಷ್ಠಕ್ಕೆ, ಒಂದೇ ವರ್ಷದಲ್ಲಿ ಸಿಲಿಂಡರ್‌ ಬೆಲೆ 150 ರೂ. ಏರಿಕೆ!

ಸಿಪಿಐ ಅಧಾರಿತ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ.5.66ಕ್ಕೆ ಇಳಿದಿದೆ. ಇದು 15 ತಿಂಗಳ ಕನಿಷ್ಠ ಎಂದು ಹೇಳಲಾಗಿದ್ದರೂ, ಈ ಒಂದು ವರ್ಷದಲ್ಲಿ ದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ ದರದಲ್ಲಿ ಬರೋಬ್ಬರಿ 150 ರೂಪಾಯಿ ಏರಿಕೆಯಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿದೆ.
 

retail inflation data March Gas cylinder became costlier by Rs 150 in 1 year san
Author
First Published Apr 12, 2023, 7:48 PM IST

ನವದೆಹಲಿ (ಏ.12): ಮಾರ್ಚ್‌ ತಿಂಗಳ ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರದ ಡೇಟಾವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದು ಕಳೆದ 15 ತಿಂಗಳಲ್ಲಿಯೇ ಕನಿಷ್ಠ ಶೇ. 5.66ಕ್ಕೆ ತಲುಪಿದೆ. ತರಕಾರಿ ಬೆಲೆಗಳ ಭಾರಿ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಇದರ ನಡುವೆ 2022ರ ಏಪ್ರಿಲ್‌ 10 ರಿಂದ 2023ರ ಏಪ್ರಿಲ್‌ 10ರವರೆಗಿನ ಅವಧಿಯಲ್ಲಿ ಅಂದರೆ ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ ದರದಲ್ಲಿ 150 ರೂಪಾಯಿ ಏರಿಕೆಯಾಗಿದೆ. ಇಂದು ಗೃಹಬಳಕೆಯ ಸಿಲಿಂಡರ್‌ ದರ 1100 ರೂಪಾಯಿ ಆಗಿದೆ. ಅದಲ್ಲದೆ, ತೊಗರಿಬೇಳೆಯ ದರ ದೆಹಲಿಯಲ್ಲಿ ಒಂದೇ ವರ್ಷದಲ್ಲಿ 103 ರಿಂದ 128 ರೂಪಾಯಿಗೆ ಏರಿಕೆಯಾಗಿದ್ದರೆ, ಮುಂಬೈನಲ್ಲಿ ತೊಗರಿಬೇಳೆಯ ದರ 110 ರೂಪಾಯಿಯಿಂದ 139 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ ಹಾಲು, ಕಾಳುಗಳು ಮತ್ತು ಅಕ್ಕಿಯ ಬೆಲೆ ಕೂಡ ಪ್ರತಿ ಮನೆಯಲ್ಲೂ ಏರಿಕೆಯಾಗಿದೆ. ಆದರೆ, ಪೆಟ್ರೋಲ್‌-ಡೀಸೆಲ್‌ ಮತ್ತು ಸೋಯಾಬಿನ್‌ ಎಣ್ಣೆಯ ವಿಚಾರಕ್ಕೆ ಬಂದರೆ, ಈ ಒಂದು ವರ್ಷದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಇನ್ನು ಗೋಧಿ ಹಿಟ್ಟಿನ ಬೆಲೆ ಒಂದೇ ವರ್ಷದಲ್ಲಿ ನಾಲ್ಕು ರೂಪಾಯಿ ಏರಿಕೆಯಾಗಿದ್ದರೆ, ಅಕ್ಕಿಯ ಬೆಲೆ ದೆಹಲಿಯಲ್ಲಿ ದಾಖಲೆಯ 8 ರೂಪಾಯಿ ಏರಿಕೆ ಕಂಡಿದೆ.ಮುಂಬೈನಲ್ಲಿ ಒಂದು ಲೀಟರ್‌ ಹಾಲಿನ ಬೆಲೆಯಲ್ಲಿ ಬರೋಬ್ಬರಿ ಏಳು ರೂಪಾಯಿ ಏರಿಕೆ ಈ ವರ್ಷದಲ್ಲಿ ದಾಖಲಾಗಿದೆ. ರಾಯಪುರದಲ್ಲಿ ಬರೋಬ್ಬರಿ 9 ರೂಪಾಯಿ ಏರಿಕೆ ಕಂಡಿದೆ. ಈ ಅವಧಿಯಲ್ಲಿ ದೆಹಲಿಯಲ್ಲಿ ಮಾತ್ರವೇ ಹಾಲಿನ ಬೆಲೆಯಲ್ಲಿ ಕನಿಷ್ಠ 2 ರೂಪಾಯಿ ಏರಿಕೆ ಕಂಡಿದೆ.

ಇನ್ನು ಸಕ್ಕರೆ ಬೆಲೆ ಈ ಒಂದು ವರ್ಷದಲ್ಲಿ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿದೆ. ಕೆಲವೊಂದು ಪ್ರದೇಶದಲ್ಲಿ 1 ಅಥವಾ 2 ರೂಪಾಯಿ ವ್ಯತ್ಯಾಸವಾಗಿದೆ. ಸೋಯಾಬಿನ್‌ ಎಣ್ಣೆಯ ದರ ಕಳೆದ ವರ್ಷ ಲೀಟರ್‌ಗೆ 179 ರೂಪಾಯಿ ಇದ್ದರೆ, ಈ ವರ್ಷ 143 ರೂಪಾಯಿಗೆ ಇಳಿದಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸೋಯಾಬಿನ್‌ ಎಣ್ಣೆಯ ಬೆಲೆ ಕಡಿಮೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್‌-ಡೀಸೆಳ್‌ ಬೆಲೆಯಲ್ಲಿ ಏರಿಕೆಯಾಗಿದೆ. 2022ರ ಏಪ್ರಿಲ್‌ 10 ರಿಂದ 2023ರ ಏಪ್ರಿಲ್‌ 10ರವರೆಗಿನ ಅವಧಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ 10 ರಂದು ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 105 ರೂಪಾಯಿ ಆಗಿದ್ದರೆ, ಕಳೆದ ಏಪ್ರಿಲ್‌ 10 ರಂದು 96.72 ರೂಪಾಯಿ ಆಗಿದೆ. ಇನ್ನು ಡೀಸೆಲ್‌ ಕಳೆದ ವರ್ಷ ಲೀಟರ್‌ಗೆ 96.67 ರೂಪಾಯಿ ಆಗಿದ್ದರೆ, ಪ್ರಸ್ತುತ 89.62 ರೂಪಾಯಿ ಆಗಿದೆ. ಉಳಿದಂತೆ ದೇಶದ ಇತರ ಭಾಗಗಳಲ್ಲೂ ಹೆಚ್ಚೂ ಕಡಿಮೆ ಇದೇ ಆಧಾರದಲ್ಲಿ ಇಂಧನ ಬೆಲೆ ಕಡಿಮೆ ಆಗಿದೆ.

ಹಣದುಬ್ಬರವಲ್ಲ, ಹೈಪರ್‌ ಹಣದುಬ್ಬರದತ್ತ ಪಾಕ್‌, ಸಾಲ ತೀರಿಸುವ ಅವಧಿ ವಿಸ್ತರಿಸಿದ ಚೀನಾ!

ಹಣದುಬ್ಬರ ಏರಿಕೆಗೆ ಕಾರಣಗಳೇನು?: ಹಣದುಬ್ಬರದ ಏರಿಕೆ ಎಂದರೆ ನೀವು ಗಳಿಸಿದ ಹಣದ ಮೌಲ್ಯವು ಕಡಿಮೆಯಾಗುತ್ತದೆ. ಉದಾಹರಣೆಗೆ, ಹಣದುಬ್ಬರ ದರವು 7% ಆಗಿದ್ದರೆ, ನೀವು ಗಳಿಸುವ 100 ರೂ.ಗಳು 93 ರೂ. ಮೌಲ್ಯದ್ದು ಎಂದರ್ಥವಾಗುತ್ತದೆ. ಆರ್ಥಿಕತೆಯಲ್ಲಿ ಬೆಲೆಗಳು ಅಥವಾ ಹಣದುಬ್ಬರವನ್ನು ಹೆಚ್ಚಿಸುವ ಹಲವು ಅಂಶಗಳಿವೆ. ಹಣದುಬ್ಬರವು ಸಾಮಾನ್ಯವಾಗಿ ಉತ್ಪಾದನಾ ವೆಚ್ಚಗಳ ಹೆಚ್ಚಳ, ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆಯ ಹೆಚ್ಚಳ ಅಥವಾ ಪೂರೈಕೆಯಲ್ಲಿನ ಇಳಿಕೆಯಿಂದ ಉಂಟಾಗುತ್ತದೆ. 

ಬಡ್ಡಿ ದರ ಏರಿಕೆಗೆ ರಿಸರ್ವ್‌ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್‌

ಹಣದುಬ್ಬರ ಏರಿಕೆಗೆ 6 ಪ್ರಮುಖ ಕಾರಣಗಳಿವೆ:
- ಕೆಲವು ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆಯು ಇದ್ದಕ್ಕಿದ್ದಂತೆ ವೇಗವಾಗಿ ಹೆಚ್ಚಾದಾಗ ಬೇಡಿಕೆ ಹಣದುಬ್ಬರ ಸಂಭವಿಸುತ್ತದೆ.
- ವಸ್ತು ವೆಚ್ಚಗಳು ಹೆಚ್ಚಾದಾಗ ವೆಚ್ಚ-ತಳ್ಳುವ ಹಣದುಬ್ಬರ ಸಂಭವಿಸುತ್ತದೆ. ಅದನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ.
- ಹಣದ ಪೂರೈಕೆಯು ಉತ್ಪಾದನೆಯ ದರಕ್ಕಿಂತ ವೇಗವಾಗಿ ಬೆಳೆದರೆ, ಅದು ಹಣದುಬ್ಬರಕ್ಕೆ ಕಾರಣವಾಗಬಹುದು.
- ಕೆಲವು ಅರ್ಥಶಾಸ್ತ್ರಜ್ಞರು ಸಂಬಳದ ತೀವ್ರ ಹೆಚ್ಚಳವನ್ನು ಹಣದುಬ್ಬರಕ್ಕೆ ಕಾರಣವೆಂದು ಪರಿಗಣಿಸುತ್ತಾರೆ. ಇದು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ.
- ಸರ್ಕಾರದ ನೀತಿಯು ವೆಚ್ಚದ ತಳ್ಳುವಿಕೆ ಅಥವಾ ಬೇಡಿಕೆ-ಪುಲ್ ಹಣದುಬ್ಬರಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಸರಿಯಾದ ನೀತಿ ಅಗತ್ಯ.
- ಅನೇಕ ದೇಶಗಳು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ, ಅಲ್ಲಿ ಡಾಲರ್ ವಿರುದ್ಧ ಕರೆನ್ಸಿ ದುರ್ಬಲಗೊಳ್ಳುವುದು ಹಣದುಬ್ಬರಕ್ಕೆ ಕಾರಣವಾಗುತ್ತದೆ.

Follow Us:
Download App:
  • android
  • ios