2,000 ರೂಪಾಯಿ ಮೌಲ್ಯದ ನೋಟು ಮುದ್ರಣ ಬಹುತೇಕ ಬಂದ್‌!: ಮುಂದೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Jan 2019, 7:42 AM IST
Reserve Bank of India has scaled down printing of Rs 2000 note to minimum
Highlights

ನಿಧಾನವಾಗಿ ಚಲಾವಣೆ ಕಡಿಮೆಗೊಳಿಸುವ ಉದ್ದೇಶ| ಕಾಳಧನಿಕ ಸ್ನೇಹಿಯಾಗಿರುವ ಈ ಬೃಹತ್‌ ಮೊತ್ತದ ನೋಟುಗಳು

ನವದೆಹಲಿ[ಜ.04]: ಅಪನಗದೀಗರಣ ಪ್ರಕ್ರಿಯೆಯ ಸಂದರ್ಭದಲ್ಲಿ ಚಲಾವಣೆಗೆ ಬಂದಿದ್ದ 2 ಸಾವಿರ ರು. ಮೌಲ್ಯದ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಿದೆ. ಹಾಗೆಂದು 2 ಸಾವಿರ ರು. ಮೌಲ್ಯದ ನೋಟುಗಳ ಚಲಾವಣೆ ನಿಲ್ಲುವುದಿಲ್ಲ. ಇದರ ಬದಲಾಗಿ ಇವುಗಳ ಚಲಾವಣೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ.

2 ಸಾವಿರ ರು.ನಷ್ಟುದೊಡ್ಡ ಮೌಲ್ಯದ ನೋಟುಗಳನ್ನು ಅಪನಗದೀಕರಣದಿಂದ ಆದ ಕರೆನ್ಸಿ ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತರಲಾಗಿತ್ತು. ಆದರೆ ಬರುಬರುತ್ತ ಇವು ಕಾಳಧನಿಕ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣ ಆರಾಮವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಎಂಬ ಕಾರಣಕ್ಕೆ ಕಾಳಧನಿಕರು ಈ ನೋಟು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಗುಮಾನಿ ಮೋದಿ ಸರ್ಕಾರಕ್ಕೆ ಇದೆ.

ಈ ಹಿನ್ನೆಲೆಯಲ್ಲಿ 2 ಸಾವಿರ ರು. ಮೌಲ್ಯದ ನೋಟುಗಳ ಮುದ್ರಣವನ್ನು ಕಡಿತಗೊಳಿಸಿ, ಬಳಿಕ ನಿಧಾನವಾಗಿ ಅವುಗಳನ್ನು ಚಲಾವಣೆಯಿಂದ ಹಿಂಪಡೆದು, ಕಮ್ಮಿ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ಪ್ರಿಂಟ್‌’ ವೆಬ್‌ಸೈಟ್‌ ವರದಿ ಮಾಡಿದೆ.

ಮಾಚ್‌ರ್‍ 2018ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಚಲಾವಣೆಯಲ್ಲಿ ಇದ್ದ 18.03 ಲಕ್ಷ ಕೋಟಿ ರು. ಮೌಲ್ಯದ ಕರೆನ್ಸಿಯಲ್ಲಿ 2 ಸಾವಿರ ರು. ಮೌಲ್ಯದ ನೋಟುಗಳ ಪಾಲು 6.73 ಲಕ್ಷ ಕೋಟಿ ರುಪಾಯಿ. ಅಂದರೆ ಪ್ರತಿಶತ 37ರಷ್ಟು. ಇದರ ನಂತರದ ಸ್ಥಾನ 500 ರು. ಮೌಲ್ಯದ ನೋಟಿದ್ದು. 7.73 ಲಕ್ಷ ಕೋಟಿ ರು.ನಷ್ಟು500 ರು. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ.

loader