ಉಚಿತವಾಗಿ ಆಹಾರ ನೀಡಿದ್ರೆ ಪ್ರಮೋಷನ್ ಮಾಡ್ತೇನೆ… ಆಫರ್ ನೀಡಿದವಳಿಗೆ ರೆಸ್ಟೋರೆಂಟ್ ತಿರುಮಂತ್ರ!
ಒಂದು ವಿಷ್ಯ ಅರೆ ಕ್ಷಣದಲ್ಲಿ ಸದ್ದು ಮಾಡ್ಬೇಕು ಅಂದ್ರೆ ಸಾಮಾಜಿಕ ಜಾಲತಾಣಕ್ಕೆ ಹೋಗ್ಬೇಕು. ಪ್ರಚಾರದ ಮೂಲಕ ಇಲ್ಲಿ ಹಣಗಳಿಸುವವರ ಸಂಖ್ಯೆಯೂ ಇಲ್ಲಿ ಸಾಕಷ್ಟಿದೆ. ಕೆಲವೊಮ್ಮೆ ಈ ಕೆಲಸದಲ್ಲೂ ಮೋಸ, ಅವಮಾನ ಎದುರಿಸಬೇಕಾಗುತ್ತದೆ.
ಇದು ಸಾಮಾಜಿಕ ಜಾಲತಾಣದ ಯುಗ. ಒಂದು ಫೋಟೋ, ಸಣ್ಣ ಶೀರ್ಷಿಕೆ ಅಥವಾ ಅತಿ ಚಿಕ್ಕ ವಿಡಿಯೋ ಕೂಡ ಒಂದು ಉತ್ಪನ್ನವನ್ನು ಕೋಟ್ಯಾಂತರ ಮಂದಿಗೆ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಸಾಮರ್ಥ್ಯ ಹೊಂದಿದೆ. ಹಿಂದೆ ವಸ್ತುವಿನ ಪ್ರಚಾರ ಮಾಡೋದು ಸುಲಭವಾಗಿರಲಿಲ್ಲ. ಟಿವಿ, ರೆಡಿಯೋ ಅಥವಾ ಪೇಪರ್ ನಲ್ಲಿ ಜಾಹೀರಾತು, ಹೋರ್ಡಿಂಗ್‌ಗಳು ಮತ್ತು ಇತರ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿತ್ತು. ನಾನಾ ಕಡೆ ಹಣ ಖರ್ಚು ಮಾಡಬೇಕಾಗಿತ್ತು. ಆದ್ರೀಗ ಅದ್ಯಾವುದರ ಅಗತ್ಯವಿಲ್ಲ. ನಿಮ್ಮ ಸಾಮಾಜಿಕ ಜಾಲತಾಣದ ಖಾತೆಯೇ ಸ್ವಲ್ಪ ಪ್ರಸಿದ್ಧಿಯಾಗಿದ್ರೆ ನೀವು ಹಣ ನೀಡದೆ ನಿಮ್ಮ ಉತ್ಪನ್ನ, ಸೇವೆಯ ಜಾಹೀರಾತು ಮಾಡ್ಬಹುದು. ಒಂದ್ವೇಳೆ ಇದು ಸಾಧ್ಯವಿಲ್ಲ ಎನ್ನುವವರು ಪ್ರಭಾವಿ ವ್ಯಕ್ತಿಯ ಸಹಾಯ ಪಡೆಯುತ್ತಾರೆ. ಅವರಿಗೆ ಹಣ ನೀಡಿ ತಮ್ಮ ಉತ್ಪನ್ನಗಳ ಪ್ರಚಾರ ಮಾಡಿಸ್ತಾರೆ.
ಇನ್ಸ್ಟಾಗ್ರಾಮ್ (Instagram ) ಫೋಟೋ, ರೀಲ್ಸ್, ಯುಟ್ಯೂಬ್ ಶಾರ್ಟ್, ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣ (Social Network) ಖಾತೆಯಲ್ಲಿ ಪ್ರಭಾವಿಗಳು ಒಂದು ಚೆಂದದ ಬಟ್ಟೆ ಧರಿಸಿ ಫೋಟೋ (photo) ಹಾಕಿರ್ತಾರೆ. ಇಲ್ಲವೆ ಕಿವಿಯೋಲೆ ಧರಿಸಿ ನಾಲ್ಕು ಸ್ಟೆಪ್ಸ್ ಹಾಕಿರ್ತಾರೆ. ಶೀರ್ಷಿಕೆಯಲ್ಲಿ ಈ ಉತ್ಪನ್ನ ಯಾರದ್ದು ಎಂಬುದನ್ನು ಹ್ಯಾಶ್ಟ್ಯಾಗ್ ಮೂಲಕ ಹಾಕಿರ್ತಾರೆ. ಅಷ್ಟೆ. ಉತ್ಪನ್ನ, ವಸ್ತುವಿನ ಜಾಹೀರಾತು ಆಗಿರುತ್ತೆ.
ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ, ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಭರ್ಜರಿ ಭೋಜನಕ್ಕೆ ಖರ್ಚು ಮಾಡಿರೋ ಹಣ ಇಷ್ಟೊಂದಾ?
ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾದಂತೆ ಕಂಪನಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ವೆ. ಅದೇ ಸ್ವಲ್ಪ ಕಡಿಮೆ ಇದ್ದಾಗ, ನೀವೇ ಕೆಲ ಕಂಪನಿಗೆ ಆಫರ್ ನೀಡಬೇಕಾಗುತ್ತದೆ. ಕಂಪನಿಗಳು ಜಾಹೀರಾತಿನ ಆಫರ್ ನೀಡಿದಾಗ ನೀವು ಡಿಮ್ಯಾಂಡ್ ಮಾಡಬಹುದು. ಅದೇ ನೀವು ಅವರ ಬಳಿ ಹೋದಾಗ ಅವರು ಹೇಳುವ ಕೆಲ ರೂಲ್ಸ್ ಪಾಲಿಸಬೇಕಾಗುತ್ತದೆ. ಇಲ್ಲೊಬ್ಬ ಮಹಿಳೆ ಹೊಟೇಲ್ ಒಂದಕ್ಕೆ ಪ್ರಚಾರದ ಆಫರ್ ನೀಡಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾಳೆ.
ಘಟನೆ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಲಕ್ಕಿ ರಾಮೆನ್ ಮತ್ತು ಸುಶಿ ಎಂಬ ಹೆಸರಿನ ಪ್ರಸಿದ್ಧ ರೆಸ್ಟೋರೆಂಟ್ ಗೆ ಪ್ರಭಾವಿ ಮಹಿಳೆ ಆಫರ್ ನೀಡಿದ್ದಳು. ನಿಮ್ಮ ಹೊಟೇಲ್ ಪ್ರಚಾರವನ್ನು ನಾನು ಮಾಡ್ತೇನೆ. ಆದ್ರೆ ಅದರ ಬದಲಾಗಿ ನನಗೆ ಉಚಿತ ಆಹಾರ ನೀಡಬೇಕೆಂದು ಆಕೆ ಇ ಮೇಲ್ ಮಾಡಿದ್ದಳಂತೆ. ಪ್ರಭಾವಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾಳೆ. ಹಾಗಾಗಿ ತನ್ನ ಖಾತೆಯಲ್ಲಿ ನಿಮ್ಮ ಹೊಟೇಲ್ ಬಗ್ಗೆ ಪ್ರಚಾರ ಮಾಡಿದಲ್ಲಿ ಹೆಚ್ಚಿನ ಗ್ರಾಹಕರು ಹೊಟೇಲ್ ಗೆ ಬರ್ತಾರೆ ಎಂಬುದು ಆಕೆಯ ಮಾತಾಗಿತ್ತು. ಹೊಟೇಲ್ ತನ್ನನ್ನು ಆದಷ್ಟು ಬೇಗ ಸಂಪರ್ಕಿಸುತ್ತದೆ, ಉಚಿತ ಆಹಾರ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಮಹಿಳೆ ಇದ್ದಳು. ಆದ್ರೆ ಎಲ್ಲವೂ ತಲೆಕೆಳಗಾಗಿದೆ.
ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ
ಪ್ರಭಾವಿ ಕಳುಹಿಸಿದ ಆಫರ್ ಸ್ಕ್ರೀನ್ ಶಾಟ್ (Screen Shot) ತೆಗೆದ ರೆಸ್ಟೋರೆಂಟ್ ಅದನ್ನೇ ಬಂಡವಾಳ ಮಾಡಿಕೊಂಡಿದೆ. ಸ್ಕ್ರೀನ್ ಶಾಟ್ ಅನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದೆ. ಈ ಮೂಲಕ ಪ್ರಭಾವಿಗೆ ಅವಮಾನ ಮಾಡಿದೆ. ನಾವು ಪ್ರಸಿದ್ಧಿ ಪಡೆದಿದ್ದೇವೆ. ನಮಗೆ ನಿಮ್ಮ ಪ್ರಚಾರದ ಅಗತ್ಯವಿಲ್ಲ ಎಂದು ರೆಸ್ಟೋರೆಂಟ್ ಹೇಳಿದೆ. ನಮ್ಮ ಗ್ರಾಹಕರಿಗೆ ಉತ್ತಮ ಆಹಾರವನ್ನು ನೀಡಿ ನಾವು ಶುಲ್ಕ ಪಡೆಯುತ್ತೇವೆಯೇ ವಿನಃ ಪ್ರಭಾವಿಗಳಿಗೆ ಉಚಿತ ಆಹಾರ ನೀಡಿ ಪ್ರಚಾರ ನಡೆಸುವ ಅಗತ್ಯವಿಲ್ಲ ಎಂದಿದೆ. ಇಲ್ಲಿಂದ ಹೋಗಿ, ನಮಗೆ ಯಾವುದೇ ಪ್ರಚಾರ, ಪ್ರಭಾವಿಗಳು, ಬ್ಲೂ ಟಿಕ್ ಅಗತ್ಯವಿಲ್ಲ ಎಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೆಸ್ಟೋರೆಂಟ್ ಪೋಸ್ಟ್ ವೈರಲ್ ಆಗಿದೆ. ಪ್ರಭಾವಿಗೆ ಇದ್ರಿಂದ ಶಾಕ್ ಆಗಿದ್ರೆ, ಬಳಕೆದಾರರು ರೆಸ್ಟೋರೆಂಟ್ ಕೆಲಸವನ್ನು ಮೆಚ್ಚಿದ್ದಾರೆ.