ಮೊಸರಿಗೆ 2 ರೂ. GST: ಮಾಲೀಕನಿಗೆ 15 ಸಾವಿರ ದಂಡ!

ಮೊಸರಿಗೂ GST ವಿಧಿಸಿ ದಂಡ ಕಟ್ಟಿದ ಹೊಟೇಲ್| ಮೊಸರಿಗೆ 2 ರೂ. GST ವಿಧಿಸಿದ್ದಕ್ಕೆ 15 ಸಾವಿರ ರೂ. ದಂಡ| ತಮಿಳುನಾಡಿನ ತಿರುವನೇಲಿಯ ಹೋಟಲ್’ಗೆ ದಂಡ| ಗ್ರಾಹಕ ನೀಡಿದ ದೂರಿನ ಆಧಾರದ ಮೇಲೆ ದಂಡ ವಿಧಿಸಿದ GST ಅಧಿಕಾರಿಗಳು|

Restaurant Fined For Charging Rs 2 on Curd In Tamil Nadu

ಚೆನ್ನೈ(ಜು.18): ಕೇಂದ್ರ ಸರ್ಕಾರ GST ಜಾರಿಗೆ ತಂದ ಮೇಲೆ ರೆಸ್ಟೋರೆಂಟ್’ಗಳು GST ಹೆಸರಲ್ಲಿ ಅಧಿಕ ಹಣ ಪೀಕುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಅದರಂತೆ ತಮಿಳುನಾಡಿನ ತಿರುವನೇಲಿಯ ರೆಸ್ಟೋರೆಂಟ್’ವೊಂದು ಮೊಸರಿಗೆ 2 ರೂ. GST ವಿಧಿಸಿ ದಂಡ ಕಟ್ಟಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಹೌದು, ಇಲ್ಲಿನ ರೆಸ್ಟೋರೆಂಟ್’ವೊಂದರಿಂದ ಗ್ರಾಹಕನೋರ್ವ 40 ರೂ. ಮೌಲ್ಯದ ಮೊಸರು ಪಾರ್ಸೆಲ್ ತರಿಸಿದ್ದರು. ಬಿಲ್’ನಲ್ಲಿ 2 ರೂ. GST ಹಾಗೂ 2 ರೂ. ಪಾರ್ಸೆಲ್ ಚಾರ್ಜ್ ಕೂಡ ವಿಧಿಸಲಾಗಿತ್ತು.

ಈ ಕುರಿತು ಗ್ರಾಹಕ ಆಕ್ಷೇಪ ವ್ಯಕ್ತಪಡಿಸಿ GST ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ GST ಸಮಿತಿ, ನವಶ್ಯಕವಾಗಿ ತೆರಿಗೆ ವಿಧಿಸಿದ ಹೊಟೇಲ್’ಗೆ ಬರೋಬ್ಬರಿ 15 ಸಾವಿರ ರೂ. ದಂಡ ವಿಧಿಸಿದೆ.

Latest Videos
Follow Us:
Download App:
  • android
  • ios