ಮತ್ತೆ ಬಡ್ಡಿ ಏರಿಕೆ ಬರೆ: ಸತತ 5ನೇ ಬಾರಿ ರೆಪೋ ದರ ಹೆಚ್ಚಳ

ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಾಲದ ಮೇಲಿನ ಬಡ್ಡಿ ದರಗಳನ್ನು 35 ಮೂಲ ಅಂಕಗಳಷ್ಟು, ಅಂದರೆ ಶೇ.0.35ನಷ್ಟು ಏರಿಕೆ ಮಾಡಿದೆ. ಅದರಿಂದಾಗಿ ಗೃಹ, ವಾಹನ ಸಾಲಗಳೂ ಸೇರಿದಂತೆ ಬೇರೆ ಬೇರೆ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಇನ್ನಷ್ಟು ಏರಿಕೆಯಾಗಲಿವೆ. 

Reserve Bank Hikes Repo Rate By 35 Basis Points Car Home Loan Emis May Go Up gvd

ಮುಂಬೈ (ಡಿ.08): ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಾಲದ ಮೇಲಿನ ಬಡ್ಡಿ ದರಗಳನ್ನು 35 ಮೂಲ ಅಂಕಗಳಷ್ಟು, ಅಂದರೆ ಶೇ.0.35ನಷ್ಟು ಏರಿಕೆ ಮಾಡಿದೆ. ಅದರಿಂದಾಗಿ ಗೃಹ, ವಾಹನ ಸಾಲಗಳೂ ಸೇರಿದಂತೆ ಬೇರೆ ಬೇರೆ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಇನ್ನಷ್ಟು ಏರಿಕೆಯಾಗಲಿವೆ. ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಕಳೆದ 10 ತಿಂಗಳಿಂದ ಸತತವಾಗಿ ಆರ್‌ಬಿಐ ರೆಪೋ ದರ ಏರಿಕೆ ಮಾಡುತ್ತಿದೆ. ಇದೀಗ 5ನೇ ಬಾರಿ ರೆಪೋ ದರ ಏರಿಕೆ ಮಾಡಿದೆ. ಎರಡು ತಿಂಗಳ ಹಿಂದೆ ಶೇ.0.5ರಷ್ಟು ಬಡ್ಡಿ ದರ ಏರಿಕೆ ಮಾಡಿತ್ತು. ಈಗಿನ ಏರಿಕೆಯೊಂದಿಗೆ 10 ತಿಂಗಳಿನಲ್ಲಿ ರೆಪೋ ದರ ಶೇ.2.25ರಷ್ಟು ಏರಿಕೆಯಾದಂತಾಗಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಕಳೆದ ಮೂರು ದಿನಗಳಿಂದ ಸತತ ಸಭೆ ನಡೆಸಿ ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ)ವನ್ನು ಶೇ.6.25ಕ್ಕೆ ಏರಿಸುವ ನಿರ್ಧಾರವನ್ನು 5:1ರ ಬಹುಮತದಲ್ಲಿ ಬುಧವಾರ ಪ್ರಕಟಿಸಿತು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ರೆಪೋ ದರ ಏರಿಕೆ ನಿರ್ಧಾರ ಪ್ರಕಟಿಸಿದರು.

Grama Vastavya: ಡಿ.17ರಂದು ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯ?

‘ದೇಶದ ಅಭಿವೃದ್ಧಿ ದರ ಏರಿಕೆಯಾಗುತ್ತಿದೆ. ಹಣದುಬ್ಬರ ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ’ ಎಂದು ಶಕ್ತಿಕಾಂತ್‌ ದಾಸ್‌ ಹೇಳಿದರು. ಪ್ರಸಕ್ತ ಹಣಕಾಸು ವರ್ಷದ ಕೊನೆಯವರೆಗೂ (ಮಾರ್ಚ್‌ ಅಂತ್ಯ) ಹಣದುಬ್ಬರ ಶೇ.6.7ರಷ್ಟುಇರುವ ಸಾಧ್ಯತೆಯಿದ್ದು, ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ.6.8ರಷ್ಟುಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಇದೇ ವೇಳೆ 2022-23ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.8ರ ದರದಲ್ಲಿ ಬೆಳವಣಿಗೆ ಹೊಂದಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದೆ. ಇದು ಈ ಹಿಂದೆ ಆರ್‌ಬಿಐ ಅಂದಾಜಿಸಿದ್ದ ಶೇ.7ರ ಅಭಿವೃದ್ಧಿ ದರಕ್ಕಿಂತ ಶೇ.0.2ರಷ್ಟು ಕಡಿಮೆಯಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಉಂಟಾಗುತ್ತಿರುವ ಏರಿಳಿತ ಹಾಗೂ ಇನ್ನೂ ಮುಂದುವರೆದಿರುವ ಭೌಗೋಳಿಕ-ರಾಜಕೀಯ ಅಸ್ಥಿರತೆಗಳಿಂದಾಗಿ ದೇಶದ ಆರ್ಥಿಕಾಭಿವೃದ್ಧಿಯ ವೇಗ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೂ ಭಾರತವು ಈ ವರ್ಷ ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರಲಿದೆ ಎಂದು ಆರ್‌ಬಿಐ ಹೇಳಿದೆ.

ಮತದಾರರ ಹೆಸರು ಎಲ್ಲಿ ಡಿಲೀಟ್‌ ಆಗಿದೆ, ಎಲ್ಲಿ ಸೇರ್ಪಡೆ ಆಗಿದೆ ತೋರಿಸಿ: ಮುನಿರತ್ನ

ಇಎಂಐ ಎಷ್ಟು ಹೆಚ್ಚಾಗುತ್ತೆ?: 2022ರ ಮಾರ್ಚ್‌ನಲ್ಲಿ 20 ವರ್ಷ ಅವಧಿಗೆ 30 ಲಕ್ಷ ರು. ಪಡೆದಿದ್ದಿರಿ ಎಂದಿಟ್ಟುಕೊಳ್ಳಿ. ಆಗ ಬಡ್ಡಿ ದರ 7% ಇತ್ತು. ಅದರಂತೆ 23,258 ರು. ಇಎಂಐ ಪಾವತಿಸಿದರೆ ಸಾಕಿತ್ತು. ಕಳೆದ 10 ತಿಂಗಳಲ್ಲಿ ಬಡ್ಡಿ ದರ 2.25%ರಷ್ಟು ಹೆಚ್ಚಾಗಿ 9.25%ಕ್ಕೆ ತಲುಪಿದೆ. ಹೀಗಾಗಿ ಇಎಂಐ ಮೊತ್ತ 27,387 ರು.ಗೆ ಏರಲಿದೆ. ಇದರಿಂದ 10 ತಿಂಗಳಲ್ಲಿ ಇಎಂಐ 4129 ರು.ನಷ್ಟು ದುಬಾರಿಯಾದಂತೆ.

Latest Videos
Follow Us:
Download App:
  • android
  • ios